• ಹೋಂ
 • »
 • ನ್ಯೂಸ್
 • »
 • Corona
 • »
 • ಕೋವಿಡ್ ವಿರುದ್ಧ ತದ್ರೂಪು ಪ್ರತಿಕಾಯದ ಪ್ರಯೋಗಕ್ಕೆ ವಿಜ್ಞಾನಿಗಳ ಪ್ರಯತ್ನ

ಕೋವಿಡ್ ವಿರುದ್ಧ ತದ್ರೂಪು ಪ್ರತಿಕಾಯದ ಪ್ರಯೋಗಕ್ಕೆ ವಿಜ್ಞಾನಿಗಳ ಪ್ರಯತ್ನ

ಪ್ರಯೋಗಾಲಯದ ಪ್ರಾತಿನಿಧಿಕ ಚಿತ್ರ

ಪ್ರಯೋಗಾಲಯದ ಪ್ರಾತಿನಿಧಿಕ ಚಿತ್ರ

ಕ್ಲೋನಲ್ ಆ್ಯಂಟಿಬಾಡಿಗಳು ವೈರಾಣು ವಿರುದ್ಧ ದೇಹದಲ್ಲಿ ಸಹಜವಾಗಿ ಉತ್ಪಾದನೆಯಾಗುವ ಪ್ರತಿಕಾಯಗಳ ನಕಲುಗಳಾಗಿವೆ. ಇವು ದೇಹದೊಳಗೆ ವೈರಾಣುವನ್ನು ಗುರಿ ಮಾಡಿ ದಾಳಿ ಮಾಡಬಲ್ಲುವು.

 • News18
 • 4-MIN READ
 • Last Updated :
 • Share this:

  ನವದೆಹಲಿ: ಕೊರೋನಾ ವೈರಸ್ ವಿರುದ್ಧ ಲಸಿಕೆ ತಯಾರಿಸಲು ವಿಶ್ವಾದ್ಯಂತ ಹಲವು ಕಂಪನಿಗಳು ಪ್ರಯತ್ನಿಸುತ್ತಿವೆ. ಅದರ ಜೊತೆಗೆ ಈಗ ವಿಜ್ಞಾನಿಗಳು ಕೊರೋನಾ ವಿರುದ್ಧ ಈಗ ವಿಶೇಷ ಪ್ರತಿಕಾಯಗಳನ್ನ ಅಭಿವೃದ್ಧಿಪಡಿಸಲು ಯೋಜಿಸಿದ್ದಾರೆ. ಕ್ಯಾನ್ಸರ್ ಮೊದಲಾದ ಮಾರಕ ರೋಗಗಳ ಚಿಕಿತ್ಸೆಗೆ ಬಳಸಲಾಗುವ ಬಯೋಟೆಕ್ ಥೆರಪಿಗಳ ಮಾದರಿಯಲ್ಲಿ ಇದು ಇರಲಿದೆ. ವಿಜ್ಞಾನಿಗಳು ಸಲಹೆ ನೀಡುತ್ತಿರುವುದು ಏಕ ತದ್ರೂಪುಕೋಶದ ಪ್ರತಿಕಾಯ (ಮಾನೊಕ್ಲೋನಲ್ ಆ್ಯಂಟಿಬಾಡಿ) ಆಗಿದೆ.


  ಕೋವಿಡ್-19 ವೈರಾಣುವನ್ನು ನಿಗ್ರಹಿಸಲೆಂದೇ ವಿಶೇಷವಾಗಿ ಈ ಪ್ರತಿಕಾಯ ರೂಪಿಸುವುದು ವಿಜ್ಞಾನಿಗಳ ತಂತ್ರ. ಯಾವುದೇ ವೈರಾಣು ಮನುಷ್ಯನ ದೇಹ ಪ್ರವೇಶಿಸಿದಾಗ ಆತನ ದೈಹಿಕ ರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿದಾಳಿ ಸಂಯೋಜಿತಗೊಳ್ಳುತ್ತದೆ. ಶತ್ರುವನ್ನು ನಾಶ ಮಾಡಲೆಂದೇ ರಕ್ಷಣಾ ಕೋಶಗಳ ನಿರ್ಮಾಣವಾಗುತ್ತದೆ. ಇದರಲ್ಲಿ ಪ್ರತಿಕಾಯವೂ ಒಂದು. ಈ ಪ್ರತಿಕಾಯಗಳು ಸ್ವಾಭಾವಿಕ ಪ್ರೋಟೀನ್ ಆಗಿದ್ದು, ಅವು ವೈರಾಣುವನ್ನು ಆವರಿಸಿ ಮತ್ತಷ್ಟು ಹರಡದಂತೆ ನಿಯಂತ್ರಿಸುತ್ತದೆ.


  ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಯಾವಾಗ ಮುಕ್ತಿ? ತಜ್ಞರಿಂದ ಕುತೂಹಲಕಾರಿ ಉತ್ತರ


  ವಿಜ್ಞಾನಿಗಳು ರೂಪಿಸಬೇಕೆಂದಿರುವ ಮಾನೊಕ್ಲೋನಲ್ ಆ್ಯಂಟಿಬಾಡಿಗಳು ದೇಹದ ಸಹಜ ಪ್ರತಿಕಾಯಗಳ ನಕಲುಗಳಾಗಿವೆ. ಅವನ್ನು ಬಯೋ ರಿಯಾಕ್ಟರ್ ಸಂಪುಗಳಲ್ಲಿ ಬೆಳೆಸಲಾಗುತ್ತದೆ. ಪ್ರತಿಕಾಯಗಳಿಂದ ಕೋವಿಡ್ ವೈರಾಣುವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಬಹುದು ಎಂಬುದು ಖಚಿತವಾದರೂ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳ ಅಗತ್ಯ ಇದೆ ಎಂಬ ಗೊಂದಲ ಮಾತ್ರ ಇದೆ. ಒಮ್ಮೆ ಪ್ರತಿಕಾಯಗಳನ್ನ ದೇಹಕ್ಕೆ ಕಳುಹಿಸಿದರೆ ನಿರ್ದಿಷ್ಟ ಅವಧಿಯವರೆಗೆ ಅದು ಪರಿಣಾಮಕಾರಿಯಾಗಿರುತ್ತದೆ. ಆ ನಂತರ ರಕ್ಷಣಾ ಕೋಟೆ ಕುಸಿಯುತ್ತದೆ.


  ಇದನ್ನೂ ಓದಿ: NASA SpaceX: ಸ್ಪೇಸ್ ಎಕ್ಸ್ ಪ್ರಯೋಗ ಯಶಸ್ವಿ; ಸುರಕ್ಷಿತವಾಗಿ ಭೂಮಿಗಿಳಿದ ನಾಸಾ ಗಗನಯಾತ್ರಿಗಳು


  ಅಮೆರಿಕದ ರೀಜೆನರಾನ್ ಫಾರ್ಮಸ್ಯೂಟಿಕಲ್ ಸಂಸ್ಥೆ ಎರಡು ಪ್ರತಿಕಾಯಗಳ ಸಂಯೋಜನೆಯ ಪ್ರಯೋಗಕ್ಕೆ ಮುಂದಾಗಿದೆ. ಇದು ಹೆಚ್ಚು ಪರಿಣಾಮಕಾರಿಯಾಗಿ ವೈರಾಣುವನ್ನು ನಿಗ್ರಹಿಸಬಲ್ಲುದು ಎಂದು ನಂಬಿರುವ ಸಂಸ್ಥೆ ಈಗಾಗಲೇ ಪರೀಕ್ಷೆ ನಡೆಸುತ್ತಿದೆ. ಆದರೆ, ಅಮೆರಿಕ ಸರ್ಕಾರ ಈ ಔಷಧಕ್ಕೆ ಬೇಡಿಕೆ ಇಟ್ಟಿದೆ. ವೈರಾಣು ವಿರುದ್ಧ ಹೋರಾಡಲು ಎಷ್ಟು ಡೋಸ್ ಪರಿಣಾಮಕಾರಿ ಎಂಬುದು ದೃಢಪಟ್ಟು, ಔಷಧ ಪ್ರಾಧಿಕಾರದಿಂದ ಅಂಗೀಕಾರವಾದ ಬಳಿಕ ಔಷಧ ಉತ್ಪಾದನೆ ಪ್ರಾರಂಭವಾಗಲಿದೆ.


  ಆಸ್ಟ್ರಾಜೆನೆಕಾ (AstraZeneca) ಸಂಸ್ಥೆ ಕೂಡ ದ್ವಿ-ಪ್ರತಿಕಾಯ ಸಂಯೋಜನೆಯ ಪ್ರಯೋಗಗಳನ್ನ ಮಾಡುತ್ತಿದೆ. ಮಾನವ ಹಂತದ ಪ್ರಯೋಗಗಳು ಸದ್ಯದಲ್ಲೇ ಶುರುವಾಗಲಿವೆ.

  Published by:Vijayasarthy SN
  First published: