HOME » NEWS » Coronavirus-latest-news » SALE OF PATANJALIS CORONIL WONT BE ALLOWED IN MAHARASHTRA WITHOUT CERTIFICATION HOME MINISTER ANIL DESHMUKH MAK

ಪತಂಜಲಿಯ ಕೊರೋನಿಲ್​ಗೆ ಪ್ರಮಾಣ ಪತ್ರವಿಲ್ಲದೆ ಅನುಮತಿ ಇಲ್ಲ; ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್ಮುಖ್ ಸ್ಪಷ್ಟನೆ

ಬಾಬಾ ರಾಮ್​ದೇವ್ ಅವರ ಕೊರೋನಿಲ್ ಮಾತ್ರೆಗಳ ವಿರುದ್ಧ ಕಿಡಿಕಾರಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೊರೋನಿಲ್ ಮಾತ್ರೆಗಳಿಗೆ WHO ಪ್ರಮಾಣೀಕರಣ ನೀಡಿದೆ ಎಂಬುದು ಸುಳ್ಳು ಎಂದು ಸೋಮವಾರವೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.

news18-kannada
Updated:February 23, 2021, 6:51 PM IST
ಪತಂಜಲಿಯ ಕೊರೋನಿಲ್​ಗೆ ಪ್ರಮಾಣ ಪತ್ರವಿಲ್ಲದೆ ಅನುಮತಿ ಇಲ್ಲ; ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್ಮುಖ್ ಸ್ಪಷ್ಟನೆ
ಅನಿಲ್ ದೇಶ್ಮುಖ್.
  • Share this:
ಮುಂಬೈ (ಫೆಬ್ರವರಿ 23); ಕೊರೋನಾ ಸೋಂಕಿನ ವಿರುದ್ದ ಹೋರಾಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಎರಡು ಲಸಿಕೆಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಎರಡು ಹಂತದಲ್ಲಿ ಲಕ್ಷಾಂತರ ಜನರಿಗೆ ಈ ಲಸಿಕೆಗಳನ್ನು ನೀಡಿದೆ. ಈ ನಡುವೆ ಪತಂಜಲಿ ಬಾಬಾ ರಾಮ್​ದೇವ್​ ಕೊರೋನಾ ವಿರುದ್ಧ  ಕೊರೋನಿಲ್​ ಮಾತ್ರೆಗಳನ್ನು ಬಿಡುಗಡೆ ಮಾಡಿದ್ದು, ಈ ಮಾತ್ರೆಗಳಿಗೆ WHO ಪ್ರಮಾಣ ಪತ್ರ ನೀಡಿದೆ ಎಂದು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಅಲ್ಲದೆ, ಈ ಮಾತ್ರೆಯನ್ನು ಕಳೆದ ಶುಕ್ರವಾರ ನಡೆದ ಸಮಾರಂಭದಲ್ಲಿ  ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆಯೂ ಮಾಡಲಾಗಿತ್ತು. ಆದರೆ, ಈ ಮಾತ್ರೆಗಳ ವಿರುದ್ಧ ಇದೀಗ ಗುಡುಗಿರುವ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್​ ದೇಶ್ಮುಖ್​, "ಸರಿಯಾದ ಪ್ರಮಾಣಪತ್ರ ಇಲ್ಲದೆ ಪತಂಜಲಿಯ ಕೊರೋನಿಲ್ ಮಾತ್ರೆಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ಅನುಮತಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಬಾಬಾ ರಾಮ್​ದೇವ್ ಅವರ ಕೊರೋನಿಲ್ ಮಾತ್ರೆಗಳ ವಿರುದ್ಧ ಕಿಡಿಕಾರಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೊರೋನಿಲ್ ಮಾತ್ರೆಗಳಿಗೆ WHO ಪ್ರಮಾಣೀಕರಣ ನೀಡಿದೆ ಎಂಬುದು ಸುಳ್ಳು ಎಂದು ಸೋಮವಾರವೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಿಗೆ ಕೊರೋನಿಲ್ ಮಾತ್ರೆಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ಇದೀಗ ಕಠಿಣ ನಿಲುವನ್ನು ತೆಗೆದುಕೊಂಡಿದೆ.

ಇದರ ಬೆನ್ನಿಗೆ ಟ್ವೀಟ್​ ಮಾಡಿರುವ ಆಗ್ನೇಯ ಏಷ್ಯಾ WHO, "ಕೊವಿಡ್-19 ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಯಾವುದೇ ಸಾಂಪ್ರದಾಯಿಕ ಔಷಧಿಯ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ" ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಟೂಲ್​ಕಿಟ್​ ಪ್ರಕರಣ; ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್​

ಆದರೆ, ಕೊರೋನಿಲ್ ಮಾತ್ರೆಯ ಕುರಿತು ಯಾವುದೇ ವಿಶ್ವಾಸಾರ್ಹತೆಯನ್ನು ಪರಿಶೀಲಿಸದ ಕೇಂದ್ರ ಸಚಿವರಾದ ಹಷ್‌ವರ್ಧನ್ ಹಾಗೂ ಮತ್ತೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ತಾವೇ ಮುಂದೆ ನಿಂತು ಈ ಔಷಧಿಯನ್ನು ಬಿಡುಗಡೆ ಮಾಡಿದ್ದಾರೆ. ಸಮಾರಂಭದಲ್ಲಿ ಬಾಬಾ ರಾಮ್​ದೇವ್ ಹಾಗೂ ಸಚಿವರ ಹಿಂದಿದ್ದ ದೊಡ್ಡ ಪೋಸ್ಟರ್‌ನಲ್ಲಿ "ಔಷಧಿಯು CoPP ಮತ್ತು WHO- ಜಿಎಂಪಿ ಪ್ರಮಾಣೀಕರಿಸಲ್ಪಟ್ಟಿದೆ" ಎಂದು ಬರೆಯಲ್ಪಟ್ಟಿತ್ತು. ಅಂದರೆ ಇದು ಔಷಧೀಯ ಉತ್ಪನ್ನದ ಪ್ರಮಾಣಪತ್ರವನ್ನು (CoPP) ಹೊಂದಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಪ್ರಾಕ್ಟೀಸಸ್ (ಜಿಎಂಪಿ) ಗುರುತಿಸಿದೆ ಎಂದರ್ಥ.

ಈ ಎರಡೂ ಮಾನದಂಡಗಳು ಔಷಧೀಯ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆಯನ್ನು ಬಹುಪಾಲು ವ್ಯಾಖ್ಯಾನಿಸುತ್ತವೆ. ಆದರೆ, ಭಾರತೀಯ ವೈದ್ಯಕೀಯ ಸಂಘ ಸ್ವತಃ ಇದೊಂದು ಸುಳ್ಳು ಪ್ರಚಾರ ಎಂದು ಕಿಡಿಕಾರಿರುವುದು ಇದೀಗ ರಾಮ್​ದೇವ್ ಬಾಬಾಗೆ ಮಾತ್ರವಲ್ಲ ಸಮಾರಂಭದಲ್ಲಿ ಸಿಲುಕಿರುವ ಕೇಂದ್ರ ಸಚಿವರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
Published by: MAshok Kumar
First published: February 23, 2021, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories