ಕೊರೋನಾ ಎಫೆಕ್ಟ್​; ಚೇತರಿಸಿಕೊಳ್ಳದ ಷೇರುಪೇಟೆ, ಸೆನ್ಸೆಕ್ಸ್​ 1800 ಮತ್ತು ನಿಫ್ಟಿ 500 ಅಂಕ ಕುಸಿತ

ವಹಿವಾಟು ಸೂಚ್ಯಾಂಕದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಪ್ರಸ್ತುತ ದಿವಾಳಿಯಾಗಿರುವ YES ಬ್ಯಾಂಕ್ ಲಾಭ ಗಳಿಸಿದ್ದರೆ, ಹೆಡಿಎಫ್​ಸಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಸನ್ ಫಾರ್ಮಾ, ಜೆಎಸ್​ಪಿಎಲ್, ಮ್ಯಾಕ್ಸ್ ಫೈನಾನ್ಷಿಯಲ್ ಮತ್ತು ಡಿಎಲ್ಎಫ್ ನಷ್ಟ ಅನುಭವಿಸಿದೆ.

ಮುಂಬೈ ಷೇರುಪೇಟೆ.

ಮುಂಬೈ ಷೇರುಪೇಟೆ.

  • Share this:
ಬೆಂಗಳೂರು (ಮಾರ್ಚ್ 16); ಫೆಡ್ ಕಡಿತದ ಹೊರತಾಗಿಯೂ ಭಾರತದ ಷೇರುಪೇಟೆ ಮಾನದಂಡ ಸೂಚ್ಯಾಂಕ ನಿರಂತರವಾಗಿ ಕುಸಿಯುತ್ತಿದ್ದು, ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,800 ಅಂಕಗಳು ಕುಸಿದಿದ್ದರೆ, ಸಿಫ್ಟಿ 500 ಅಂಕಗಳು ಕುಸಿತ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.4.46 ಅಂದರೆ 1520.53 ಅಂಕಗಳು ಕುಸಿತ ಕಂಡಿದ್ದರೆ, ನಿಫ್ಟಿ ಶೇ.4.43ರ ಸರಾಸರಿಯಲ್ಲಿ 440.60 ಅಂಕಗಳು ಕಡಿತವಾಗಿ 9514.60ಕ್ಕೆ ಇಳಿದಿದೆ. ಅಲ್ಲದೆ, 130 ಷೇರುಗಳು ಮಾತ್ರ ಮುಂದುವರೆದಿದ್ದು, 730 ಷೇರುಗಳು ಕುಸಿದಿದೆ.

ವಹಿವಾಟು ಸೂಚ್ಯಾಂಕದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಪ್ರಸ್ತುತ ದಿವಾಳಿಯಾಗಿರುವ YES ಬ್ಯಾಂಕ್ ಲಾಭ ಗಳಿಸಿದ್ದರೆ, ಹೆಡಿಎಫ್​ಸಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಸನ್ ಫಾರ್ಮಾ, ಜೆಎಸ್​ಪಿಎಲ್, ಮ್ಯಾಕ್ಸ್ ಫೈನಾನ್ಷಿಯಲ್ ಮತ್ತು ಡಿಎಲ್ಎಫ್ ನಷ್ಟ ಅನುಭವಿಸಿದೆ.

ಯು.ಎಸ್. ಫೆಡರಲ್ ರಿಸರ್ವ್ ದರಗಳನ್ನು ಶೂನ್ಯಕ್ಕೆ ಇಳಿಸಿತು, ಬಾಂಡ್ ಖರೀದಿಯನ್ನು ಪುನರಾರಂಭಿಸಿತು. ಅಲ್ಲದೆ, ಡಾಲರ್ ಸಾಲದಲ್ಲಿ ದ್ರವ್ಯತೆಯನ್ನು ಖಚಿತಪಡಿಸಿಕೊಳ್ಳಲು ಇತರ ಕೇಂದ್ರ ಬ್ಯಾಂಕುಗಳನ್ನು ಸೇರಿಕೊಂಡಿತು.

ಸಿಂಗಪುರದಲ್ಲಿ ಯು.ಎಸ್. ಸ್ಟಾಕ್ ಫ್ಯೂಚರ್ಗಳು ಶೇ.4.8 ರಷ್ಟು ಕುಸಿತ ಕಂಡಿದ್ದರೆ, ಯೆನ್ ವಿರುದ್ಧ ಡಾಲರ್ ಶೇ 2ರಷ್ಟು ಮೌಲ್ಯ ಕಳೆದುಕೊಂಡಿದೆ.

ವ್ಯಾಪಾರದ ಮೊದಲ ತ್ರೈಮಾಸಿಕದಲ್ಲಿ ಆಸ್ಟ್ರೇಲಿಯಾದ ಬೆಂಚ್​ ಮಾರ್ಕ್​ ಸ್ಟಾಕ್ ಸೂಚ್ಯಂಕವು ಶೇ 7 ರಷ್ಟು ಕುಸಿದಿದೆ, ಜಪಾನ್ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಸೂಚ್ಯಂಕವು ಶೇ.0.5 ರಷ್ಟು ಕುಸಿದಿದ್ದು 2017ರ ನಂತರ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಇನ್ನೂ ಚೀನಾದಲ್ಲಿ ಜನವರಿ-ಫೆಬ್ರವರಿಯಿಂದ ಈವರೆಗಿನ ಕೈಗಾರಿಕಾ ಉತ್ಪಾದನೆಯು ಶೇ 13.5 ರಷ್ಟು ಮತ್ತು ಚಿಲ್ಲರೆ ಮಾರಾಟವು ಶೇ.20.5 ರಷ್ಟು ಕುಸಿದಿದೆ.

ಕೊರೋನಾ ಸೋಂಕು ಹರಡುವ ಭೀತಿಯಿಂದ ಕಳೆದ ವಾರ, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಪ್ರಯಾಣವನ್ನು ನಿರ್ಬಂಧಿಸುವ ಕ್ರಮದಿಂದ ಹೂಡಿಕೆದಾರರು ಹಣ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ವಿಶ್ವ ಷೇರು ಮಾರುಕಟ್ಟೆ ಈ ಪ್ರಮಾಣದ ಕುಸಿತ ಅನುಭವಿಸಿದೆ ಎನ್ನಲಾಗುತ್ತಿದೆ.

ಭಾರತೀಯ ಷೇರು ಮಾರುಕಟ್ಟೆಯೂ ಸಹ ಕಳೆದ ಗುರುವಾರ ಕರಡಿ ಕುಣಿತ ಕಂಡಿತ್ತು. ಆದರೆ, ವೈರಸ್ ಪರಿಣಾಮವನ್ನು ಒಳಗೊಂಡಿರುವ ಸಂಘಟಿತ ಕ್ರಮಗಳ ಭರವಸೆಯ ಕಾರಣದಿಂದಾಗಿ ಶುಕ್ರವಾರ ಚೇತರಿಸಿಕೊಂಡಿತು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಶುಕ್ರವಾರ ಶೇ.3.81ಹೆಚ್ಚಾಗಿತ್ತು. ಬಿಎಸ್ಇ ಸೆನ್ಸೆಕ್ಸ್ ಶೇ.4 ರಷ್ಟು ಏರಿಕೆಯಾಗಿತ್ತು. ಆದಾಗ್ಯೂ, ಎರಡೂ ಸೂಚ್ಯಂಕಗಳು ಕಳೆದ ವಾರ ಶೇ.9 ಕ್ಕಿಂತ ಹೆಚ್ಚು ಕುಸಿದಿತ್ತು.

ಇದನ್ನೂ ಓದಿ : ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೇರಿಕೆ; ವಿಶ್ವಾದ್ಯಂತ 6,515 ಬಲಿ
First published: