ಕೊರೋನಾದಿಂದ ಹೊಸ ಆವಿಷ್ಕಾರಗಳಿಗೆ ಬಂತು ಮಾರುಕಟ್ಟೆ; ಸ್ಯಾನಿಟೈಸರ್ ಸ್ಟ್ಯಾಂಡ್​ಗೆ ಭಾರೀ ಬೇಡಿಕೆ

ಕೈ ಸ್ವಚ್ಛವಾಗಿಟ್ಟುಕೊಳ್ಳಲು ಸ್ಯಾನಿಟೈಸರ್ ಅಗತ್ಯ. ಆದ್ರೆ ಸ್ಯಾನಿಟೈಸರ್ ಡಬ್ಬದಿಂದಲೇ ವೈರಸ್ ಹರಡೋ ಅಪಾಯ ಹೆಚ್ಚಿರುತ್ತದೆ. ಸ್ಯಾನಿಟೈಸರ್ ಸ್ಟ್ಯಾಂಡ್​ನಲ್ಲಿ ಕಾಲಲ್ಲಿ ಅದರ ಪೆಡಲ್ ಒತ್ತಿದರೆ ಸ್ಯಾನಿಟೈಸರ್ ಹನಿಗಳು ಕೈಗೆ ಬೀಳುತ್ತವೆ. ಅವಶ್ಯಕತೆ ಇದ್ದಾಗ ಹೊಸಾ ಆವಿಷ್ಕಾರಗಳು ತಂತಾನೇ ಆಗುತ್ತವೆ ಎಂಬುದಕ್ಕೆ ಸ್ಯಾನಿಟೈಸರ್ ಸ್ಟ್ಯಾಂಡ್ ಒಂದು ನಿದರ್ಶನ.

ಹ್ಯಾಂಡ್​ ಫ್ರೀ ಸ್ಯಾನಿಟೈಸರ್​​ ಸ್ಟ್ಯಾಂಡ್​​

ಹ್ಯಾಂಡ್​ ಫ್ರೀ ಸ್ಯಾನಿಟೈಸರ್​​ ಸ್ಟ್ಯಾಂಡ್​​

  • Share this:
ಬೆಂಗಳೂರು(ಜೂನ್ 06): ಕೊರೋನಾ ಶುರುವಾದಾಗಿನಿಂದ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಈ ಮೂರೂ ಕೂಡ ಮನುಷ್ಯನ ಬೆಸ್ಟ್ ಫ್ರೆಂಡ್ಸ್ ಆಗಿಬಿಟ್ಟಿವೆ. ಅದೇ ರೀತಿ ಇದುವರೆಗೆ ಕಂಡು ಕೇಳರಿಯದ ಅನೇಕ ಉಪಕರಣಗಳು ಕೂಡ ಈಗ ಮಾರುಕಟ್ಟೆಗೆ ಬಂದು ಯಶಸ್ವಿಯಾಗಿವೆ. ಸ್ಯಾನಿಟೈಸರ್ ಸ್ಟ್ಯಾಂಡ್ ಕೂಡ ಅಂಥದ್ದೇ ಒಂದು. ಅವಶ್ಯಕತೆ ಇದ್ದಾಗ ಹೊಸಾ ಆವಿಷ್ಕಾರಗಳು ತಂತಾನೇ ಆಗುತ್ತವೆ ಎಂಬುದಕ್ಕೆ ಸ್ಯಾನಿಟೈಸರ್ ಸ್ಟ್ಯಾಂಡ್ ಒಂದು ನಿದರ್ಶನ.

ಮಾಸ್ಕ್, ಪಿಪಿಇ ಕಿಟ್​ಗಳ ರೀತಿಯಲ್ಲಿ ಎಲ್ಲೆಡೆ ನಾವು ಹೆಚ್ಚಾಗಿ ಕಾಣುತ್ತಿರುವ ವಸ್ತು ಎಂದರೆ ಅದು ಸ್ಯಾನಿಟೈಸರ್ ಸ್ಟ್ಯಾಂಡ್ಸ್. ಅಂಗಡಿ, ಕಚೇರಿ ಎಲ್ಲೇ ನೋಡಿದ್ರೂ ಸ್ಯಾನಿಟೈಸರ್ ಸ್ಟ್ಯಾಂಡ್ಸ್ ಇದ್ದೇ ಇರುತ್ತವೆ. ಇದಕ್ಕೆ ಕಾರಣ ಇವುಗಳು ವೈರಸ್ ನಿಂದ ಬಚಾವಾಗೋ ಸಿಂಪಲ್ ಉಪಾಯ. ಎಲ್ರೂ ಸ್ಯಾನಿಟೈಸರ್ ಡಬ್ಬದ ಮೇಲೆ ಪ್ರೆಸ್ ಮಾಡಿ ಕೈಗೆ ಸ್ಯಾನಿಟೈಸರ್ ಹಾಕಿಕೊಳ್ತಾರೆ. ಆದರೆ, ಇದ್ದೋರೆಲ್ಲಾ ಸ್ಯಾನಿಟೈಸರ್ ಡಬ್ಬ ಮುಟ್ಟುವುದರಿಂದ ಸೋಂಕು ಅಲ್ಲಿಂದಲೇ ಹರಡೋ ಅಪಾಯವೂ ಇರುತ್ತೆ. ಹಾಗಾಗೇ ಈ ಸ್ಯಾನಿಟೈಸರ್ ಸ್ಟ್ಯಾಂಡ್​ಗಳಿಗೆ ಭಾರೀ ಬೇಡಿಕೆ ಬಂದಿರೋದು.

ಇದನ್ನೂ ಓದಿ: ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ; ಏನೇ ಜವಾಬ್ದಾರಿ ಕೊಟ್ಟರೂ ಸ್ವೀಕರಿಸುತ್ತೇನೆ: ಮಾಜಿ ಬಿಜೆಪಿ ಸಂಸದ ವಿಜಯ್ ಸಂಕೇಶ್ವರ

ಕಬ್ಬಿಣದ ಈ ಸ್ಟ್ಯಾಂಡ್​ನ ಒಂದು ಕಡೆ ಸ್ಯಾನಿಟೈಸರ್ ಡಬ್ಬ ಇಡೋಕೆ ಸ್ಥಳವಿದೆ. ಕೆಳಗಿರುವ ಪೆಡಲ್​ನ್ನು ಒಂದು ಸಲ ಒತ್ತಿದರೆ ಮಾಡಿದ್ರೆ ಸಾಕು, ಕೈಗೆ ಕೆಲವು ಹನಿ ಸ್ಯಾನಿಟೈಸರ್ ದ್ರವ ಬೀಳುತ್ತೆ. ಇದರಿಂದಾಗಿ ಯಾರೂ ಏನನ್ನೂ ಮುಟ್ಟಬೇಕಾಗಿಲ್ಲ. ಎಲ್ರೂ ಚಪ್ಪಲಿ ಹಾಕಿದ ತಮ್ಮ ಕಾಲುಗಳಿಂದ ಪೆಡಲ್ ತುಳಿಯೋದರಿಂದ ನೇರವಾಗಿ ಚರ್ಮ ಈ ಸ್ಟ್ಯಾಂಡ್​ಗೆ ತಾಕೊಲ್ಲ. ಎಲ್ಲರೂ ಬಳಸಿದ ನಂತರ ಇಡೀ ಸ್ಟ್ಯಾಂಡ್​ಗೆ ರಾಸಾಯನಿಕ ಸಿಂಪಡಿಸಬಹುದು. ಸುಮಾರು ಒಂದರಿಂದ ಒಂದೂವರೆ ಸಾವಿರ ರೂ ಬೆಲೆಬಾಳುವ ಕಬ್ಬಿಣದ ಈ ಸ್ಟ್ಯಾಂಡ್​ಗಳು ಎಲ್ಲೆಡೆ ರಾರಾಜಿಸ್ತಿವೆ. ಒಂದುಕಡೆ ಎಲ್ಲಾ ವಸ್ತುಗಳ ವಹಿವಾಟು ಬಿದ್ದು ಹೋದಾಗ ತಯಾರಕರಿಗೆ ಈ ಹೊಸ ಪ್ರಾಡಕ್ಟ್ ಲಾಬ ತಂದುಕೊಡುತ್ತಿದೆ. ಮತ್ತೊಂದೆಡೆ ಎಷ್ಟು ಜೋಪಾನವಾಗಿದ್ದರೂ ಸಾಲೋಲ್ಲ ಅನ್ನೋ ಜನರ ಆತಂಕ ಕಡಿಮೆ ಮಾಡೋಕೆ ಈ ಸರಳ ಯಂತ್ರ ಸಹಕಾರಿಯಾಗಿದೆ.

First published: