ಕೊರೋನಾ ಬಗ್ಗೆ ತಲೆಗೆ ಹುಳಬಿಟ್ಟ ಭಟ್ರು!

ಯೋಗರಾಜ್​ ಭಟ್​ ನಿರ್ದೇಶಿಸಿರುವ ಸಿನಿಮಾಗಳು, ಹಾಡುಗಳು, ಸಿನಿಮಾ ಡೈಲಾಗ್​ಗಳು ಭಾರೀ ವಿಭಿನ್ನವಾಗಿರುತ್ತದೆ. ಹಾಗಾಗಿ ಭಟ್ರು ಗೀಚಿದ್ದರೆ ಅದರಲ್ಲೇನೋ ಸಂದೇಶವಿರುತ್ತದೆ ಎಂಬುವುದು ಎಲ್ಲರಿಗೂ ಗೊತ್ತು. ಇದೀಗ ದೇಶ-ವಿದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ ಬಗ್ಗೆ ಅವರು ಬರೆದಿರುವ ಸಾಲುಗಳು ಕೂಡ ಭಾರೀ ವಿಭಿನ್ನವಾಗಿದೆ.

ಯೋಗರಾಜ್​ ಭಟ್

ಯೋಗರಾಜ್​ ಭಟ್

 • Share this:
  ಜಗತ್ತಿನಾದ್ಯಂತ ಜನರ ಜೀವ ಹಿಂಡುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಎಲ್ಲಾ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಜನರನ್ನು ಸಾವಿನ ಸುಳಿಗೆ ನೂಕಿದ ಕೊರೋನಾ ಬಗ್ಗೆ ಮಾಧ್ಯಮಗಳು ಪ್ರತಿನಿತ್ಯ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ. ಮತ್ತೊಂದೆಡೆ ಸೆಲೆಬ್ರಿಟಿಗಳು, ನಟ-ನಟಿಯರು ಕೂಡ ಈ ಬಗ್ಗೆ ಜಾಗೃತಿ ಸಂದೇಶ ಸಾರುತ್ತಿದ್ದಾರೆ. ಅದರಂತೆ ನಿರ್ದೇಶಕ ಯೋಗರಾಜ್​ ಭಟ್ ಕೂಡ​ ಕೊರೋನಾ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನ ಜನರ ಮುಂದಿಟ್ಟಿದ್ದಾರೆ.

  ಯೋಗರಾಜ್​ ಭಟ್​ ನಿರ್ದೇಶಿಸಿರುವ ಸಿನಿಮಾಗಳು, ಹಾಡುಗಳು, ಸಿನಿಮಾ ಡೈಲಾಗ್​ಗಳು ಭಾರೀ ವಿಭಿನ್ನವಾಗಿರುತ್ತದೆ. ಹಾಗಾಗಿ ಭಟ್ರು ಗೀಚಿದ್ದರೆ ಅದರಲ್ಲೇನೋ ಸಂದೇಶವಿರುತ್ತದೆ ಎಂಬುವುದು ಎಲ್ಲರಿಗೂ ಗೊತ್ತು. ಇದೀಗ ದೇಶ-ವಿದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ ಬಗ್ಗೆ ಅವರು ಬರೆದಿರುವ ಸಾಲುಗಳು ಕೂಡ ಭಾರೀ ವಿಭಿನ್ನವಾಗಿದೆ.

  ಯೋಗರಾಜ್​ ಭಟ್ರು ಕೊರೋನಾ ಬಗ್ಗೆ ಬರೆದಿರುವ ಸಾಲುಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ‘ಅಕಸ್ಮಾತ್, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್‍ಗಳಾಗಿದ್ದು, ಈ ಕೊರೋನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ ಆಗಿದ್ದರೆ ಏನು ಮಾಡುವುದು? ಎಂದು ಪ್ರಶ್ನೆ ಕೇಳುವ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಅದರ ಜೊತೆಗೆ ಕೊನೆಯಲ್ಲಿ ಇದು ನಾನು ಹೇಳಿದ್ದಲ್ಲ, ಬೇರೆ ಯಾರೋ ಹೇಳಿದ್ದು ಎಂದು ಬರೆದುಕೊಂಡಿದ್ದಾರೆ.

  ಇನ್ನು ಯೋಗರಾಜ್​ ಭಟ್​ ಬರೆದಿರುವ ಸಾಲುಗಳನ್ನು ನೋಡಿ ದೊಡ್ಡ ವೈರಸ್ ಅನ್ನು ನೀವು ನಮ್ಮ ತಲೆಗೆ ಬಿಟ್ರಲ್ಲಾ  ಭಟ್ರೆ ಕೆಲವರು ಕಾಮೆಂಟ್​ ಬರೆದಿದ್ದಾರೆ. ಕೆಲವರು ಈ ವೈರಸ್‍ಗೆ ಕೊರೋನಾ ಅಂತ ಹೆಸರಿಟ್ಟಿದ್ದೇವೆ, ಆದರೆ ಈ ವೈರಸ್ ನಮಗೆ ಯಾವ ಹೆಸರಿಟ್ಟಿದೆಯೋ? ಎಂದು ಹೇಳಿದ್ದಾರೆ.

  ಇದನ್ನೂ ಓದಿ: ವಾಟ್ಸ್ಆ್ಯಪ್​ ಬಳಕೆದಾರರೇ ಡಿಲೀಟ್ ಆಗಿರುವ ಮೆಸೇಜ್ ಮತ್ತೆ ನೋಡಬಹುದು! ಹೇಗೆ ಗೊತ್ತಾ?

  ಇದನ್ನೂ ಓದಿ: ಸಾರ್ವಜನಿಕವಾಗಿಯೇ ಮಿಡಲ್ ಫಿಂಗರ್ ತೋರಿದ ಆಲಿಯಾ ಭಟ್!; ವಿಡಿಯೋ ವೈರಲ್​
  First published: