HOME » NEWS » Coronavirus-latest-news » SECOND DEATH IN THE KARNATAKA STATE BY CORONAVIRUS WILL CONFIRM ONCE REPORT COMES MAK

ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ

ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್‌ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್ ನಲ್ಲಿದ್ದರು. ಆದರೆ, ಮಾರ್ಚ್‌ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು.

news18-kannada
Updated:March 25, 2020, 11:51 AM IST
ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾ‌ರ್ಚ್‌ 25); ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮತ್ತೋರ್ವ ಮಹಿಲೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.ಆದರೆ, ಆಕೆಯ ಸಾವಿನ ಕುರಿತ ಸಂಪೂರ್ಣ ವರದಿ ಕೈಸೇರುವ ತನಕ ಇದು ಕೊರೋನಾ ಸೋಂಕಿನಿಂದಲೇ ಉಂಟಾದ ಮರಣ ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣ ಇಲಾಖೆ ನಿರ್ದೇಶಕ‌ ಡಾ.ಪಾಟೀಲ್ ಓಂಪ್ರಕಾಶ್ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್‌ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್ ನಲ್ಲಿದ್ದರು. ಆದರೆ, ಮಾರ್ಚ್‌ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ,ನಿನ್ನೆಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ನಡುವೆ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಕೂಡ ಇತ್ತು. ಇತ್ತೀಚಿಗೆ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದರು. ಉಸಿರಾಟದ ಸಮಸ್ಯೆಯೂ ಇತ್ತು ಎಂದು ತಿಳಿದುಬಂದಿದೆ. ಹೀಗಾಗಿ ಇದು ಸ್ವಾಭಾವಿಕ ಮರಣವೇ? ಅಥವಾ ಕೊರೋನಾ ಸೋಂಕಿನಿಂದಾದ ಮೃತ್ಯುವೇ? ಎಂಬ ಕುರಿತು ವೈದ್ಯರಲ್ಲೇ ಗೊಂದಲ ಇದೆ.

ಹೀಗಾಗಿ ಮೃತ ಮಹಿಳೆಯ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ರಿಪೋರ್ಟ್ ಕೈಸೇರಲಿದೆ. ಈ ವರದಿ ಬರುವವರೆಗೆ ಇದು ಕೊರೋನಾ ಸೋಂಕಿನಿಂದ ಉಂಟಾದ ಸಾವು ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಡಾ.ಪಾಟೀಲ್ ಓಂಪ್ರಕಾಶ್ ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ಚಿಕಿತ್ಸೆಗೆ ಔಷಧ ದಾಸ್ತಾನು; ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ಸಂಪೂರ್ಣ ತಡೆ ಒಡ್ಡಿದ ಕೇಂದ್ರ
First published: March 25, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories