ಜನರು ತಮ್ಮ ಭವಿಷ್ಯದ ಭದ್ರತೆಗಾಗಿ ಹಣಕಾಸನ್ನು ನಿರ್ವಹಿಸಲು ಅನೇಕ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.ಆದರೆ, ಹೆಚ್ಚಿನ ಜನರು ಸ್ಥಿರ ಠೇವಣಿಗಳಲ್ಲಿ (ಎಫ್‌ಡಿ) ಹೂಡಿಕೆ ಮಾಡಲು ಬಯಸುತ್ತಾರೆ ಏಕೆಂದರೆ ಎಫ್‌ಡಿಗೆ ಹಣ ಹಾಕಿದರೆ ಯಾವುದೇ ಅಪಾಯವಿಲ್ಲ ಹಾಗೂ ವಿಶ್ವಾಸಾರ್ಹ ಲಾಭವನ್ನು(ಕಡಿಮೆ ಲಾಭಾವನ್ನು) ಬಯಸುವವರಿಗೆ ಇದು ಇನ್ನೂ ಮೊದಲ ಆಯ್ಕೆಯಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ವಯಸ್ಸಾದವರು ಯಾವಾಗಲೂ ಇದಕ್ಕೆ ಆದ್ಯತೆ ನೀಡುತ್ತಾರೆ ಏಕೆಂದರೆ ಇದು ಕಡಿಮೆ ಅಪಾಯದ ಹೂಡಿಕೆಯ ಮಾರ್ಗವಾಗಿದೆ, ಹಣ ಗೋತಾ ಹೊಡೆಯುತ್ತದೆ ಎನ್ನುವ ಭಯವಿಲ್ಲ ಅಲ್ಲದೇ ಸ್ಥಿರವಾದ ಆದಾಯವನ್ನು ಪಡೆಯಲು ಹೂಡಿಕೆದಾರರಿಗೆ ಹೆಚ್ಚು ಸಹಾಯ ಮಾಡುತ್ತದೆ.
ಕರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿದೆ. ಹೊಸ ಯೋಜನೆಯ ಪ್ರಕಾರ ಐದು ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ನಿಮ್ಮ ಹೂಡಿಕೆಗಳಿಗೆ ಹೆಚ್ಚಿನ ಬಡ್ಡಿದರವನ್ನು ಪಡೆಯಲು ಸಹಾಯ ಮಾಡುತ್ತದೆ.ನೀವು ನಿಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಎಸ್‌ಬಿಐ ವೆಕೇರ್ ಠೇವಣಿ ಎಂದು ಕರೆಯಲ್ಪಡುವ ಈ ಹೊಸ ಯೋಜನೆಯು ಅವರ ಸ್ಥಿರ ಠೇವಣಿಗಳ ಮೇಲೆ ಹೆಚ್ಚುವರಿ 30 ಬೇಸಿಸ್ ಪಾಯಿಂಟ್‌ಗಳನ್ನು ಪಡೆಯುತ್ತದೆ. ಪ್ರಸ್ತುತ, ಎಸ್‌ಬಿಐ ಎಲ್ಲಾ ಅವಧಿಯ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚುವರಿ 50 ಆಧಾರ ಅಂಕಗಳನ್ನು ನೀಡುತ್ತದೆ. ಆದರೆ ವೆಕೇರ್ ಯೋಜನೆಯ ಪರಿಚಯದೊಂದಿಗೆ ಠೇವಣಿದಾರರು ಈಗ ಐದು ವರ್ಷಗಳ ಅಥವಾ ಹೆಚ್ಚಿನ ಅವಧಿಯ ಅವಧಿಯ ಠೇವಣಿಗಳ ಮೇಲೆ 80 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿಯನ್ನು ಪಡೆಯಬಹುದು.
ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವೆಕೇರ್ ವಿಶೇಷ ಎಫ್‌ಡಿ ಯೋಜನೆ ಈಗ ಸೆಪ್ಟೆಂಬರ್ 30, 2021 ರವರೆಗೆ ಲಭ್ಯವಿರುತ್ತದೆ.
ಎಸ್‌ಬಿಐನ ವಿಕೇರ್ ಠೇವಣಿ ಯೋಜನೆಯ ಎಲ್ಲಾ ವಿವರಗಳು ಇಲ್ಲಿವೆ:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ