HOME » NEWS » Coronavirus-latest-news » SCHOOLS WILL RE OPEN ON JANUARY 1ST DESPITE NEW MUTATED UK VIRUS FOUND IN 3 BENGALUREANS SNVS

ಬೆಂಗಳೂರಿನ ಮೂವರಲ್ಲಿ ನೂತನ ಬ್ರಿಟನ್ ಕೊರೋನಾ ವೈರಸ್ ಪತ್ತೆ; ಶಾಲಾರಂಭಕ್ಕೆ ಇಲ್ಲ ತಡೆ

ಬ್ರಿಟನ್ ದೇಶದಿಂದ ಬೆಂಗಳೂರಿಗೆ ಮರಳಿರುವವರ ಪೈಕಿ ಮೂವರಲ್ಲಿ ನೂತನ ಮ್ಯೂಟೆಂಟ್ ವೈರಸ್ ಪತ್ತೆಯಾಗಿದೆ. ಇನ್ನೂ ಕೆಲವರ ವರದಿ ಬರಬೇಕಿದೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಆತಂಕದ ಸ್ಥಿತಿ ಮಧ್ಯೆ ಜನವರಿ 1ರಂದು ಶಾಲೆಗಳನ್ನ ಆರಂಭಿಸುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ.

news18-kannada
Updated:December 29, 2020, 12:26 PM IST
ಬೆಂಗಳೂರಿನ ಮೂವರಲ್ಲಿ ನೂತನ ಬ್ರಿಟನ್ ಕೊರೋನಾ ವೈರಸ್ ಪತ್ತೆ; ಶಾಲಾರಂಭಕ್ಕೆ ಇಲ್ಲ ತಡೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಡಿ. 29): ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಮಂದಿ ಇದ್ದಾರೆ. ಹೈದರಾಬಾದ್​ನ ಇಬ್ಬರು ಹಾಗೂ ಪುಣೆಯ ಒಬ್ಬರೂ ಇದರಲ್ಲಿ ಸೇರಿದ್ದಾರೆ. ಬೆಂಗಳೂರಿನ ಮೂವರಲ್ಲಿ ನೂತನ ವೈರಸ್ ಮ್ಯೂಟೆಂಟ್ ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಬ್ರಿಟನ್ ದೇಶದಿಂದ ಡಿಸೆಂಬರ್ 1ರಿಂದ 21ರವರೆಗೆ ಬೆಂಗಳೂರಿಗೆ ಬಂದವರ ಸಂಖ್ಯೆ 1,594 ಇದೆ. ಇವರ ಪೈಕಿ 1,380 ಮಂದಿಯನ್ನ ಬಿಬಿಎಂಪಿ ಟ್ರ್ಯಾಕ್ ಮಾಡಿ 1,234 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. 931 ಮಂದಿಯ ವರದಿ ಬಂದಿದೆ. ಇವರ ಪೈಕಿ 16 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮೂವರಲ್ಲಿ ಮ್ಯೂಟೆಂಟ್ ವೈರಸ್ ಇರುವುದು ಇಂದು ಬಂದ ವರದಿಯಲ್ಲಿ ಬೆಳಕಿಗೆ ಬಂದಿದೆ. ಇನ್ನೂ 303 ಜನರ ವರದಿ ಬರಬೇಕಿದೆ. ಆತಂಕದ ವಿಷಯವೆಂದರೆ ಬ್ರಿಟನ್​ನಿಂದ ಬೆಂಗಳೂರಿಗೆ ಬಂದ 1,595 ಮಂದಿ ಪೈಕಿ 212 ಜನರ ಸುಳಿವು ಸಿಕ್ಕಿಲ್ಲ. ಅಧಿಕಾರಿಗಳು ವಿವಿಧ ರೀತಿಯಲ್ಲಿ ಪ್ರಯತ್ನ ಪಟ್ಟರೂ ಇವರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ಇವರಲ್ಲಿ ಹೊಸ ಸ್ವರೂಪದ ವೈರಸ್ ಇದ್ದರೆ ಏನು ಗತಿ ಎಂಬ ಆತಂಕ ಎದುರಾಗಿದೆ.

ಕೊರೋನಾ ಸೋಂಕು ಪತ್ತೆಯಾಗಿರುವ 26 ಮಂದಿಯನ್ನು ಐಸೋಲೇಶನ್​ನಲ್ಲಿಡಲಾಗಿದೆ.  ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ ಕ್ವಾರಂಟೈನ್​ನಲ್ಲಿಡುವ ಪ್ರಕ್ರಿಯೆ ನಡೆಯುತ್ತಿದೆ. ಮಾಮೂಲಿಯ 14 ದಿನಗಳ ಕ್ವಾರಂಟೈನ್ ಬದಲು 24 ದಿನಗಳ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಮ್ಯುಟೇಟ್ ಆದ ವೈರಸ್ ಪತ್ತೆಯಾಗಿರುವ ಮೂವರಲ್ಲಿ ಬೊಮ್ಮನಹಳ್ಳಿಯ ತಾಯಿ ಮತ್ತು ಮಗಳು ಇದ್ದಾರೆ. ಇವರ ಸಂಪರ್ಕಕ್ಕೆ ಬಂಬ 39 ಮಂದಿಯನ್ನು ಗುರುತಿಸಿ ಕ್ವಾರಂಟೈನ್​ನಲ್ಲಿಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ 6 ಜನರಲ್ಲಿ ಮ್ಯೂಟಂಟ್​​ ಕೊರೋನಾ ಸೋಂಕು ದೃಢ; ಆಘಾತಕಾರಿ ಮಾಹಿತಿ ಹೊರಹಾಕಿದ ICMR

ಇನ್ನು, ನೂತನ ಮ್ಯೂಟೆಡ್ ಕೊರೋನಾ ವೈರಾಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನ ತೆರೆಯಲಾಗುತ್ತದೆಯಾ ಎಂಬ ಗೊಂದಲಗಳಿಗೆ ಸರ್ಕಾರ ತೆರೆ ಎಳೆದಿದೆ. ಜನವರಿ 1ರಂದು ಮೊದಲೇ ನಿರ್ಧರಿಸಿದಂತೆ ಶಾಲೆಗಳು ಮತ್ತು ವಿದ್ಯಾಗಮ ತರಗತಿಗಳು ಪ್ರಾರಂಭಗೊಳ್ಳಲಿವೆ ಎಂದು ಸರ್ಕಾರ ಹೇಳಿದೆ. ಡಿಸಿಎಂ ಅಶ್ವಥನಾರಾಯಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಇದನ್ನ ದೃಢಪಡಿಸಿದ್ದಾರೆ. ಹೊಸ ಕೊರೋನಾ ವೈರಸ್ ಪತ್ತೆಯಾಗಿರುವುದಕ್ಕೂ ಶಾಲೆಗಳನ್ನ ತೆರೆಯುವುದಕ್ಕೂ ಸಂಬಂಧ ಇಲ್ಲ. 10 ಮತ್ತು 12ನೇ ತರಗತಿ ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಕೊರೋನಾ ವೈರಸ್ ಎದುರು ಸಾಮುದಾಯಿಕಾಗಿ ರೋಗನಿರೋಧಕ ಶಕ್ತಿ ಬಂದಿದೆ. ಉನ್ನತ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಭೆ ಮಾಡಿ ಮುಂದಿನ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: SL Dharme Gowda Death - ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಅನಿವಾರ್ಯ. ಜೀವದ ಜೊತೆಗೆ ಜೀವನವೂ ಮುಖ್ಯ. ಜನವರಿ 1ರಂದು ಶಾಲೆ ಆರಂಭ ನಿಶ್ಚಿತ. ಮಕ್ಕಳ ಸುರಕ್ಷತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಈ ರೂಪಾಂತರಿ ವೈರಸ್ ಬಗ್ಗೆ ಹೆಚ್ಚೇನೂ ಕಂಗಾಲಾಗುವ ಅಗತ್ಯ ಇಲ್ಲ. ಕೊರೋನಾ ವೈರಸ್ ತನ್ನ ಶಕ್ತಿ ಕಳೆದುಕೊಂಡಿದೆ. ಮ್ಯುಟೇಟೆಡ್ ವೈರಸ್ ವೇಗವಾಗಿ ಹರಡುತ್ತದೆ ಎನ್ನೋದು ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ವರದಿ: ಸಂಜಯ್ ಎಂ ಹುಣಸನಹಳ್ಳಿ / ಸೌಮ್ಯ ಕಳಸ / ಆಶಿಕ್ ಮುಲ್ಕಿ
Published by: Vijayasarthy SN
First published: December 29, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories