ಲಾಕ್ ಡೌನ್ ವೇಳೆ ಹೆಚ್ಚಿನ ದರಕ್ಕೆ ವಸ್ತುಗಳ ಮಾರಾಟ - ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಹಲವೆಡೆ ದಾಳಿ

ಗಾಂಧಿ ಬಜಾರ್ ಸೇರಿದಂತೆ ನಗರದ ಹಲವು ಭಾಗಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅಂಗಡಿಗಳಲ್ಲಿ ತಪಾಸಣೆ ನಡೆಸಿದರು.

ಅಂಗಡಿಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು

ಅಂಗಡಿಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು

  • Share this:
ಶಿವಮೊಗ್ಗ(ಮೇ.01): ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅಗತ್ಯ ವಸ್ತುಗಳನ್ನು ನಿಗಧಿತ ಅವಧಿಯಲ್ಲೇ ಖರೀದಿ ಮಾಡಬೇಕು. ಇಂತಹ ಸಮಯದಲ್ಲಿ ಕೆಲವು ವ್ಯಾಪಾರಸ್ಥರು ಜನರ ಅಗತ್ಯತೆ ಅರಿತು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಪ್ರಸಂಗಗಳ ನಡೆದಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು  ಬಂದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.

ಗಾಂಧಿ ಬಜಾರ್ ಸೇರಿದಂತೆ ನಗರದ ಹಲವು ಭಾಗಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಅಂಗಡಿಗಳಲ್ಲಿ ತಪಾಸಣೆ ನಡೆಸಿದರು. ಸಿಮೆಂಟ್, ಸ್ಟೀಲ್, ಹಾರ್ಡ್​​​ವೇರ್​ ಅಂಗಡಿಗಳು, ದಿನ ಬಳಕೆ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಪರೀಕ್ಷಾರ್ಥ ಖರೀದಿ ನಡೆಸಿದ್ದಾರೆ.

ಅಧಿಕಾರಿಗಳು ವಸ್ತುಗಳನ್ನು ಖರೀದಿ ಮಾಡಿದ  ಸಮಯದಲ್ಲಿ ನಗದು ಬಿಲ್​​ ನೀಡದೆ, ನೇರವಾಗಿ ನಗದು ಸಂಗ್ರಹಿಸಿದ ಪ್ರಕರಣಗಳು ನಡೆದಿವೆ. ಅಂತಹ ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ.

ಶಿವಮೊಗ್ಗ ನಗರ, ಆಯನೂರು ಹಾಗೂ ಸಾಗರ ಸುತ್ತಮುತ್ತ 10ಕ್ಕೂ ಅಧಿಕ ಮಳಿಗೆಗಳಿಗೆ ಭೇಟಿ ಕೊಟ್ಟ  ವಾಣಿಜ್ಯ ತೆರಿಗೆ ಅಧಿಕಾರಿಗಳು, ಅಲ್ಲಿ ಕುಲಂಕಷವಾಗಿ ಪರಿಶೀಲನೆ ಜೊತೆಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ನಗದು ಬಿಲ್ ನೀಡದೇ ಇರುವಂತ ಅಂಗಡಿ ಮಾಲೀಕರ ವಿರುದ್ಧ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ಪ್ರಕರಣ 67 (4) ಅಡಿ ಪ್ರಕರಣ ದಾಖಲಿಸಿದ್ದಾರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಸೂಚನೆಯನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ :  ಸರಳವಾಗಿ ಗೃಹಪ್ರವೇಶ ಮಾಡಿ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ ಉದ್ಯಮಿ..!

ನಗದು ಬಿಲ್​​ ನೀಡದ ಪ್ರಕರಣಗಳಲ್ಲಿ ಸಾರ್ವನಿಕರು ದೂರು ನೀಡಬಹುದಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
First published: