ಕೋವಿಡ್​​-19 ವರದಿ ಬರುವ ಮುನ್ನವೇ ಕ್ವಾರಂಟೈನ್​​ನಲ್ಲಿದ್ದ ವಲಸಿಗರನ್ನು ಮನೆಗೆ ಕಳಿಸಿದ ಸರ್ಕಾರ - ಸತೀಶ್​​​ ಜಾರಕಿಹೊಳಿ ಆಕ್ರೋಶ

ಹೀಗೆ ಮನೆಗೆ ಹೋದ ಬೆಳಗಾವಿ ತಾಲೂಕಿನ ಇಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಮತ್ತೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೀಗೆಂದು ಖುದ್ದು ಶಾಸಕ ಸತೀಶ್ ಜಾರಕಿಹೊಳಿಯವರೇ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಈ ಯಡವಟ್ಟು ಸಿಎಂ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

news18-kannada
Updated:May 31, 2020, 3:46 PM IST
ಕೋವಿಡ್​​-19 ವರದಿ ಬರುವ ಮುನ್ನವೇ ಕ್ವಾರಂಟೈನ್​​ನಲ್ಲಿದ್ದ ವಲಸಿಗರನ್ನು ಮನೆಗೆ ಕಳಿಸಿದ ಸರ್ಕಾರ - ಸತೀಶ್​​​ ಜಾರಕಿಹೊಳಿ ಆಕ್ರೋಶ
ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ಮೇ.31): ರಾಜ್ಯದಲ್ಲಿ ಕೊರೋನಾ ವೈರಸ್ ಮಹಾಮಾರಿಯ ಅಬ್ಬರ ಕಡಿಮೆಯಾಗಿಲ್ಲ.  ಮಹಾರಾಷ್ಟ್ರದಿಂದ ಬಂದ ವಲಸಿಗರಿಂದಂತೂ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ರಾಜ್ಯ ಸರ್ಕಾರವೊಂದು ಮಹಾ ಯಡವಟ್ಟು ಮಾಡಿದೆ. ಕ್ವಾರಂಟೈನ್​​ನಲ್ಲಿ ಇರೋವರ ವರದಿ ಬರುವ ಮೊದಲೆ ಮನೆಗೆ ಕಳುಹಿಸಲಾಗಿದೆ. ಇದರಿಂದ ಕೊರೊನಾ ಸೋಂಕು ಹರುಡುವ ಭೀತಿ ಉಂಟಾಗಿದೆ.

ಹೌದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಮಹಾರಾಷ್ಟ್ರದಿಂದ ನೂರಾರು ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಈ ಬಂದವರನ್ನು ಹಾಸ್ಟೆಲ್, ಶಾಲೆಗಳಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ್ರು, ಇನ್ನೂ ಗಂಟಲು ಮಾದರಿಯ ವರದಿ ಬಂದಿಲ್ಲ. ವರದಿ ಬರುವ ಮೊದಲೆ ವಲಸಿಗರನ್ನು ಬಿಟ್ಟು ಮನೆಗೆ ಕಳುಹಿಸಲಾಗಿದೆ.

ಇನ್ನು, ಸರ್ಕಾರ ಸುಮಾರು 600 ಜನರನ್ನು ಮನೆಗೆ ಕಳುಹಿಸಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಾರಂಟೈನ್​​ಗಾಗಿ ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಬುಧವಾರ ಮತ್ತೆ ಬಿಜೆಪಿ ಬಂಡಾಯ ಶಾಸಕರ ಸಭೆ

ಸತೀಶ ಜಾರಕಹೊಳಿ ಗೆಸ್ಟ್ ಹೌಸ್​ನಲ್ಲಿ 200ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಗಂಟಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಬರುವ ಮೊದಲೇ ಎಲ್ಲರೂ ಬಿಟ್ಟು ಕಳುಹಿಸಲಾಗಿದೆ. ಲಕ್ಷಣ ಹೊಂದಿವರನ್ನು ಮಾತ್ರ ಸಂಸ್ಥಾನಿಕ ಕೇಂದ್ರದಲ್ಲಿ ಇಡಲಾಗಿದೆ.

ಹೀಗೆ ಮನೆಗೆ ಹೋದ ಬೆಳಗಾವಿ ತಾಲೂಕಿನ ಇಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಮತ್ತೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೀಗೆಂದು ಖುದ್ದು ಶಾಸಕ ಸತೀಶ್ ಜಾರಕಿಹೊಳಿಯವರೇ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಈ ಯಡವಟ್ಟು ಸಿಎಂ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 1818 ಜನರ ವರದಿ ಇನ್ನೂ ಬರೋದು ಬಾಕಿ ಉಳಿದಿದೆ. ಹೀಗೆ ಕ್ವಾರಂಟೈನ್​​ನಲ್ಲಿ ಇರೋವರನ್ನು ಬಿಟ್ಟು ಕಳುಹಿಸಿದ್ದು ಆತಂಕ ಸೃಷ್ಠಿಸಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಯಾರೊಬ್ಬರಲ್ಲಿಯೂ ಲಕ್ಷಣ ಇರಲಿಲ್ಲ. ಇಷ್ಟಾಗಿಯೂ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.ಈ ಬಗ್ಗೆ ಮಾತನಾಡಿದ ಬೆಳಗಾವಿ ಡಿಎಚ್​ಓ ಶಶಿಕಾಂತ ಮುನ್ನಾಳ್, ಇದು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ. ಸರ್ಕಾರ ಆದೇಶ ಹಿನ್ನೆಲೆಯಲ್ಲಿ ಕ್ವಾರಂಟೈನ್​​ನಲ್ಲಿ ಇದ್ದವರನ್ನು ಹೊಂ ಕ್ವಾರಂಟೈನ್ ಕಳುಹಿಸಲಾಗಿದೆ ಎಂದಿದ್ದಾರೆ. ಹೋಂ ಕ್ವಾರಂಟೈನ್ ಇರೋವರಿಗೆ ಸೋಂಕು ವ್ಯಾಪಿಸಿದ್ರೆ ಯಾರು ಜವಾಬ್ದಾರಿ ಎಂದು ಮಾತ್ರ ಸ್ಪಷ್ಟ ಪಡಿಸಿಲ್ಲ.
First published: May 31, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading