ಕೈಯಿಂದ ಒತ್ತುವ ಸ್ಯಾನಿಟೈಸರ್ ಎಷ್ಟು ಸೇಫ್? ಹೊಸ ವಿಧಾನ ಆವಿಷ್ಕರಿಸಿದೆ ವಿಜಯಪುರದ ಈ ಪಾಲಿಟೆಕ್ನಿಕ್

ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾಸ್ಪತ್ರೆ ಸೇರಿದಂತೆ ನಾನಾ ಕಚೇರಿಗಳಲ್ಲಿ ಇದನ್ನು ಬಳಸಬಹುದಾಗಿದ್ದು, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದು ಉಪಯೋಗಿವಾಗಿದೆ.

ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ ಕಾಲೇಜು ಪ್ರಾಚಾರ್ಯರು

ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ ಕಾಲೇಜು ಪ್ರಾಚಾರ್ಯರು

  • Share this:
ವಿಜಯಪುರ(ಮೇ.15): ಈಗ ಎಲ್ಲೆಡೆ ಕೊರೋನಾ ಕಾಟ ಜೋರಾಗಿದೆ. ಇದನ್ನು ತಡೆಗಟ್ಟಲು ಮಾಸ್ಕ್, ಸ್ಯಾನಿಟೈಸರ್​ ಬಳಕೆಯೂ ಹೆಚ್ಚಾಗುತ್ತಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗುವ ಸ್ಯಾನಿಟೈಸರ್ ಬಳಸುವಾಗಲೂ ಜನ ಮುನ್ನೆಚ್ಚರಿಕೆ ವಹಿಸುಂತಾಗಿದೆ.  ಜನ ಕೈಯಿಂದ ಮುಟ್ಟಿ ಸ್ಯಾನಿಟೈಸರ್ ಬಳಸುವುದನ್ನು ತಪ್ಪಿಸಲು ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಹೊಸ ಸಂಶೋಧನೆ ಮಾಡಿ ಸ್ಥಳೀಯವಾಗಿ ಯಂತ್ರವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ. 

ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಸ್ಯಾನಿಟೈಸರ್ ಬಳಕೆ ಅನುಕೂಲವಾಗುವಂತೆ ಪೆಡೆಲ್ ಆಧಾರಿತ ಡಿಸ್ಪೆನ್ಸರಿ ಯಂತ್ರ ಸಂಶೋಧಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕೈಗಳಿಗೆ ಸ್ಯಾನಿಟೈಸರ್ ಬಳಸುತ್ತಾರೆ. ಜನ ಸಂದಣಿ ಇರುವ ಸ್ಥಳಗಳಲ್ಲಿ, ಕಛೇರಿಗಳ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಇಡುವುದು ಈಗ ಮಾಮೂಲಾಗಿದೆ. ಅವುಗಳನ್ನು ಕೈಯಿಂದ ಒತ್ತುವ ಮೂಲಕ ಸಾರ್ವಜನಿಕರು ಸ್ಯಾನಿಟೈಸರ್ ಬಳಸುತ್ತಿದ್ದಾರೆ. ಆದರೆ, ಇದಕ್ಕೆ ಪರ್ಯಾಯವಾಗಿ ಕಾಲಿನಿಂದ ಪೆಡೆಲ್ ಒತ್ತುವ ಮೂಲಕ ಸ್ಯಾನಿಟೈಸ್ ಬಳಸುವ ಹೊಸ ಯಂತ್ರವನ್ನು ಪಾಲಿಟೆಕ್ನಿಕ್ ರೂಪಿಸಿದೆ.

ಪಿವಿಸಿ ಪೈಪ್​ನಲ್ಲಿ ಚೌಕಟ್ಟು ತಯಾರಿಸಿ, ಮೇಲ್ಭಾಗದಲ್ಲಿ ಒಂದು ಲೀಟರ್ ಸ್ಯಾನಿಟೈಸರ್ ದ್ರಾವಣ ಸಂಗ್ರಹಿಸುವ ಬಾಕ್ ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಕಾಲಿನಿಂದ ಒತ್ತಿದರೆ ಸಾಕು. ಮೇಲೆ ಕೈಬಳಿ ಸ್ಯಾನಿಟೈಸರ್ ಹೊರ ಬರುತ್ತದೆ.ಇದರ ಬಳಕೆಯೂ ತುಂಬಾ ಸರಳವಾಗಿದೆ. ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾಸ್ಪತ್ರೆ ಸೇರಿದಂತೆ ನಾನಾ ಕಚೇರಿಗಳಲ್ಲಿ ಇದನ್ನು ಬಳಸಬಹುದಾಗಿದ್ದು, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದು ಉಪಯೋಗಿವಾಗಿದೆ.

5 ಯಂತ್ರಗಳನ್ನು ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿಗಳ ವೈ. ಎಸ್. ಪಾಟೀಲ ಅವರಿಗೆ ನೀಡಲಾಯಿತು. ಸ್ಥಳಿಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ, ವಿನೂತನ ಉತ್ಪನ್ನ ತಯಾರಿಸಿರುವ ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ :  ಮುಂಬೈಯಿಂದ ಮತ್ತೊಂದು ರೈಲು ; ಆತಂಕದಲ್ಲಿ ಕಲಬುರ್ಗಿ ಜನರು

ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಮಹಾಂತೇಶ ಬಿರಾದಾರ, ಡಾ. ಆರ್.ಬಿ. ಕೊಟ್ನಾಳ, ಪ್ರಾಚಾರ್ಯ ಎಸ್. ಜೆ. ಗೌಡರ, ಮೆಕ್ಯಾನಿಕಲ್ ವಿಭಾಗದ ಎ.ಎ. ಬಿರಾದಾರ, ಪಿ.ಬಿ. ಕಳಸಗೊಂಡ ಸೇರಿದಂತೆ ಮತ್ತಿತರರು ಈ ಯಂತ್ರಗಳನ್ನು ವಿಜಯಪುರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.
First published: