HOME » NEWS » Coronavirus-latest-news » SELLING ILLEGAL LIQUOR WITH PISTOLS ACCUSED ARRESTED FOREST DEPARTMENT IN KALBURGI HK

ಪಿಸ್ತೂಲ್ ಇಟ್ಟುಕೊಂಡು ಅಕ್ರಮ ಮದ್ಯ ಮಾರಾಟ ; ಓರ್ವನನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಬಂಧಿತನಿಂದ ಸ್ಕಾರ್ಪಿಯೋ ವಾಹನ, ಅಕ್ರಮ ಮದ್ಯ, ಪಿಸ್ತೂಲ್ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

news18-kannada
Updated:May 24, 2020, 3:03 PM IST
ಪಿಸ್ತೂಲ್ ಇಟ್ಟುಕೊಂಡು ಅಕ್ರಮ ಮದ್ಯ ಮಾರಾಟ ; ಓರ್ವನನ್ನು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಆರೋಪಿ
  • Share this:
ಕಲಬುರ್ಗಿ(ಮೇ.24): ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧಿಸಿರುವ ಪೊಲೀಸರು, ಒಂದು ಪಿಸ್ತೂಲ್, ಜೀವಂತ ಗುಂಡು ವಶಪಡಿಸಿಕೊಂಡ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ನಗರದ ಸ್ಟೇಷನ್ ಬಜಾರ್ ಏರಿಯಾದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ದಾಳಿ ವೇಳೆ 17 ಲೀಟರ್ ಲಿಕ್ಕರ್, 70 ಲೀಟರ್ ಬಿಯರ್ ಪತ್ತೆಯಾಗಿದೆ. ಅಲ್ಲದೆ ಆರೋಪಿ ಬಳಿ ಒಂದು ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳು ಪತ್ತೆಯಾಗಿವೆ. ಬಂಧಿತನನ್ನು ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದ ದಯಾನಂದ ಹಾಸು ಎಂದು ಗುರುತಿಸಲಾಗಿದೆ.

ಬಂಧಿತನಿಂದ ಸ್ಕಾರ್ಪಿಯೋ ವಾಹನ, ಅಕ್ರಮ ಮದ್ಯ, ಪಿಸ್ತೂಲ್ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಂದ ಪತಿ :

ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಂದ ಪತಿ ಪರಾರಿಯಾದ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಶ್ರೀದೇವಿ(45) ಎಂದು ಗುರುತಿಸಲಾಗಿದೆ. ಪತಿ ಮಲ್ಲಪ್ಪ ಪೂಜಾರಿ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಕುಡಿದು ಬಂದು ಮಲ್ಲಪ್ಪ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ :  ಸರ್ಕಾರಕ್ಕೆ ಬೇಕಿದ್ರೆ ಚೆಕ್ ಕೊಡುತ್ತೇನೆ ಎಂದ ಡಿಕೆಶಿ ; ಅವರ ಚೆಕ್ ನಡೆಯೋಲ್ಲ ಎಂದು ಸಚಿವ ಬೊಮ್ಮಾಯಿ ತಿರುಗೇಟು
First published: May 24, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories