HOME » NEWS » Coronavirus-latest-news » SANDALWOOD DIRECTOR AND PRODUCER DIE FROM CORONAVIRUS RHHSN HTV

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಕೊರೋನಾಘಾತ! ನಿರ್ದೇಶಕ, ನಿರ್ಮಾಪಕ ಸ್ವಾತಿ ಅಂಬರೀಶ್ ಬಲಿ

ಕನ್ನಡ ಚಿತ್ರರಂಗದ ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್, ನಟ ಗಜ ರಾಜ್... ಹೀಗೆ ಕಳೆದ ಎರಡು ವಾರಗಳಿಂದ ಹತ್ತಕ್ಕೂ ಹೆಚ್ಚು ಸ್ಯಾಂಡಲ್‌ವುಡ್ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

news18-kannada
Updated:May 5, 2021, 8:12 PM IST
ಸ್ಯಾಂಡಲ್‌ವುಡ್‌ಗೆ ಮತ್ತೊಂದು ಕೊರೋನಾಘಾತ! ನಿರ್ದೇಶಕ, ನಿರ್ಮಾಪಕ ಸ್ವಾತಿ ಅಂಬರೀಶ್ ಬಲಿ
ಸ್ವಾತಿ ಅಂಬರೀಶ್
  • Share this:
ಬೆಂಗಳೂರು: ಕೊರೋನಾ ಎರಡನೇ ಅಲೆ ಮೊದಲ ಅಲೆಗಿಂತ ಹೆಚ್ಚು ಭೀಕರವಾಗಿದೆ. ಅತಿ ವೇಗವಾಗಿ ಜನರ ದೇಹಗಳನ್ನು ಹೊಕ್ಕು, ಸಾವಿನ ಮನೆಗೆ ತಳ್ಳುತ್ತಿದೆ. ಸಾಮಾನ್ಯ ಜನರನ್ನಷ್ಟೇ ಅಲ್ಲ, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳನ್ನೂ ಈ ಕೋವಿಡ್ ಸೋಂಕು ಬೆಂಬಿಡದೇ ಕಾಡುತ್ತಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈಗ ಈ ಕಣ್ಣಿಗೆ ಕಾಣದ ಮಾರಕ ಸೋಂಕಿಗೆ ಮತ್ತೊಬ್ಬ ಸ್ಯಾಂಡಲ್‌ವುಡ್ ನಿರ್ದೇಶಕ ಬಲಿಯಾಗಿದ್ದಾರೆ.

ಹೌದು, ಸ್ವಾತಿ ಅಂಬರೀಶ್ ಎಂದೇ ಹೆಸರುವಾಸಿಯಾಗಿದ್ದ ಎಚ್ ಸಿ ಕುಮಾರಸ್ವಾಮಿ ಇಂದು ಕೊರೋನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. 2019 ರಲ್ಲಿ ರಿಲೀಸ್ ಆಗಿದ್ದ ದೇವದಾಸಿಯರು ಎಂಬ ಚಿತ್ರಕ್ಕೆ ಸ್ವಾತಿ ಅಂಬರೀಷ್ ಅವರು ಆಕ್ಷನ್ ಕಟ್ ಹೇಳಿದ್ದರು. ಜೊತೆಗೆ ತಾವೇ ಆ ಸಿನಿಮಾವನ್ನು ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಕೂಡ. ಕೆಲ ದಿನಗಳಿಂದೀಚೆಗೆ ಕೊರೋನಾ ಸೋಂಕು ತಗುಲಿದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸ್ವಾತಿ ಅಂಬರೀಷ್ ಅವರಿಗೆ 42 ವರ್ಷ ವಯಸ್ಸಾಗಿತ್ತು.

ಕಳೆದ ಎರಡು ವಾರಗಳಿಂದ ಕೋವಿಡ್ ಸೋಂಕಿಗೆ ಸ್ಯಾಂಡಲ್‌ವುಡ್‌ನ ಸರಿ ಸುಮಾರು ಹತ್ತು ಮಂದಿ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅರ್ಥಾತ್ ಮೇ 2ರಂದು ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಹಾಗೇ ಮೇ 1ರಂದು 2011ರಲ್ಲಿ ಒನ್ ಡೇ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನವೀನ್ ಕುಮಾರ್ ಕೊರೋನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ 22ರಂದು ಹಿರಿಯ ನಿರ್ಮಾಪಕ ಅಣ್ಣಯ್ಯ, ಬಿಂದಾಸ್, ರನ್ನ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್ ಅವರು ಕೋವಿಡ್‌ಗೆ ಬಲಿಯಾಗಿದ್ದರು. ಹಾಗೇ ಕರ್ನಾಟಕ ಚಲನಚಿತ್ರ ವರ್ಣಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷ ಆರ್. ಶ್ರೀನಿವಾಸ್ ಕೂಡ ಕೆಲ ದಿನಗಳ ಹಿಂದಷ್ಟೇ ಈ ಮಹಾಮಾರಿಗೆ ತುತ್ತಾಗಿದ್ದರು.

ಇದನ್ನು ಓದಿ: Actor Doddanna: ಹಿರಿಯ ನಟ ದೊಡ್ಡಣ್ಣ ಕುರಿತ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಲು ಅವರೇ ಬರಬೇಕಾಯಿತು

ಹಿರಿಯ ನಿರ್ದೇಶಕ, ಹೆಸರಾಂತ ಪೋಸ್ಟರ್ ಡಿಸೈನರ್ ಮಸ್ತಾನ್ ಕೂಡ ಇದೇ ಏಪ್ರಿಲ್ 21ರಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಸುಮಾರು 4 ದಶಕಗಳ ಸುದೀರ್ಘ ಸಿನಿಮಾ ಪಯಣದಲ್ಲಿ ಎರಡು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡಿದ್ದ ಅವರು ಶಂಕರಾಭರಣ, ಕಲ್ಲೇಶಿ ಮಲ್ಲೇಶಿ ಹಾಗೂ ಸಿತಾರಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ರಾಮು ಅವರೂ ಸಹ ಇದೇ ಕೊರೋನಾ ಸೋಂಕಿಗೆ ವಿಧಿವಶರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೇ ಏಪ್ರಿಲ್ 26 ರಂದು ನಿಧನ ಹೊಂದಿದರು. ಅವರಿಗೆ 53 ವರ್ಷ ವಯಸ್ಸಾಗಿತ್ತು. ಹಾಗೇ ಏಪ್ರಿಲ್ 18ರಂದು ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಚಿತ್ರಗಳ ಖ್ಯಾತಿಯ ನಿರ್ಮಾಪಕ ಡಾ. ಡಿ ಎಸ್ ಮಂಜುನಾಥ್ ಕೊನೆಯುಸಿರೆಳೆದಿದ್ದರು. ಜೀರೋ ಪರ್ಸೆಂಟ್ ಲವ್ ಎಂಬ ಚಿತ್ರದ ಮೂಲಕ ಡಾ. ಡಿ ಎಸ್ ಮಂಜುನಾಥ್ ನಾಯಕನಾಗಿ ಪದಾರ್ಪಣೆ ಮಾಡಬೇಕಿತ್ತು.
Youtube Video

ಕನ್ನಡ ಚಿತ್ರರಂಗದ ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್, ನಟ ಗಜ ರಾಜ್... ಹೀಗೆ ಕಳೆದ ಎರಡು ವಾರಗಳಿಂದ ಹತ್ತಕ್ಕೂ ಹೆಚ್ಚು ಸ್ಯಾಂಡಲ್‌ವುಡ್ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
Published by: HR Ramesh
First published: May 5, 2021, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories