NeoCoV ವೈರಸ್​​ ಬಗ್ಗೆ ಎಚ್ಚರಿಸಿದ ವುಹಾನ್ ವಿಜ್ಞಾನಿಗಳು; ಕೋವಿಡ್​ಗಿಂತಲೂ ಮಾರಾಣಾಂತಿಕ

ವೈರಸ್​ ಕೋವಿಡ್​ಗಿಂತಲೂ ಅಪಾಯಕಾರಿಯಾಗಿದ್ದು, ಅತ್ಯಂತ ವೇಗವಾಗಿ ಹರಡಲಿದೆ. ಈ ಸೋಂಕಿಗೆ ತುತ್ತಾದ ಮೂವರಲ್ಲಿ ಒಬ್ಬರು ಸಾವನ್ನಪ್ಪುವ ಸಂಭವನಿಯತೆ ಹೆಚ್ಚಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಳೆದೆರಡು ವರ್ಷಗಳ ಹಿಂದೆ ಅಂದರೆ 2019 ರಲ್ಲಿ ಮೊದಲ ಬಾರಿಗೆ ಕೋವಿಡ್ -19 (Corona Viruas) ವೈರಸ್  ಚೀನಾದ ವುಹಾನ್‌ನ (Wuhan) ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಈ ಕೊರೋನಾ ವೈರಸ್​​ ರೂಪಾಂತರ ತಳಿಗಳು ಇನ್ನೂ ಕೂಡ ಜಗತ್ತನ್ನು ಬಾಧಿಸುತ್ತಿವೆ.  ಇದರಿಂದ ಮುಕ್ತಿ ಹೊಂದುವ ಮೊದಲೇ ಇದೀಗ ಚೀನದ ವುಹಾನ್​ ವೈದ್ಯರು ಮತ್ತೊಂದು ಮಾರಾಣಾಂತಿಕ ವೈರಸ್​ ಬಗ್ಗೆ ಎಚ್ಚರಿಸಿದ್ದಾರೆ. ಈ ವೈರಸ್​ ಕೋವಿಡ್​ಗಿಂತಲೂ ಅಪಾಯಕಾರಿಯಾಗಿದ್ದು, ಅತ್ಯಂತ ವೇಗವಾಗಿ ಹರಡಲಿದೆ. ಈ ಸೋಂಕಿಗೆ ತುತ್ತಾದ ಮೂವರಲ್ಲಿ ಒಬ್ಬರು ಸಾವನ್ನಪ್ಪುವ ಸಂಭವನಿಯತೆ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ. 

    ಮಾರಾಣಾಂತಿಕ ನಿಯೋಕೋವ್ ವೈರಸ್​

    ದಕ್ಷಿಣ ಆಫ್ರಿಕಾದಲ್ಲಿ ಹೊಸ ರೀತಿಯ ಕರೋನವೈರಸ್ 'ನಿಯೋಕೋವ್' ಬಗ್ಗೆ ವಿಜ್ಞಾನಿಗಳು ತಿಳಿಸಿದ್ದು, ಇದರ ಪರಿಣಾಮ ಕೋವಿಡ್ 19ಗಿಂತ ಹೆಚ್ಚಿದ ಎಂದಿದ್ದಾರೆ. ಈ ಹೊಸ ವೈರಸ್​​​ ಇದು ಹೆಚ್ಚಿನ ಸಾವು ಮತ್ತು ಪ್ರಸರಣ ದರವನ್ನು ಹೊಂದಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಈ ಸಂಬಂಧ ವರದಿ ಮಾಡಿದೆ.

    ಇದು ಹೊಸ ವೈರಸ್​ ಅಲ್ಲ

    ವರದಿಯ ಪ್ರಕಾರ, ನಿಯೋಕೋವ್ ವೈರಸ್ ಹೊಸದಲ್ಲ. ಇದು MERS-CoV ವೈರಸ್‌ನೊಂದಿಗೆ ಸಂಯೋಜಿತವಾಗಿದೆ, ಇದು 2012 ಮತ್ತು 2015 ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಏಕಾಏಕಿ ಪತ್ತೆಯಾಯಿತು. ಇದು SARS-CoV-2 ಅನ್ನು ಹೋಲುತ್ತದೆ, ಇದು ಮಾನವರಲ್ಲಿ ಕರೋನವೈರಸ್ ಅನ್ನು ಉಂಟುಮಾಡುತ್ತದೆ ಎಂದಿದ್ದಾರೆ.

    ಇದನ್ನು ಓದಿ: ಕೋವಿಡ್ ಲಸಿಕೆಗೆ ದರ ನಿಗದಿ; ಒಂದು ಡೋಸ್​​ಗೆ ಎಷ್ಟು ಗೊತ್ತಾ?

    ಬಾವುಲಿಗಳಲ್ಲಿ ಪತ್ತೆಯಾಗಿರುವ ವೈರಸ್​
    NeoCoV ದಕ್ಷಿಣ ಆಫ್ರಿಕಾದಲ್ಲಿ ಬಾವುಲಿಗಳಲ್ಲಿ ಪತ್ತೆಯಾಗಿದ್ದು, ಇದು ಪ್ರಾಣಿಗಳಲ್ಲಿ ಮಾತ್ರ ಹರಡುತ್ತದೆ ಎಂದು ತಿಳಿದುಬಂದಿದೆ, NeoCoV ಮತ್ತು ಅದರ ಹತ್ತಿರದ ಸಂಬಂಧಿ PDF-2180-CoV ಮಾನವರಿಗೆ ಸೋಂಕು ತರುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಸದ್ಯ ಈ ಸೋಂಕು ಯಾವುದೇ ಮನುಷ್ಯರಲ್ಲಿ ಕಂಡು ಬಂದಿಲ್ಲ.

    ದೊಡ್ಡ ಅಪಾಯ ಮಾಡಬಲ್ಲ ವೈರಸ್​

    ಸಂಶೋಧನೆಯು MERS-CoV ಬೀಟಾ-CoV (Merbecoviruses) ನ ವಂಶಾವಳಿಗೆ ಸೇರಿದೆ ಎಂದು ಹೇಳಿದೆ, ಇದು ಸುಮಾರು 35 ಪ್ರತಿ ಶತದಷ್ಟು ಹೆಚ್ಚಿನ ಪ್ರಸರಣ-ಮಾರಣಾಂತಿಕ ಪ್ರಮಾಣವನ್ನು ಪರಿಗಣಿಸಿ ದೊಡ್ಡ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

    ಇದನ್ನು ಓದಿ: Metro Cityಗಳಲ್ಲಿ ಸಮುದಾಯಕ್ಕೆ ಹರಡುತ್ತಿದೆ ಓಮೈಕ್ರಾನ್? ದೇಶದ ಹಲವು ನಗರಗಳಿಗೆ ಟೆನ್ಷನ್, ಟೆನ್ಷನ್!

    ವೇಗವಾಗಿ ಹರಡುವ ವೈರಸ್​

    MERS-CoV-2 ಅನ್ನು ಬಳಸಿಕೊಂಡು ACE2 ನ ಮಾನವನಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಸೋಂಕಿಗೆ ತುತ್ತಾದವರು ಪ್ರತಿ ಮೂರು ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರು ಸಾಯುತ್ತಾರೆ. ಪ್ರಸ್ತುತ SARS-CoV-2 ಕೊರೊನಾವೈರಸ್‌ನ ಅತಿ ಹೆಚ್ಚು ಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಸರಣ ದರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
    ಲಸಿಕೆ ಪಡೆದಿದ್ದರೂ ಈ ನಿಯೋಕೋವಿ ಮತ್ತು ಪಿಡಿಎಫ್-2180-ಕೋವಿ ಸೋಂಕು ತಗಲುವ ಸಾಧ್ಯತೆ ಒದೆ ಏಕೆಂದರೆ SARS-CoV-2 ಆಂಟಿ-ಸೆರಾ ಅಥವಾ ಹತ್ತು ಪರೀಕ್ಷಿತ MERS-CoV ವಿರೋಧಿ ನ್ಯಾನೊಬಾಡಿಗಳ ವಿರುದ್ಧ ಹೋರಾಡುವುದಿಲ್ಲ.

    BioRxiv ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, SARS-CoV-2, NeoCoV ಮತ್ತು PDF-2180-CoV ನಂತಹವುಗಳು ಸಹ ಮನುಷ್ಯರಿಗೆ ಸೋಂಕು ತರಬಹುದು. ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರ ಪ್ರಕಾರ, ಈ ಹೊಸ ಕರೋನವೈರಸ್ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸಲು ಕೇವಲ ಒಂದು ರೂಪಾಂತರದ ಅಗತ್ಯವಿದೆ.
    Published by:Seema R
    First published: