ಕೊರೋನಾ ವೈರಸ್​ನ ಮೂಲ ಎಲ್ಲಿಯದು? ಪೂರ್ವಜ ಸೋಂಕಿನ ಹುಡುಕಾಟದಲ್ಲಿ ನಿರತರಾದ ವಿಜ್ಞಾನಿಗಳು

2019ರ ನವೆಂಬರ್‌ ಮತ್ತು ಡಿಸೆಂಬರ್​ನಲ್ಲಿ ಕಂಡು ಬಂದ ವೈರಸ್‌ನ ತಳಿಗಳು ಮಾರ್ಕೆಟ್‌ನಿಂದ ಬಂದವುಗಳಲ್ಲ. ಈ ವೈರಸ್‌ನ ಉಗಮ ಬೇರೊಂದು ಸ್ಥಳದಿಂದ ಹುಟ್ಟಿಕೊಂಡಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕಳೆದ ಒಂದು ವರ್ಷದಿಂದ ಕೊರೋನಾ ಜಾಗತಿಕವಾಗಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಕ್ವಾರಂಟೈನ್ ಎಂಬ ಪದಗಳೇ ಜನಜೀವನದಲ್ಲಿ ಮಿಳಿತವಾಗಿದೆ. ಖುಷಿಯ ಜಾಗದಲ್ಲಿ ಭವಿಷ್ಯದ ಕರಾಳತೆ ಧುತ್ತನೆ ಪ್ರತ್ಯಕ್ಷವಾಗಿದೆ. ಇದೇ ರೀತಿ ಮುಂದುವರಿದರೆ ಆರ್ಥಿಕ ಪ್ರಗತಿ ಸಾಧ್ಯವೇ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಆದಾಯದ ಮೂಲವೇ ಮಸುಕಾಗಿ ಹೋಗಿದೆ. ಹೀಗಿರುವಾಗ ಕೊರೋನಾ ಮೂಲವನ್ನು ಪತ್ತೆಹಚ್ಚಲು ಅನೇಕ ಸಂಶೋಧನೆಗಳು ನಡೆಯುತ್ತಿವೆ.

ವೈರಸ್ ಹೇಗೆ ಮತ್ತು ಎಲ್ಲಿ ಹುಟ್ಟಿಕೊಂಡಿತು ಎಂಬುದನ್ನು ನಿಖರವಾಗಿ ನಿರ್ಧರಿಸಲು ವಿಜ್ಞಾನಿಗಳಿಗೆ ವೈರಸ್‌ನ ಪೂರ್ವಜ ವೈರಸ್ ಅನ್ನು ಅನ್ವೇಷಿಸುವುದು ಅಗತ್ಯವಾಗಿದೆ. ವುಹಾನ್‌ನ ಸೀಫುಡ್ ಮಾರುಕಟ್ಟೆಗಳಿಂದ ಬಂದ ಪ್ರಕರಣಗಳ ಮಾದರಿಗಳಾಗಿವೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ 2019ರ ನವೆಂಬರ್‌ ಮತ್ತು ಡಿಸೆಂಬರ್​ನಲ್ಲಿ ಕಂಡು ಬಂದ ವೈರಸ್‌ನ ತಳಿಗಳು ಮಾರ್ಕೆಟ್‌ನಿಂದ ಬಂದವುಗಳಲ್ಲ. ಈ ವೈರಸ್‌ನ ಉಗಮ ಬೇರೊಂದು ಸ್ಥಳದಿಂದ ಹುಟ್ಟಿಕೊಂಡಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

Coronavirus India Updates less than 15 lakh active cases record in India from last 52 days.
ಸಾಂದರ್ಭಿಕ ಚಿತ್ರ


ಮೊದಲು ಕಂಡುಬಂದ ಅನುವಂಶಿಕ ಅನುಕ್ರಮಗಳೊಂದಿಗೆ ಸಮಸ್ಯೆ ತಲೆದೋರಿದ್ದು, ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ಪ್ರಕರಣಗಳಲ್ಲಿ ಮೂರು ರೂಪಾಂತರಿ ವೈರಸ್‌ ಮಾದರಿಗಳಲ್ಲಿ ಕಾಣೆಯಾಗಿತ್ತು.  ಅವುಗಳು ವಾರಗಳ ನಂತರ ಮಾರುಕಟ್ಟೆಯ ಹೊರಗೆ ಕಾಣಿಸಿಕೊಂಡವು. ಇವುಗಳು ಬಾವಲಿಗಳಲ್ಲಿ ಕಂಡುಬಂದಿರುವ ವೈರಸ್‌ಗಳೊಂದಿಗೆ ಹೋಲಿಕೆಯನ್ನು ಪಡೆದುಕೊಂಡಿವೆ. ನೋವೆಲ್ ಕೊರೋನಾ ವೈರಸ್ ಬಾವಲಿಗಳಿಂದಲೇ ಬಂದಿರುವುದಾಗಿ ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Bigg Boss 8: ಬಕೆಟ್​ ಅಂತ ಕರೆಸಿಕೊಂಡಿದ್ದ ಶಮಂತ್​ ಕೈಗೆ ಚೊಂಬು ಕೊಟ್ಟ ರಘು ಗೌಡ..!

ಇದೀಗ ಹಾವರ್ಡ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಜೆಸ್ಸಿ ಬ್ಲೂಮ್ ಲೇಖಕ ಹೇಳುವ ಪ್ರಕಾರ ಸಂಶೋಧನೆಯ ಸಮಯದಲ್ಲಿ ಕೆಲವೊಂದು ಅನುಕ್ರಮಗಳನ್ನು ಅಳಿಸಲಾಗಿದ್ದು, ಅವುಗಳನ್ನು ಬ್ಲೂಮ್ ಅವರು ಪತ್ತೆಹಚ್ಚಿದ್ದಾರೆ. ಇವುಗಳು ಆರಂಭಿಕ ಮಾದರಿಗಳಾಗಿದ್ದು ಈಗ ಪತ್ತೆಮಾಡಿದ ರೂಪಾಂತರಗಳಿಂದ ಬೇರ್ಪಟ್ಟಿವೆ ಎಂದು ತಿಳಿಸಿದ್ದಾರೆ. (ವೈಜ್ಞಾನಿಕ ಪತ್ರಿಕೆಯೊಂದರಲ್ಲಿ ಬ್ಲೂಮ್ ಅವರು ಪ್ರಮುಖ ಲೇಖಕರಾಗಿದ್ದಾರೆ)

ವುಹಾನ್​ ಮೀನಿನ ಮಾರುಕಟ್ಟೆಯಿಂದ ಬಂದಿರುವ ವೈರಸ್‌ಗಳಿಗಿಂತ ಬಾವಲಿಗಳಲ್ಲಿರುವ ಕೊರೋನಾ ವೈರಸ್‌ಗಳಿಗೆ ಮೂರು ಪಟ್ಟು ಹೆಚ್ಚು ಸಮಾನವಾಗಿವೆ ಎಂದು ಬ್ಲೂಮ್ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಸೀಫುಡ್​ ಮಾರುಕಟ್ಟೆಯಲ್ಲಿ ವೈರಸ್ ಹರಡುವ ಮುನ್ನವೇ ವುಹಾನ್‌ನಲ್ಲಿ ವೈರಸ್ ಇತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಬ್ಲೂಮ್ ಖಾತ್ರಿ ಪಡಿಸಿದ್ದಾರೆ.

WHO-ಚೀನಾ ವರದಿಯ ಜಿನೋಮಿಕ್ ಸಾಂಕ್ರಾಮಿಕ ರೋಗಶಾಸ್ತ್ರದ ಮೊದಲ ಕೇಂದ್ರವಾಗಿರುವ ಮಾರುಕಟ್ಟೆ ಅನುಕ್ರಮಗಳು 2019ರ ಡಿಸೆಂಬರ್ ಅಂತ್ಯದಲ್ಲಿ ಮತ್ತು 2020ದ ಜನವರಿಯ ಆರಂಭದಲ್ಲಿ ವುಹಾನ್‌ನಲ್ಲಿ ಪ್ರಸಾರವಾಗುತ್ತಿದ್ದ ವೈರಸ್‌ಗಳ ಮಾದರಿಯಲ್ಲ ಎಂದು ಈ ಅಂಶವು ಸೂಚಿಸುತ್ತದೆ. ಜಿಮ್ಮರ್ ಹೇಳುವಂತೆ ಒಂದು ವರ್ಷದ ಹಿಂದೆ ರೋಗಿಗಳ 241 ಅನುವಂಶಿಕ ಅನುಕ್ರಮಗಳು ಆನ್‌ಲೈನ್ ಡೇಟಾಬೇಸ್ ಆದ ಸೀಕ್ವೆನ್ಸ್ ರೀಡ್ ಆರ್ಕೈವ್‌ನಿಂದ ಕಾಣೆಯಾಗಿವೆ ಇದನ್ನು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಿರ್ವಹಿಸುತ್ತದೆ.

ಇದನ್ನೂ ಓದಿ: ಮತ್ತೆ ಹುಡುಗಿಯರ ಕೈ ತಪ್ಪಿದ ಕ್ಯಾಪ್ಟನ್ಸಿ ಟಾಸ್ಕ್: ಈ ಸಲದ ಮೊದಲ ಕ್ಯಾಪ್ಟನ್​ ಮಂಜು ಪಾವಗಡ

ಪೀರ್‌ ಜೆ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಸ್ಪ್ರೆಡ್‌ಶೀಟ್ ಪರಿಶೀಲಿಸಿದಾಗ ಬ್ಲೂಮ್ ಈ ಕಾಣೆಯಾಗಿರುವ ಅನುಕ್ರಮಗಳನ್ನು ಪತ್ತೆಹಚ್ಚಿದ್ದಾರೆ. ಈ ಕಾಣೆಯಾದ ಅನುಕ್ರಮಗಳು ವುಹಾನ್ ಪ್ರಾಜಕ್ಟ್‌ನ ಭಾಗವಾಗಿತ್ತು ಅವುಗಳನ್ನು ಸೀಕ್ವೆನ್ಸ್ ರೀಡ್ ಆರ್ಕೈವ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಈ ಡೇಟಾಬೇಸ್ ಅನ್ನು ಹುಡುಕಿದಾಗ ಅನುಕ್ರಮಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಅನುಕ್ರಮಗಳನ್ನು ಪರಿಶೀಲಿಸದೆಯೇ ಅಳಿಸಲಾಗಿದೆ ಎಂಬುದಾಗಿ ಬ್ಲೂಮ್ ದೂರಿದ್ದಾರೆ.

ನ್ಯೂಸ್18 ಕನ್ನಡ ಕಳಕಳಿ:

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: