ಬಿಗ್ ಬಾಸ್ ಮನೆಯ ಅನುಭವದಂತಿದೆ; ಫಾರ್ಮ್ ಹೌಸ್​​ನಲ್ಲಿ ಕಾಲ ಕಳೆಯುತ್ತಿರುವ ಸಲ್ಮಾನ್ ಖಾನ್​ ಮಾತು

Salman Khan: ಬಾಲಿವುಡ್​​ ಭಾಯ್​ ಜಾನ್​ ಸಲ್ಮಾನ್​ ಖಾನ್​ ಲಾಕ್​​ಡೌನ್​ ಅವಧಿಯನ್ನು ಮುಂಬೈ ನಗರದಿಂದ ಹೊರಗಿರುವ ಫಾರ್ಮ್​ ಹೌಸ್​ನಲ್ಲಿ ಕಳೆಯುತ್ತಿದ್ದು,  ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಒಂದೇ ಕಡೆ ಇದ್ದು ಸಾಕಾಗಿದೆ ಎಂದು ಹೇಳಿದ್ದಾರೆ. ತಂದೆಯನ್ನು ಕಾಣದೆ ತುಂಬಾ ಸಮಯವಾಗಿದೆ. ಬಿಗ್​ ಬಾಸ್​ ಮನೆಯಲ್ಲಿದ್ದಂತೆ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

 • Share this:
  ಹಿಂದಿ ಬಿಗ್​ ರಿಯಾಲಿಟಿ ಶೋ ಬಿಗ್​ ಬಾಸ್​ ಕಾರ್ಯಕ್ರಮವನ್ನು ನಟ ಸಲ್ಮಾನ್​​ ಖಾನ್ ಹಲವು ವರ್ಷಗಳಿಂದ​ ನಿರೂಪಿಸಿಕೊಂಡು ಬಂದಿದ್ದಾರೆ. ಆಗಾಗ ಈ ಕಾರ್ಯಕ್ರಮದ ನಡುವೆ ಬಿಗ್​ ಬಾಸ್​ ಮನೆಗೆ ತೆರಳುವುದು, ಸ್ಪರ್ಧಿಗಳೊಂದಿಗೆ ಮಾತನಾಡಿ ಬರುವುದು ಉಂಟು. ಇದೀಗ ಲಾಕ್​​ ಡೌನ್​ ಅವಧಿಯನ್ನು ತಮ್ಮ ಫಾರ್ಮ್​ ಹೌಸ್​ನಲ್ಲಿ ಕಳೆಯುತ್ತಿರುವ ಸಲ್ಮಾನ್​ ಖಾನ್​ಗೆ ಬಿಗ್​​ ಬಾಸ್​ ಮನೆಯಲ್ಲಿ ಇದ್ದಂತೆ ಅನುಭವ ಆಗುತ್ತಿದೆಯಂತೆ.

  ಬಾಲಿವುಡ್​​ ಭಾಯ್​ ಜಾನ್​ ಸಲ್ಮಾನ್​ ಖಾನ್​ ಲಾಕ್​​ಡೌನ್​ ಅವಧಿಯನ್ನು ಮುಂಬೈ ನಗರದಿಂದ ಹೊರಗಿರುವ ಫಾರ್ಮ್​ ಹೌಸ್​ನಲ್ಲಿ ಕಳೆಯುತ್ತಿದ್ದು,  ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಒಂದೇ ಕಡೆ ಇದ್ದು ಸಾಕಾಗಿದೆ ಎಂದು ಹೇಳಿದ್ದಾರೆ. ತಂದೆಯನ್ನು ಕಾಣದೆ ತುಂಬಾ ಸಮಯವಾಗಿದೆ. ಬಿಗ್​ ಬಾಸ್​ ಮನೆಯಲ್ಲಿದ್ದಂತೆ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

  ನಂತರ ಮಾತು ಮುಂದುವರಿಸಿದ ಅವರು ಲಾಕ್​​ಡೌನ್​​ ಇದ್ದರು ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದೇನೆ. ಬಿಗ್ ಬಾಸ್​​​​ ಮನೆಯಲ್ಲಿದ್ದಂತೆ ಆಗುತ್ತಿದೆ. ಇಲ್ಲಿ ಯಾರೂ ಎಲಿಮಿನೇಟ್​​ ಆಗುತ್ತಿಲ್ಲ. ಯಾರು ಯಾರ ಕಾಲನ್ನು ಎಳೆಯುತ್ತಿಲ್ಲ. ತಾಯಿ ಮತ್ತು ಸಂಬಂಧಿಕರ ಜೊತೆಗೆ ಸಮಯ ಕಳೆಯುತ್ತಿದ್ದೇನೆ. ತಂದೆಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

  ಸಲ್ಮಾನ್​ ಖಾನ್​ ಫಾರ್ಮ್​​ ಹೌಸ್​ನಲ್ಲಿ ಇದ್ದುಕೊಂಡೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ‘ಪ್ಯಾರ್​ ಕರೋನಾ‘ ಎಂಬ ಗೀತೆಯನ್ನು ರಚಿಸಿದ್ದಾರೆ. ಆ ಗೀತೆಗೆ ಅವರೇ ಧ್ವನಿ ನೀಡಿದ್ದಾರೆ. ಇಂದು( ಏ.20) ಸಂಜೆ ‘ಪ್ಯಾರ್​ ಕರೋನಾ‘ ಹಾಡನ್ನು ಸಲ್ಮಾನ್​ ಖಾನ್​ ಬಿಡುಗಡೆ ಮಾಡಲಿದ್ದಾರೆ.

  ಲಾಕ್​ಡೌನ್​ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಟನ ಬಂಧನ!

   

   
  First published: