ಕೊರೋನಾ ಎಫೆಕ್ಟ್‌; ನಿರಂತರ ಕುಸಿತದ ಹಾದಿಯಲ್ಲಿ ವಿಶ್ವ ಷೇರುಪೇಟೆ, ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ

ಬಜಾಜ್ ಫೈನಾನ್ಸ್ ಶೇ 12 ರಷ್ಟು ಏರಿಕೆ ಕಂಡಿದ್ದು, ಎಚ್‌ಸಿಎಲ್ ಟೆಕ್, ಇಂಡಸ್‌ಇಂಡ್ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಎಂ ಆಂಡ್ ಎಂ ನಂತರದ ಸ್ಥಾನದಲ್ಲಿದ್ದರೆ, ಪವರ್ ಗ್ರಿಡ್ ಮತ್ತು ಎನ್‌ಟಿಪಿಸಿ ಮಾತ್ರ ಲಾಭ ಗಳಿಸಿವೆ.

ಮುಂಬೈ ಷೇರುಪೇಟೆ.

ಮುಂಬೈ ಷೇರುಪೇಟೆ.

  • Share this:
ಮುಂಬೈ (ಮಾರ್ಚ್‌ 19); ಕೊರೋನಾ ವೈರಸ್‌ ನಿಂದಾಗಿ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದ್ದು ಇಂದೂ ಸಹ ಭಾರತೀಯ ಷೇರುಪೇಟೆ ಕರಡಿ ಕುಣಿತ ಪ್ರವೇಶಿಸಿದೆ. ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,500 ಪಾಯಿಂಟ್‌ಗಳನ್ನು ಕುಸಿಯಿತು ಮತ್ತು ನಿಫ್ಟಿ 7,900ಕ್ಕೆ ಕುಸಿದಿದೆ. ಇನ್ನೂ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು 60 ಪೈಸೆ ಇಳಿಕೆಯಾಗಿ 74.87 ಕ್ಕೆ ತಲುಪಿದೆ.

ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಶೇ.6.28 ಸರಾಸರಿಯಲ್ಲಿ 1812.19 ಅಂಕಗಳನ್ನು ಕಳೆದುಕೊಂಡರೆ, ಎನ್‌ಎಸ್‌ಇ ನಿಫ್ಟಿ ನಿಫ್ಟಿ ಆರಂಭಿಕ ಸೆಷನ್‌ನಲ್ಲಿ 7,900 ಕ್ಕಿಂತಲೂ ಇಳಿದ ನಂತರ ಶೇ 6.15 ರಷ್ಟು ವಹಿವಾಟು ನಡೆಸುತ್ತಿದೆ.

ಬಜಾಜ್ ಫೈನಾನ್ಸ್ ಶೇ 12 ರಷ್ಟು ಏರಿಕೆ ಕಂಡಿದ್ದು, ಎಚ್‌ಸಿಎಲ್ ಟೆಕ್, ಇಂಡಸ್‌ಇಂಡ್ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಎಂ ಆಂಡ್ ಎಂ ನಂತರದ ಸ್ಥಾನದಲ್ಲಿದ್ದರೆ, ಪವರ್ ಗ್ರಿಡ್ ಮತ್ತು ಎನ್‌ಟಿಪಿಸಿ ಮಾತ್ರ ಲಾಭ ಗಳಿಸಿವೆ.

ವ್ಯಾಪಾರಿಗಳ ಪ್ರಕಾರ, ಓ ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ (ಇಸಿಬಿ) ಯುರೋ 750 ಬಿಲಿಯನ್ ಉದ್ದೀಪನ ಪ್ಯಾಕೇಜ್ ಹೂಡಿಕೆದಾರರ ಮನೋಭಾವವನ್ನು ಹೆಚ್ಚಿಸುವಲ್ಲಿ ವಿಫಲವಾಗಿದೆ. ಇದು ಆರ್ಥಿಕ ಹಿಂಜರಿತದ ಬಗ್ಗೆ ಈಗಾಗಲೇ ಉತ್ತುಂಗಕ್ಕೇರಿರುವ ಭಯವನ್ನು ಹುಟ್ಟುಹಾಕಿದೆ.

ಹೊಸ ಕರೋನವೈರಸ್ (ಕೋವಿಡ್ -19) ಸಾಂಕ್ರಾಮಿಕದ ಮಧ್ಯೆ ಹೆಚ್ಚುತ್ತಿರುವ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಇಸಿಬಿ ಬುಧವಾರ ಸರ್ಕಾರಿ ಮತ್ತು ಕಾರ್ಪೊರೇಟ್ ಬಾಂಡ್‌ಗಳನ್ನು ಖರೀದಿಸಲು ಯುರೋ 750 ಬಿಲಿಯನ್ ಅಚ್ಚರಿಯ ಯೋಜನೆಯನ್ನು ಪ್ರಕಟಿಸಿದೆ.

ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೊದಲ್ಲಿನ ಬೋರ್ಸ್‌ಗಳು ಸಹ ಗುರುವಾರ ಶೇಕಡಾ 8 ರಷ್ಟು ಕುಸಿದವು.

ಜಾಗತಿಕ ಕೋವಿಡ್ -19 ಸೋಂಕುಗಳ ಸಂಖ್ಯೆ 2,00,000 ದಾಟಿದೆ. ವಿಶ್ವಾದ್ಯಂತದ 8,000ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ದೇಶದ ವಿವಿಧ ಭಾಗಗಳಿಂದ 18 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಲ್ಲಿ ಪ್ರಕರಣಗಳು ಗುರುವಾರ 169 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಭೀತಿ; ಇಂದಿನಿಂದಲೇ ಬೆಂಗಳೂರು ಏರ್​ಪೋರ್ಟ್​ನಲ್ಲಿ ಸ್ಟ್ಯಾಂಪಿಂಗ್ ಜಾರಿ
First published: