Sara Ali Khan: ಒಡಿಸ್ಸಿ ನೃತ್ಯ ಮಾಡಿದ ಸಾರಾ ಅಲಿ ಖಾನ್​ ವಿಡಿಯೋ ವೈರಲ್​..!

Odissi Dance By Sara Ali Khan: ಸಾರಾ ಹಂಚಿಕೊಂಡಿರುವ ವಿಡಿಯೋ ಒಡಿಸ್ಸಿ ನೃತ್ಯ ಶೈಲಿಯದ್ದು. ಅಭಿಮಾನಿಗಳಿಗೆ ಉತ್ಕಲ ದಿಬಾಸ್​ ಎಂದು ಶುಭ ಕೋರಿದ್ದಾರೆ ಸಾರಾ. ಏ. 1 ರಂದು ಬಿಹಾರ್​ನಿಂದ ಒಡಿಶಾ ವಿಭಜನೆಯಾಗಿದ್ದು, ಆ ದಿನವನ್ನು ಉತ್ಕಲ ದಿಬಾಸ್​ ಎಂದು ಆಚರಿಸಲಾಗುತ್ತದೆ.

Anitha E | news18-kannada
Updated:April 2, 2020, 10:51 AM IST
Sara Ali Khan: ಒಡಿಸ್ಸಿ ನೃತ್ಯ ಮಾಡಿದ ಸಾರಾ ಅಲಿ ಖಾನ್​ ವಿಡಿಯೋ ವೈರಲ್​..!
ಸಾರಾ ಅಲಿ ಖಾನ್​
  • Share this:
ಸಾರಾ ಅಲಿ ಖಾನ್​ ಎಷ್ಟು ಚೆನ್ನಾಗಿ ಬಾಲಿವುಡ್​ ಸ್ಟೈಲ್​ ಡ್ಯಾನ್ಸ್ ಮಾಡುತ್ತಾರೆ ಅಂತ ಬೆಳ್ಳಿ ತೆರೆ ಮೇಲೆ ನೋಡಿದ್ದೀರಿ. ಅಷ್ಟೇ ಚೆನ್ನಾಗಿ ಅವರು ಫೋಕ್​ ಡ್ಯಾನ್ಸ್ ಸಹ ಮಾಡುತ್ತಾರೆ. ತಮ್ಮ ಹಳೆಯ ವಿಡಿಯೋ ಒಂದನ್ನು ಸಾರಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್​ ಆಗುತ್ತಿದೆ. 

ಸಾರಾ ಹಂಚಿಕೊಂಡಿರುವ ವಿಡಿಯೋ ಒಡಿಸ್ಸಿ ನೃತ್ಯ ಶೈಲಿಯದ್ದು. ಅಭಿಮಾನಿಗಳಿಗೆ 'ಉತ್ಕಲ ದಿಬಾಸ್'​ ಎಂದು ಶುಭ ಕೋರಿದ್ದಾರೆ ಸಾರಾ. ಏ. 1 ರಂದು ಬಿಹಾರ್​ನಿಂದ ಒಡಿಶಾ ವಿಭಜನೆಯಾಗಿದ್ದು, ಆ ದಿನವನ್ನು 'ಉತ್ಕಲ ದಿಬಾಸ್'​ ಎಂದು ಆಚರಿಸಲಾಗುತ್ತದೆ.
 View this post on Instagram

 

A post shared by Sara Ali Khan (@saraalikhan95) on


ಸಾರಾ ಹಂಚಿಕೊಂಡಿರುವ ವಿಡಿಯೋ ತುಂಬಾ ಹಳೆಯದ್ದಾಗಿದ್ದು, ಅದರಲ್ಲಿ ಕ್ಲಾರಿಟಿ ಅಷ್ಟಾಗಿ ಇಲ್ಲವಾದರೂ, ಇದು ವೈರಲ್​ ಆಗುತ್ತಿದೆ. ಇತ್ತೀಚೆಗಷ್ಟೆ ಸಾರಾ ಅಲಿ ಖಾನ್​ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಪಿಎಂ ಕೇರ್ಸ್ ನಿಧಿ​ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗ ಪರಿಹಾರ ನಿಧಿಗೆ ಧನ ಸಹಾಯ ಮಾಡುವುದಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇಮ್ತಿಯಾಜ್​ ಅಲಿ ನಿರ್ದೇಶನದ 'ಲವ್ ಆಜ್ ಕಲ್'​ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ ಜೊತೆ ಕಾಣಿಸಿಕೊಂಡಿದ್ದರು. ಅಕ್ಷಯ್​ ಕುಮಾರ್ ಹಾಗೂ ಧನುಷ್​ ಜೊತೆ 'ಅತರಂಗಿ ರೇ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

&nbspPrakash Rai: 500 ಕುಟುಂಬಗಳ ತುತ್ತಿನ ಬುತ್ತಿ ತುಂಬಿಸುತ್ತಿರುವ ಪ್ರಕಾಶ್​ ರೈ..!
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading