• ಹೋಂ
  • »
  • ನ್ಯೂಸ್
  • »
  • Corona
  • »
  • ಕೋವಿಡ್-19 ಎಫೆಕ್ಟ್​; ಈ ಸೂಪರ್ ಮಾರ್ಕೆಟ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸ್ಯಾನಿಟರ್ ಪ್ಯಾಡ್ ವಿತರಣೆ

ಕೋವಿಡ್-19 ಎಫೆಕ್ಟ್​; ಈ ಸೂಪರ್ ಮಾರ್ಕೆಟ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸ್ಯಾನಿಟರ್ ಪ್ಯಾಡ್ ವಿತರಣೆ

ಸ್ಯಾನಿಟರಿ ಪ್ಯಾಡ್

ಸ್ಯಾನಿಟರಿ ಪ್ಯಾಡ್

ಐರ್ಲ್ಯಾಂಡ್ ಮತ್ತು ಬ್ರಿಟನ್‌ನ ಸೂಪರ್ ಮಾರ್ಕೆಟ್‌ನಲ್ಲಿ ಸ್ಯಾನಿಟರಿ ಪ್ಯಾಡ್ಸ್ ಮತ್ತು ಟ್ಯಾಂಪೂನ್‌ಗಳನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡುವ ಸ್ಫೂರ್ತಿದಾಯಕ ಕೆಲಸ ಮಾಡುತ್ತಿದ್ದಾರೆ.

  • Share this:

ಕೋವಿಡ್ 19 ಸಾಂಕ್ರಾಮಿಕದ ತೀವ್ರತೆ ಎಲ್ಲೆಲ್ಲಿ ತನ್ನ ಕಬಂಧ ಬಾಹು ಚಾಚುತ್ತಿದೆಯೋ ಗೊತ್ತಿಲ್ಲ. ಅದರಲ್ಲೂ ಆಹಾರಕ್ಕೆ ಸಾಕಷ್ಟು ತತ್ವಾರ ಉಂಟಾಗಿರುವ ಈ ಸಮಯದಲ್ಲಿ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆ ಬಗ್ಗೆ ಚಿಂತಿಸುವುದಕ್ಕೆ ಎಷ್ಟು ಜನರಿಗೆ ಸಾಧ್ಯವಿದೆ? ಆದರೆ ಐರ್ಲ್ಯಾಂಡ್ ಮತ್ತು ಬ್ರಿಟನ್‌ನಲ್ಲಿ ಮುಟ್ಟಿನ ಸಮಸ್ಯೆ ಮತ್ತು ಅದರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಎರಡು ಸೂಪರ್ ಮಾರ್ಕೆಟ್‌ಗಳು ಶ್ಲಾಘನೀಯ ಕಾರ್ಯ ಮಾಡುತ್ತಿವೆ.


ಸೂಪರ್ ಮಾರ್ಕೆಟ್‌ನಲ್ಲಿ ಸ್ಯಾನಿಟರಿ ಪ್ಯಾಡ್ಸ್ ಮತ್ತು ಟ್ಯಾಂಪೂನ್‌ಗಳನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡುವ ಸ್ಫೂರ್ತಿದಾಯಕ ಕೆಲಸ ಮಾಡುತ್ತಿದ್ದಾರೆ. 'ಮುಟ್ಟಿನ ಬಡತನ' ಹೋಗಾಲಾಡಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಐ‌ಲ್ಯಾಂಡ್‌ನ ಡಿಸ್ಕೌಂಟ್ ಅಂಗಡಿಯ ಲಿಡ್ಲ್ ಅವರು ಹೇಳುವ ಪ್ರಕಾರ 'ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ ಅಥವಾ 'ಮುಟ್ಟಿನ ಬಟ್ಟಲು' ಗಳನ್ನು ಕೊಳ್ಳಲು ಸಾಧ್ಯವಾಗದ ಮಹಿಳೆ ಮತ್ತು ಹುಡುಗಿಯರಿಗೆ ಉಚಿತವಾಗಿ ನೀಡುತ್ತಿರುವ ವಿಶ್ವದ ಮೊದಲ ರೀಟೇಲರ್ ಕಂಪನಿಯಾಗುತ್ತದೆ' ಎಂದಿದ್ದಾರೆ.


ಈ ಯೋಜನೆಯು ಮೇನಿಂದ ಪ್ರಾರಂಭವಾಗಲಿದ್ದು, ಐರಿಶ್ ಸಂಸತ್ತು ಮುಟ್ಟಿನ ಅಗತ್ಯ ವಸ್ತುಗಳನ್ನು ಉಚಿತವಾಗಿ ಕೊಡುವ ಯೋಜನೆಯನ್ನು ಪರಿಗಣಿಸಬಹುದು ಎಂದಿದ್ದಾರೆ. ಕಳೆದ ನವೆಂಬರ್‌ನಲ್ಲಿ ಸ್ಕಾಟ್ಲ್ಯಾಂಡ್ ಈ ರೀತಿಯಾಗಿ ಪ್ಯಾಡ್ ಮತ್ತು ಟ್ಯಾಂಪೂನ್ಸ್‌ಗಳನ್ನು ಉಚಿತವಾಗಿ ನೀಡಿದ ಮೊದಲ ದೇಶವಾಗಿದೆ.


ಮಾರಿಸನ್ಸ್‌ನ ವಕ್ತಾರೆ ಹೇಳುವ ಪ್ರಕಾರ 'ಥಾಮ್ಸನ್ ರಾಯಿಟರ್ಸ್ ಫೌಂಡೇಶನ್‌ ಈ ಯೋಜನೆಯನ್ನು ರಾಷ್ಟ್ರೀಯವಾಗಿ ರೂಪಿಸಿಲ್ಲ, ಆದರೆ ಭವಿಷ್ಯದಲ್ಲಿ ಇದನ್ನು ವಿಸ್ತರಿಸಲು ಯೋಚಿಸಬಹುದು' ಎಂದು ಹೇಳಿದರು.
'ಮುಟ್ಟಿನ ಬಡತನ - ಮುಟ್ಟಿನ ಸಮಯದಲ್ಲಿ ಅಗತ್ಯವಾದ ವಸ್ತುಗಳನ್ನು ಕೊಳ್ಳುವಲ್ಲಿ ಅಸಮರ್ಥರಾಗುವುದು. ಸ್ವಚ್ಛ ಮಾಡುವುದು ಮತ್ತು ಶಿಕ್ಷಣದ ಕೊರತೆ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಕೆಲಸ ಮತ್ತು ಶಾಲೆಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ ಸೋಂಕಿಗೆ ಹತ್ತಿರುವಾಗುತ್ತಿದ್ದು ಬ್ಯಾಕ್ಟೀರಿಯಾ ಸಂಬಂಧಿತ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ'.


'ಪ್ರಪಂಚದಲ್ಲೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಕುಟುಂಬವನ್ನು ಪೋಷಿಸುವುದೇ ಅಥವಾ ಮುಟ್ಟಿನ ಅಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡುವುದೇ ಎಂದು ಆಲೋಚಿಸುವ ಅಗತ್ಯವಿಲ್ಲ' ಎಂದು ಐರ್ಲ್ಯಾಂಡ್‌ನ ಹೋಂ ಲೆಸ್ ಪೀರಿಯಡ್‌ನ ಸಂಸ್ಥಾಪಕ ಕ್ಲೇರ್ ಹಂಟ್ ಹೇಳಿದರು.


ಅಂತಾರಾಷ್ಟ್ರೀಯ ಚಾರಿಟಿ ಪ್ಲಾನ್ ಇಂಟರ್ನ್ಯಾಷನಲ್ ಸಂಶೋಧನೆ ಹೇಳುವ ಪ್ರಕಾರ 'ಐರ್ಲೆಂಡ್‌ನ ಸುಮಾರು 12 ರಿಂದ 19 ವರ್ಷದ ಮಕ್ಕಳಲ್ಲಿ ಅರ್ಧದಷ್ಟು ಜನರು ಮುಟ್ಟಿನ ಅಗತ್ಯ ಉತ್ಪನ್ನಗಳನ್ನು ಕೊಳ್ಳಲು ಪರದಾಡುತ್ತಿದ್ದಾರೆ. ಶೇಕಡಾ 10 ರಷ್ಟು ಜನರು ಹಣದ ಕೊರತೆಯಿಂದ ಅಪಾಯವನ್ನುಂಟು ಮಾಡುವ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ'.


ಲಿಡ್ಲ್ ಹೇಳುವ ಪ್ರಕಾರ 'ತನ್ನ ಗ್ರಾಹಕರಿಗೆ ಉಚಿತ ಸ್ಯಾನಿಟರಿ ಪ್ಯಾಡ್ಸ್ ಅಥವಾ ಟ್ಯಾಂಪೂನ್ಸ್‌ಗಾಗಿ ಕೂಪನ್ ನೀಡಲಿದ್ದು, ಪ್ರತಿ ತಿಂಗಳು ಆ್ಯಪ್ ಮೂಲಕ ಮುಟ್ಟಿನ ಉತ್ಪನ್ನಗಳನ್ನು ಮನೆಯಿಲ್ಲದ, ಸ್ಮಾರ್ಟ್‌ಫೋನ್‌ ಬಳಸಲಾಗದವರಿಗೆ ದಾನವಾಗಿ ನೀಡಲಾಗುತ್ತಿದೆ'.


ಲೇಡೀಸ್ ಗೇಲಿಕ್ ಫುಟ್‌ಬಾಲ್ ಅಸೋಸಿಯೇಶನ್‌ನೊಂದಿಗೆ ಕೆಲಸ ಮಾಡುತ್ತಿದ್ದು, ದೇಶಾದ್ಯಂತ ಕ್ಲಬ್‌ಗಳಿಗೆ ಉಚಿತವಾಗಿ ಮುಟ್ಟಿನ ಉತ್ಪನ್ನಗಳನ್ನು ನೀಡಲು ಯೋಜಿಸುತ್ತಿದೆ. 2018 ರಿಂದಲೇ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ ಗಳನ್ನು ವಿತರಿಸುತ್ತಿರುವ ವಿಶ್ವದ ಮೊದಲ ದೇಶವೇ ಸ್ಕಾಟ್ಲ್ಯಾಂಡ್. ಇಂಗ್ಲೆಂಡ್ ಮತ್ತು ವೇಲ್ಸ್ ಇದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಿವೆ.


ಪ್ಲಾನ್ ಇಂಟರ್‌ನ್ಯಾಷನಲ್‌ನ 2017 ರ ಸಮೀಕ್ಷೆಯಲ್ಲಿ ಬ್ರಿಟನ್‌ನ ಏಳು ಹುಡುಗಿಯರಲ್ಲಿ ಒಬ್ಬ ಹುಡುಗಿ ಮುಟ್ಟಿನ ಉತ್ಪನ್ನಗಳನ್ನು ಕೊಳ್ಳಲು ಕಷ್ಟಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

First published: