ಕರ್ನಾಟಕದಲ್ಲೇನೋ ಸಂಡೇ ಲಾಕ್​ಡೌನ್; ಬೇರೆ ರಾಜ್ಯಗಳಲ್ಲಿ ಏನಿದೆ ಸ್ಥಿತಿ?

ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಈಗ ಕರ್ನಾಟಕದ ಬಿಎಸ್​ವೈ ಸರ್ಕಾರಕ್ಕೆ ಮೊದಲ ಆದ್ಯತೆ ಆಗಿದೆ. ಅದೇ ರೀತಿ ಬೇರೆ ರಾಜ್ಯ ಸರ್ಕಾರಗಳು ಏನು ಕ್ರಮ ಕೈಗೊಂಡಿವೆ ಎಂಬುದನ್ನ ಸಂಕ್ಷಿಪ್ತವಾಗಿ ನೋಡೋಣ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಜೂನ್ 28): ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಪ್ರವಹಿಸುತ್ತಿದೆ. ಕೊರೋನಾ ನಿಯಂತ್ರಣದಲ್ಲಿ ತಾನೇ ಬೆಸ್ಟ್ ಎಂದು ಬೀಗುತ್ತಿದ್ದ ಕರ್ನಾಟಕದಲ್ಲೂ ದಿನಕ್ಕೆ ಸಾವಿರ ಪ್ರಕರಣಗಳು ಬರುವ ಮಟ್ಟಕ್ಕೆ ಸೋಂಕು ಹರಡಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇದೆ. ಕೆಲ ವಾರಗಳವರೆಗೆ ಲಾಕ್​ಡೌನ್ ಮಾಡಿದ್ದ ಕೇಂದ್ರ ಸರ್ಕಾರ ಈಗ ಹಂತ ಹಂತವಾಗಿ ಲಾಕ್​ಡೌನ್ ತೆರವುಗೊಳಿಸುತ್ತಿದೆ. ಆದರೆ ರಾಜ್ಯ ಸರ್ಕಾರಗಳು ತಮ್ಮ ವಿವೇಚನೆ ಮತ್ತು ತಮ್ಮ ರಾಜ್ಯ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಲಾಕ್​ಡೌನ್ ಬಗ್ಗೆ ನಿರ್ಧಾರ ಕೈಗೊಂಡಿವೆ.

  ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆಯಾದರೂ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್ ಸಾಧ್ಯವೇ ಇಲ್ಲ ಎಂದು ದೃಢ ನಿರ್ಧಾರ ಮಾಡಿದೆ. ವಾರದಲ್ಲಿ ಎರಡು ದಿನ ಲಾಕ್​ಡೌನ್ ಮಾಡುವ ಚಿಂತನೆ ಇದೆ. ಸದ್ಯಕ್ಕೆ ಭಾನುವಾರ ಮಾತ್ರ ಲಾಕ್​ಡೌನ್ ಮಾಡುವುದು; ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸುವುದು ಬಿಎಸ್​ವೈ ಸರ್ಕಾರದ ತೀರ್ಮಾನ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಈಗ ಸರ್ಕಾರಕ್ಕೆ ಮೊದಲ ಆದ್ಯತೆ ಆಗಿದೆ. ಅದೇ ರೀತಿ ಬೇರೆ ರಾಜ್ಯ ಸರ್ಕಾರಗಳು ಏನು ಕ್ರಮ ಕೈಗೊಂಡಿವೆ ಎಂಬುದನ್ನ ಸಂಕ್ಷಿಪ್ತವಾಗಿ ನೋಡೋಣ.

  ಮಹಾರಾಷ್ಟ್ರ: ದೇಶದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಇರುವುದು ಇದೇ ರಾಜ್ಯದಲ್ಲಿ. ಅದರಲ್ಲೂ ಮುಂಬೈನಲ್ಲಿ 70 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್​ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜೂನ್ 30ರ ನಂತರ ಲಾಕ್​ಡೌನ್ ಮುಂದುವರಿಯುತ್ತದೆ ಎಂದು ಅಲ್ಲಿಯ ಸಿಎಂ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

  ದೆಹಲಿ: ದೇಶದ ರಾಜಧಾನಿ ಈಗ ಕೊರೋನಾ ಸೋಂಕು ವಿಚಾರದಲ್ಲಿ ಮತ್ತೊಂದು ಮುಂಬಯಿಯಾಗಿ ಬೆಳೆಯುತ್ತಿದೆ. ಆದರೆ, ಇಲ್ಲಿಯೂ ಕೇಜ್ರಿವಾಲ್ ಸರ್ಕಾರ ಸಂಪೂರ್ಣ ಲಾಕ್​ಡೌನ್ ಮಾಡುವ ಆಸಕ್ತಿ ತೋರಿಲ್ಲ. ಆದರೆ, ಜುಲೈ 31ರವರೆಗೆ ಶಾಲೆಗಳನ್ನ ಬಂದ್ ಮಾಡಲಾಗಿದೆ. ಆನ್​ಲೈನ್ ಕ್ಲಾಸ್​ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

  ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

  ತಮಿಳುನಾಡು: ಇಲ್ಲಿ ಸೋಂಕು ತೀವ್ರವಾಗಿರುವ ಪ್ರದೇಶಗಳಲ್ಲಿ ಜೂನ್ 30ರವೆಗೆ ಲಾಕ್​ಡೌನ್ ಮಾಡಲಾಗಿದೆ. ಚೆನ್ನೈ, ಮಧುರೈ ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್ ಆಗಿವೆ. ಚೆಂಗಲ್​ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರ್ ಜಿಲ್ಲೆಗಳ ಕೆಲ ಭಾಗಗಳನ್ನ ಲಾಕ್ ಡೌನ್ ಮಾಡಲಾಗಿದೆ. ತಜ್ಞರ ವರದಿ ಮತ್ತು ಕೇಂದ್ರ ಸರ್ಕಾರದ ಶಿಫಾರಸುಗಳನ್ನ ಆಧರಿಸಿ ಲಾಕ್ ಡೌನ್ ಅನ್ನ ಇನ್ನಷ್ಟು ವಿಸ್ತರಣೆ ಮಾಡಬೇಕೋ ಬೇಡವೋ ಎಂಬುದನ್ನು ಇನ್ನೆರಡು ದಿನಗಳಲ್ಲಿ ಸಿಎಂ ಪಳನಿಸ್ವಾಮಿ ನಿರ್ಧಾರ ಮಾಡುವ ಸಾಧ್ಯತೆ ಇದೆ.

  ಪಶ್ಚಿಮ ಬಂಗಾಳ: ಇಲ್ಲಿಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಳ ಗಟ್ಟಿ ನಿರ್ಧಾರ ಮಾಡಿದ್ದಾರೆ. ಜುಲೈ 31ರವರೆಗೆ ಲಾಕ್​ಡೌನ್ ವಿಸ್ತರಿಸಲು ಎರಡು ದಿನಗಳ ಹಿಂದೆ ನಿರ್ಧಾರ ಮಾಡಿದ್ದಾರೆ. ಹೆಚ್ಚು ಕೊರೋನಾ ಕೇಸ್​ಗಳಿರುವ ರಾಜ್ಯಗಳಿಂದ ಯಾವುದೇ ವಿಮಾನವನ್ನ ಕೋಲ್ಕತಾಗೆ ಹಾರಾಡಲು ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಬ್ಯಾನರ್ಜಿ ತಿಳಿಸಿದ್ಧಾರೆ.

  ಜಾರ್ಖಂಡ್: ಪಶ್ಚಿಮ ಬಂಗಾಳದಂತೆ ಜಾರ್ಖಂಡ್​ನಲ್ಲೂ ಜುಲೈ 31ರವರೆಗೆ ಲಾಕ್ ಡೌನ್ ವಿಸ್ತರಣೆ ಆಗಿದೆ. ಆದರೆ, ಕಟ್ಟುನಿಟ್ಟಿನ ಲಾಕ್ ಡೌನ್ ಬದಲು ಕೆಲ ವಿನಾಯಿತಿಗಳೊಂದಿಗೆ ದಿಗ್ಬಂಧನ ಹೇರಲು ಸರ್ಕಾರ ನಿರ್ಧರಿಸಿದೆ.  ಅಸ್ಸಾಮ್: ಇಲ್ಲಿಯ ಸರ್ಕಾರ ದಿನದ 12 ಗಂಟೆ ದ್ವಿತೀಯಾರ್ಧದಲ್ಲಿ ರಾಜ್ಯಾದ್ಯಂತ ಕರ್ಫ್ಯೂ ಹೇರಿದೆ. ಕಾಮರೂಪ್ ಜಿಲ್ಲೆಯಲ್ಲಿ 14 ದಿನ ಕಾಲ ಸಂಪೂರ್ಣ ಲಾಕ್​ಡೌನ್ ವಿಧಿಸಲಾಗಿದೆ. ಇವತ್ತಿನಿಂದ ಗುವಾಹತಿಯಲ್ಲೂ ಕಂಪ್ಲೀಟ್ ಲಾಕ್ ಡೌನ್ ಇದೆ.
  First published: