ಮಹಾಮಾರಿ ಕೊರೋನಾದಿಂದಾಗಿ ಮೃತಪಟ್ಟ ಶ್ರೀನಗರ ಕಿಟ್ಟಿ ಸಹೋದರ!

ಇದೀಗ ಸ್ಯಾಂಡಲ್​ವುಡ್​ ನಟರೊಬ್ಬರ ಕುಟುಂಬಕ್ಕೂ ಕೊರೋನಾ ಸೋಂಕು ತಗುಲಿದೆ.  ನಟ ಶ್ರೀನಗರ ಕಿಟ್ಟಿ ಕುಟುಂಬಕ್ಕೂ ಕೊರೋನಾ ತಗುಲಿದೆ. ಶ್ರೀನಗರ ಕಿಟ್ಟಿ ಸಹೋದರನನ್ನ ಮಹಾ ವೈರಾಣು ಬಲಿ ಪಡೆದಿದೆ

news18-kannada
Updated:July 7, 2020, 10:20 PM IST
ಮಹಾಮಾರಿ ಕೊರೋನಾದಿಂದಾಗಿ ಮೃತಪಟ್ಟ ಶ್ರೀನಗರ ಕಿಟ್ಟಿ ಸಹೋದರ!
ಶ್ರೀನಗರ ಕಿಟ್ಟಿ
  • Share this:
ಮಹಾಮಾರಿ ಕೊರೋನಾ ವೈರಸ್​ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕರು ಸಾವನ್ಪಪ್ಪುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್​ಗೂ ಬಿಡದೆ ಕಾಡುತ್ತಿದೆ ಕೊರೋನಾ. ಕಳೆದ ವಾರ ಸ್ಯಾಂಡಲ್ ವುಡ್ ನ ಹಾಸ್ಯನಟರೊಬ್ಬರಿಗೆ ಕೊರೋನಾ ಪಾಸಿಟಿವ್ ಆಗಿತ್ತು.  ಜುಲೈ 6 ರಂದು ಸ್ವತಃ ಸುಮಲತಾ ಅಂಬರೀಶ್ ನನಗೆ ಕೊವಿಡ್ -19 ಪಾಸಿಟಿವ್ ಆಗಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದೀಗ ಸ್ಯಾಂಡಲ್​ವುಡ್​ ನಟರೊಬ್ಬರ ಕುಟುಂಬಕ್ಕೂ ಕೊರೋನಾ ಸೋಂಕು ತಗುಲಿದೆ.  ಸಂಜು ವೆಡ್ಸ್​​ ಗೀತಾ ಸಿನಿಮಾ ಖ್ಯಾತಿಯ ನಟ ಶ್ರೀನಗರ ಕಿಟ್ಟಿ ಕುಟುಂಬಕ್ಕೂ ಕೊರೋನಾ ತಗುಲಿದೆ. ಶ್ರೀನಗರ ಕಿಟ್ಟಿ ಸಹೋದರನನ್ನ ಮಹಾ ವೈರಾಣು ಬಲಿ ಪಡೆದಿದೆ.

ಅಂದಹಾಗೆ, ಕಿಟ್ಟಿ ಸಹೋದರ ಜೂನ್ 29 ರಂದು ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತ ಪಟ್ಟಿದ್ದರು.
ನಿಯಮದ ಪ್ರಕಾರ ಅವರನ್ನ ಕೊವಿಡ್ 19 ಟೆಸ್ಟ್​​​​ಗೆ ಒಳಪಡಿಸಲಾಗಿತ್ತು. ಅದರಲ್ಲಿ ರಿಪೋರ್ಟ್ ಪಾಸಿಟಿವ್ ಅಂತ ಬಂದಿತ್ತು.  ಹೀಗಾಗಿ ಕೊವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಈ ವಿಚಾರ ತಿಳಿದುಬಂದತೆ ಇಡೀ ಕುಟುಂಬ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ದೇವರ ದಯೆಯಿಂದ ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆಯಂತೆ. ಆದರೂ ಸಹ ಇಡೀ ಕುಟುಂಬವನ್ನ 14 ದಿನಗಳ ಕಾಲ ಹೋಂ ಕ್ವಾರಂಟೈನ್​​ಗೆ ಒಳಪಡಿಸಿ, ಶ್ರೀನಗರದಲ್ಲಿರೋ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ.

Tiktok Ban: ಟಿಕ್​ಟಾಕ್ ರೀತಿಯಲ್ಲೇ ಫೀಚರ್ ನೀಡಲು ಮುಂದಾದ ಫೇಸ್​ಬುಕ್, ಇನ್​​ಸ್ಟಾಗ್ರಾಂ?

Tiktok Ban: ಟಿಕ್​ಟಾಕ್ ರೀತಿಯಲ್ಲೇ ಫೀಚರ್ ನೀಡಲು ಮುಂದಾದ ಫೇಸ್​ಬುಕ್, ಇನ್​​ಸ್ಟಾಗ್ರಾಂ?
Published by: Harshith AS
First published: July 7, 2020, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading