• ಹೋಂ
  • »
  • ನ್ಯೂಸ್
  • »
  • Corona
  • »
  • SBI Cash Withdrawl: ಇನ್ಮೇಲೆ ಎಸ್​ಬಿಐ ಯಾವುದೇ ಬ್ರಾಂಚ್​ನಿಂದ ಹಿಂದಿಗಿಂತ ಹೆಚ್ಚು ಹಣ ಡ್ರಾ ಮಾಡಬಹುದು !

SBI Cash Withdrawl: ಇನ್ಮೇಲೆ ಎಸ್​ಬಿಐ ಯಾವುದೇ ಬ್ರಾಂಚ್​ನಿಂದ ಹಿಂದಿಗಿಂತ ಹೆಚ್ಚು ಹಣ ಡ್ರಾ ಮಾಡಬಹುದು !

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವ ಶಾಖೆಯಿಂದ ಬೇಕಿದ್ದರೂ ಗ್ರಾಹಕರು ಹಣ ಡ್ರಾ ಮಾಡಬಹುದು. ಚೆಕ್ ಸ್ಲಿಪ್ ಇದ್ದರೆ ಯಾವುದೇ ಶಾಖೆಯಿಂದ 25 ಸಾವಿರ ರೂಪಾಯಿ ಹಣ ಡ್ರಾ ಮಾಡಿಕೊಳ್ಳಬಹುದು.

  • Share this:

SBI Cash Withdrawl: ಕೊರೊನಾ ಸಂದರ್ಭದಲ್ಲಿ ಹಣದ ಅವಶ್ಯಕತೆ ಎಂದಿಗಿಂತ ತುಸು ಹೆಚ್ಚೇ ಇದೆ. ಮನೆಯವರ ಆರೋಗ್ಯ, ಆಸ್ಪತ್ರೆ ವೆಚ್ಚಗಳೇ ಹೆಚ್ಚು ಖರ್ಚು ತರುತ್ತಿವೆ. ಅಲ್ಲದೇ ಮಕ್ಕಳು ಶಾಲೆಗೆ ಹೋಗದಿದ್ರೂ ಫೀಸ್ ಕಟ್ಟಲೇಬೇಕು. ಉಳಿದ ಎಲ್ಲಾ ಖರ್ಚುಗಳೂ ಇದ್ದಂತೆಯೇ ಇವೆ. ಹಾಗಾಗಿ ಇಂಥಾ ಸಂದರ್ಭದಲ್ಲಿ ತನ್ನ ಗ್ರಾಹರಿಕೆ ಅನುಕೂಲ ಮಾಡಿಕೊಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸಾ ಆಫರ್ ನೀಡಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತೀ ದೊಡ್ಡ ಬ್ಯಾಂಕ್ ನೆಟ್​ವರ್ಕ್. ಸ್ಟೇಟ್ ಬ್ಯಾಂಕ್​ನ ಉಳಿದೆಲ್ಲಾ ಬ್ಯಾಂಕುಗಳು ಮರ್ಜ್ ಆದ ನಂತರ ಅತೀ ಹೆಚ್ಚು ಗ್ರಾಹಕರಿರುವ ಬ್ಯಾಂಕ್ ಆಗಿ ಇದು ಹೊರಹೊಮ್ಮಿದೆ. ಕೋವಿಡ್ ಸಂದರ್ಭದಲ್ಲಿ ಬ್ಯಾಂಕಿನ ವಹಿವಾಟುಗಳು ಕಡಿಮೆ ಆಗಿವೆ. ಆದರೆ ಜನರ ಅವಶ್ಯಕತೆಗಳು ಹೆಚ್ಚಿವೆ.


ಅನೇಕ ಕಡೆ ಲಾಕ್​ಡೌನ್ ಇರುವುದರಿಂದ ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನ ಓಡಾಡೋದು ಬಹಳ ಕಷ್ಟ. ಅಗತ್ಯ ವಸ್ತುಗಳಿಗೆ ಇಂತಿಷ್ಟೇ ಸಮಯ ಅವಕಾಶ ಇರೋದ್ರಿಂದ ಅದಕ್ಕೇ ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಪರದಾಡುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಧಿಡೀರನೆ ಹೆಚ್ಚು ಹಣದ ಅವಶ್ಯಕತೆ ಬಿದ್ದಾಗ ಅದನ್ನು ತೆಗೆದುಕೊಳ್ಳಲು ತಮ್ಮದೇ ಶಾಖೆಗೆ ಹೋಗಬೇಕಾದ ಅನಿವಾರ್ಯತೆ ಅನೇಕರದ್ದಾಗಿತ್ತು. ಆದ್ರೆ ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ ಎಂದು ಎಸ್​ಬಿಐ ತಿಳಿಸಿದೆ.


ಇದನ್ನೂ ಓದಿ: Corona Vaccine: ಲಸಿಕೆ ತೆಗೆದುಕೊಂಡವರಿಗೆ ಮಾತ್ರ ಎಣ್ಣೆ ನೀಡಿ: ಮದ್ಯದಂಗಡಿ ಮಾಲೀಕರಿಗೆ ಆದೇಶ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವ ಶಾಖೆಯಿಂದ ಬೇಕಿದ್ದರೂ ಗ್ರಾಹಕರು ಹಣ ಡ್ರಾ ಮಾಡಬಹುದು. ಚೆಕ್ ಸ್ಲಿಪ್ ಇದ್ದರೆ ಯಾವುದೇ ಶಾಖೆಯಿಂದ 25 ಸಾವಿರ ರೂಪಾಯಿ ಹಣ ಡ್ರಾ ಮಾಡಿಕೊಳ್ಳಬಹುದು. ಅದೇ ರೀತಿ ತಮ್ಮ ಹೆಸರಿನ ಚೆಕ್ ಮೂಲಕವಾದರೆ 1 ಲಕ್ಷ ರೂಪಾಯಿ ಡ್ರಾ ಮಾಡಿಕೊಳ್ಳಬಹುದು. ಅದೇ ಬೇರೆಯವರ ಚೆಕ್​ನ್ನು ನೀವು ವಿತ್​​ ಡ್ರಾ ಮಾಡುವುದಾದರೆ 50 ಸಾವಿರ ರೂಪಾಯಿ ಹಣವನ್ನು ಡ್ರಾ ಮಾಡುವ ಅವಕಾಶವಿದೆ.


ಅಂದ್ಹಾಗೆ ಇದು ಶಾಶ್ವತ ಬದಲಾವಣೆ ಅಲ್ಲ. ಕೋವಿಡ್ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಸದ್ಯದ ಮಟ್ಟಿಗೆ ಮಾಡಿರುವ ಬದಲಾವಣೆಯಾಗಿದೆ. ಸದ್ಯ ಸೆಪ್ಟೆಂಬರ್ 30, 2021ವರಗೆ ಈ ಆಫರ್ ಇರಲಿದೆ. ಮುಂದಿನ ದಿನಗಳಲ್ಲಿ ಇದನ್ನೇ ಮುಂದುವರೆಸುವ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಡಳಿತ ಮಂಡಳಿ ಇನ್ನೂ ಸ್ಪಷ್ಟನೆ ನೀಡಿಲ್ಲ.


ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ತುಸು ತಗ್ಗಿದಂತೆ ಕಾಣುತ್ತಿದೆ. ಆದರೆ ಸದ್ಯ ಲಾಕ್​ಡೌನ್ ಜಾರಿಯಲ್ಲಿದ್ದು ಹಂತಹಂತವಾಗಿ ಲಾಕ್​ಡೌನ್ ತೆರವು ಮಾಡಲು ಮಹಾನಗರ ಪಾಲಿಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಜೂನ್ 7ರ ಬಳಿಕ ಏಕಾಏಕಿಯಾಗಿ ಲಾಕ್ ಡೌನ್ ತೆರವು ಮಾಡದೇ, ಹಂತ ಹಂತವಾಗಿ ಅನ್ ಲಾಕ್ ಮಾಡುವುದು ಒಳ್ಳಯದು. ಆರಂಭದಲ್ಲೇ ಚಿತ್ರ ಮಂದಿರ, ಶಾಪಿಂಗ್ ಮಾಲ್, ಶಾಲೆ-ಕಾಲೇಜು ಅನ್ನು ತೆರಯಲು ಅನುಮತಿ ಕೊಡಬಾರದು‌. ಇದರ ಜೊತೆಗೆ ಸಾರಿಗೆ ಬಸ್ ಗಳಲ್ಲಿ ಶೇಕಡಾ 50 ರಷ್ಟು ಆಸನ ವ್ಯವಸ್ಥೆ ಕಲ್ಪಿಸುವುದು. ಐಟಿ-ಬಿಟಿ ಕಂಪೆನಿಗಳನ್ನು ಅವಕಾಶ ನೀಡದೇ ಮುಂದಿನ ಮೂರು ತಿಂಗಳ ಕಾಲ ವರ್ಕ್ ಫ್ರಂ ಹೋಮ್ ಗೆ ಒತ್ತು ನೀಡುವುದು. ಜನ ಸಂದಣಿ ಹೆಚ್ಚಿರುವ ಪ್ರದೇಶವನ್ನು ಅನ್ ಲಾಕ್ ಮಾಡದೆ ಇರುವುದು. ಮಾರ್ಕೆಟ್ ಗಳನ್ನು ಪರಿಸ್ಥಿತಿ ನೋಡಿಕೊಂಡು ಓಪನ್ ಮಾಡುವುದು. ಮುಖ್ಯವಾಗಿ ಮೆಜೆಸ್ಟಿಕ್, ಚಿಕ್ಕಪೇಟೆ, ಕೆಆರ್ ಮಾರ್ಕೆಟ್ ವ್ಯಾಪಾರಿಗಳಿಗೆ ವಿಶೇಷ SOP ಬಿಡುಗಡೆ ಮಾಡಬೇಕು ಅಂತ ಸರ್ಕಾರಕ್ಕೆ ಪಾಲಿಕೆ‌ ಸಲಹೆ ಕೊಟ್ಟಿದೆ.

Published by:Soumya KN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು