ಈದ್ ಹಬ್ಬ ಆಚರಿಸಲ್ಲ ಎಂದುಹೇಳಿ ವಲಸಿಗರಿಗೆ ಅನ್ನದಾತನಾದ ಆರ್​ಸಿಬಿ ತಂಡದ ಆಟಗಾರ!

ಕೊರೋನಾ ವೈರಸ್ ಲಾಕ್​ಡೌನ್​ನಿಂದಾಗಿ ಬಡವರು ಸಂಕಷ್ಟದಲ್ಲಿದ್ದಾರೆ. ಉಳಿದು ಕೊಳ್ಳಲು ಸರಿಯಾದ ಮನೆ, ಒಂದೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಈ ವರ್ಷ ನಾನು ಈದ್ ಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ ಎಂದು ಸರ್ಫರಾಜ್ ಹೇಳಿದ್ದಾರೆ.

news18-kannada
Updated:May 20, 2020, 1:31 PM IST
ಈದ್ ಹಬ್ಬ ಆಚರಿಸಲ್ಲ ಎಂದುಹೇಳಿ ವಲಸಿಗರಿಗೆ ಅನ್ನದಾತನಾದ ಆರ್​ಸಿಬಿ ತಂಡದ ಆಟಗಾರ!
ಆರ್​ಸಿಬಿ ತಂಡ.
  • Share this:
ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡು ಬರಿಗೈಯಲ್ಲಿ ಬಳಲುತ್ತಿದ್ದ ವಲಸೆ‌ ಕಾರ್ಮಿಕರು ನಡೆದುಕೊಂಡೇ ಮನೆಗೆ ಸಾಗುತ್ತಿದ್ದಾರೆ. ಹೀಗೆ ತಮ್ಮ ಊರುಗಳಿಗೆ ತೆರಳುತ್ತಿರುವ ಬಡ ಕಾರ್ಮಿಕರಿಗೆ ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ, ಮುಂಬೈ ಕ್ರಿಕೆಟಿಗ ಸರ್ಫರಾಜ್ ಖಾನ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಸರ್ಫರಾಜ್ ಅವರು ತಮ್ಮ ಮುಷೀರ್ ಹಾಗೂ ತಂದೆ ನೌಶಾದ್ ಜೊತೆಗೂಡಿ ಉತ್ತರ ಪ್ರದೇಶದ ಅಜಂಘಡದಲ್ಲಿನ ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣ, ಸೇಬು, ಬಾಳೆ ಹಣ್ಣ, ಬಿಸ್ಕೇಟ್ಸ್​ ಹಾಗೂ ನಿರೀನ ಬಾಟಲಿ ನೀಡಿ ಮಾನವೀಯತೆ ಮೆರೆದಿದ್ದಾರೆ.

COVID-19: ಕ್ವಾರಂಟೈನ್ ಕೇಂದ್ರವಾದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ

ಈ ಕುರಿತು ಮಾತನಾಡಿರುವ ಸರ್ಫರಾಜ್, ಈ ಕೆಲಸದ ಆಲೋಚನೆ ಮೊದಲಿಗೆ ಹೊಳೆದದ್ದು ನನ್ನ ತಂದೆಗೆ. ಇಲ್ಲಿಯವರೆಗೂ ಸಾವಿರಕ್ಕೂ ಅಧಿಕ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಪ್ರತಿ ಆಹಾರದ ಪೊಟ್ಟಣದಲ್ಲಿ ಒಂದು ಸೇಬು, ಬಾಳೆ ಹಣ್ಣು, ಕೇಕ್, ಬಿಸ್ಕೇಟ್ಸ್ ಹಾಗೂ ನೀರಿನ ಬಾಟಲಿ ಒಳಗೊಂಡಿದೆ ಎಂದು ಸರ್ಫರಾಜ್ ಹೇಳಿದ್ದಾರೆ.

ಇನ್ನೂ ಕೊರೋನಾ ವೈರಸ್ ಲಾಕ್​ಡೌನ್​ನಿಂದಾಗಿ ಬಡವರು ಸಂಕಷ್ಟದಲ್ಲಿದ್ದಾರೆ. ಉಳಿದು ಕೊಳ್ಳಲು ಸರಿಯಾದ ಮನೆ, ಒಂದೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಈ ವರ್ಷ ನಾನು ಈದ್ ಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.

ವಿಡಿಯೋ ಕೃಪೆ: ಎನ್​ಬಿಟಿ

 


MS Dhoni: ಧೋನಿ ಅಭಿಮಾನಿಗಳು ನನಗೆ ಮನ ಬಂದಂತೆ ಬೈದಿದ್ದರು ಎಂದ ಆಕಾಶ್ ಛೋಪ್ರ!

ಕೊರೋನಾದಿಂದಾಗಿ ರಾಷ್ಟ್ರದಾದ್ಯಂತ ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ ಘೋಷಿಸಲಾಗಿತ್ತು. ಹೀಗಾಗಿ ರೈಲು ಸಂಚಾರವನ್ನೂ ಸ್ಥಗಿತ ಮಾಡಲಾಗಿತ್ತು. ಆದರೆ, ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಈಗ ಶ್ರಮಿಕ್‌ ರೈಲುಗಳನ್ನು ಆರಂಭಿಸಿದೆ. ಇಲ್ಲಿಯವರೆಗೆ ಒಟ್ಟು 1600 ರೈಲುಗಳ ಮೂಲಕ ಸುಮಾರು 21.5 ಲಕ್ಷ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಿದೆ.
First published: May 20, 2020, 1:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading