HOME » NEWS » Coronavirus-latest-news » SANDALWOOD ACTOR SHANKANADA ARAVIND DIED DUE TO CORONA AE

RIP Shankanada Aravind: ಕೊರೋನಾಗೆ ಸ್ಯಾಂಡಲ್‌ವುಡ್​ನಲ್ಲಿ ಮತ್ತೊಂದು ಬಲಿ: ಹಿರಿಯ ನಟ ಶಂಖನಾದ ಅರವಿಂದ್ ಇನ್ನಿಲ್ಲ..!

ಬೆಟ್ಟದ ಹೂ ಸಿನಿಮಾದಲ್ಲಿ ಪುನೀತ್ ಅವರೊಂದಿಗೆ ನಟಿಸಿರುವ ನಟ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳ ಜತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

Anitha E | news18-kannada
Updated:May 7, 2021, 2:31 PM IST
RIP Shankanada Aravind: ಕೊರೋನಾಗೆ ಸ್ಯಾಂಡಲ್‌ವುಡ್​ನಲ್ಲಿ ಮತ್ತೊಂದು ಬಲಿ: ಹಿರಿಯ ನಟ ಶಂಖನಾದ ಅರವಿಂದ್ ಇನ್ನಿಲ್ಲ..!
ಹಿರಿಯ ನಟ ಶಂಖನಾದ ಅರವಿಂದ್​
  • Share this:
ಸ್ಯಾಂಡಲ್​ವುಡ್​ನಲ್ಲಿ ಕೊರೋನಾ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ಕಡೆ ಲಾಕ್​ಡೌನ್​ನಿಂದಾಗಿ ಸಿನಿರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಕೊರೋನಾ ಸೋಂಕಿನಿಂದಾಗಿ ಒಬ್ಬರ ಹಿಂದೆ ಒಬ್ಬರಂತೆ ಹತ್ತಕ್ಕೂ ಹೆಚ್ಚು ಮಂದಿ ಕಲಾವಿದರು ಕೊನೆಯುಸಿರೆಳೆದಿದ್ದಾರೆ. ನಿನ್ನೆಯಷ್ಟೆ ರಾಜ್​ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಸಿನಿಮಾದ ನಿರ್ದೇಶಕ ರೇಣುಕಾ ಶರ್ಮಾಅವರು ಕೋವಿಡ್​ಗೆ ಬಲಿಯಾಗಿದ್ದರು. ಈಗ ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್​ ಅವರು ಸಾವನ್ನಪ್ಪಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅರವಿಂದ್ ಅವರು ಕಳೆದ 10 ದಿನಗಳ ಹಿಂದೆ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ದಿವಂಗತ ಕಾಶಿನಾಥ್‌ ಅವರಿಗೆ ಆಪ್ತರಾಗಿದ್ದರು. 

ಬೆಟ್ಟದ ಹೂ ಸಿನಿಮಾದಲ್ಲಿ ಪುನೀತ್ ಅವರೊಂದಿಗೆ ನಟಿಸಿರುವ ನಟ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳ ಜತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜ.23ರಂದು ನಟನ ಪತ್ನಿ ರಮಾ ಅವರೂ ಸಹ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ರಮಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು.

Veteran Kannada actor Shankanada Aravind, covid death, Sandalwood, Corona Death, ನಟ ಶಂಖನಾದ ಅರವಿಂದ್, Sandalwood,Shankanada Aravind,Coronavirus,ಸ್ಯಾಂಡಲ್‌ವುಡ್‌,ಶಂಖನಾದ ಅರವಿಂದ್,ಕೊರೋನಾ ವೈರಸ್, Sandalwood actor ShankanadaAravind died due to corona ae
ಹಿರಿಯ ನಟ ಶಂಖನಾದ ಅರವಿಂದ್​


ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ಸ್ಯಾಂಡಲ್‌ವುಡ್‌ನ ಸರಿ ಸುಮಾರು ಹತ್ತು ಮಂದಿ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅರ್ಥಾತ್ ಮೇ 2ರಂದು ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಹಾಗೇ ಮೇ 1ರಂದು 2011ರಲ್ಲಿ ಒನ್ ಡೇ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನವೀನ್ ಕುಮಾರ್ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದರು. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಏಪ್ರಿಲ್ 22ರಂದು ಹಿರಿಯ ನಿರ್ಮಾಪಕ ಅಣ್ಣಯ್ಯ, ಬಿಂದಾಸ್, ರನ್ನ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್ ಅವರು ಕೊವಿಡ್‌ಗೆ ಬಲಿಯಾಗಿದ್ದರು. ಹಾಗೇ ಕರ್ನಾಟಕ ಚಲನಚಿತ್ರ ವರ್ಣಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷ ಆರ್. ಶ್ರೀನಿವಾಸ್ ಕೂಡ ಕೆಲ ದಿನಗಳ ಹಿಂದಷ್ಟೇ ಈ ಮಹಾಮಾರಿಗೆ ತುತ್ತಾಗಿದ್ದರು.

ಇದನ್ನೂ ಓದಿ: ಕೋವಿಡ್​ ಸಂಕಷ್ಟ: 2 ಕೋಟಿ ನೆರವು ನೀಡಿದ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ..!

ಹಿರಿಯ ನಿರ್ದೇಶಕ, ಹೆಸರಾಂತ ಪೋಸ್ಟರ್ ಡಿಸೈನರ್ ಮಸ್ತಾನ್ ಕೂಡ ಇದೇ ಏಪ್ರಿಲ್ 21ರಂದು ಕೊವಿಡ್ ಸೋಂಕಿಗೆ ಬಲಿಯಾಗಿದ್ದರು. ಸುಮಾರು 4 ದಶಕಗಳ ಸುದೀಘ ಸಿನಿಮಾ ಪಯಣದಲ್ಲಿ ಎರಡು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡಿದ್ದ ಅವರು ಶಂಕರಾಭರಣ, ಕಲ್ಲೇಶಿ ಮಲ್ಲೇಶಿ ಹಾಗೂ ಸಿತಾರಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

corona death, sandalwood, corona virus, Renuka Sharma, Kannada Director Kavirathna Kalidasa director, Kavirathna Kaalidaasa fame Director, ಕವಿರತ್ನ ಕಾಳಿದಾಸ, ಸ್ಯಾಂಡಲ್​ವುಡ್​, ರೇಣುಕಾ ಶರ್ಮಾ, ಕೋರೊನಾಗೆ ಬಲಿಯಾದ ನಿರ್ದೇಶಕ ರೇಣುಕಾ ಶರ್ಮಾ, Kavirathna Kaalidaasa movie director Renuka Sharma died due to corona ae
ಕವಿರತ್ನ ಕಾಳಿದಾಸ ಸಿನಿಮಾದ ನಿರ್ದೇಶಕ ರೇಣುಕಾ ಶರ್ಮಾ
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ರಾಮು ಅವರೂ ಸಹ ಇದೇ ಕೊರೋನಾ ಸೋಂಕಿಗೆ ವಿಧಿವಶರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೇ ಏಪ್ರಿಲ್ 26ರಂದು ನಿಧನ ಹೊಂದಿದರು. ಅವರಿಗೆ 53 ವರ್ಷ ವಯಸ್ಸಾಗಿತ್ತು. ಹಾಗೇ ಏಪ್ರಿಲ್ 18ರಂದು ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಚಿತ್ರಗಳ ಖ್ಯಾತಿಯ ನಿರ್ಮಾಪಕ ಡಾ. ಡಿ ಎಸ್ ಮಂಜುನಾಥ್ ಕೊನೆಯುಸಿರೆಳೆದಿದ್ದರು. ಜೀರೋ ಪರ್ಸೆಂಟ್ ಲವ್ ಎಂಬ ಚಿತ್ರದ ಮೂಲಕ ಡಾ. ಡಿ ಎಸ್ ಮಂಜುನಾಥ್ ನಾಯಕನಾಗಿ ಪದಾರ್ಪಣೆ ಮಾಡಬೇಕಿತ್ತು.

ಇದನ್ನೂ ಓದಿ: Vaishnavi: ಮದುವೆಯಾಗೋಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ..!

ಕನ್ನಡ ಚಿತ್ರರಂಗದ ಲೆಜೆಂಡರಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್, ನಟ ಗಜ ರಾಜ್ ಹೀಗೆ ಕಳೆದ ಎರಡು ವಾರಗಳಿಂದ ಹತ್ತಕ್ಕೂ ಹೆಚ್ಚು ಸ್ಯಾಂಡಲ್‌ವುಡ್ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
Published by: Anitha E
First published: May 7, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories