ಗಂಡನ ವಿರುದ್ಧ ಬರೆದವರಿಗೆ ಮೈಚಳಿ ಬಿಡಿಸಿದ ಸಾಕ್ಷಿ ಧೋನಿ; ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊರೋನಾ ವಿರುದ್ಧದ ಹೋರಾಟಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿತ್ತು.

ಸಾಕ್ಷಿ ಹಾಗೂ ಎಂಎಸ್ ಧೋನಿ.

ಸಾಕ್ಷಿ ಹಾಗೂ ಎಂಎಸ್ ಧೋನಿ.

 • Share this:
  ಎಲ್ಲೆಡೆ ಕ್ಷಿಪ್ರ ವೇಗದಲ್ಲಿ ಹರಡುತ್ತಿರುವ ಈ ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ಶುಕ್ರವಾರ ಒಂದೇ ದಿನ 144ಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ವರೆಗೂ ವೈರಸ್​​ಗೆ 19 ಮಂದಿ ಬಲಿಯಾಗಿದ್ದಾರೆ.

  ದೇಶದಲ್ಲಿ ಕೊರೋನಾ ಪತ್ತೆಯಾದ ಬಳಿಕ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 823ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

  ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 14ರವರೆಗೆ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಮದ್ದಿಲ್ಲದ ಕೊರೋನಾ ಕಾಯಿಲೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾರಕ ಸೋಂಕನ್ನು ತಡೆಗಟ್ಟಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

  ಕೊರೋನಾ ವಿರುದ್ಧದ ಹೋರಾಟಕ್ಕೆ ಸಚಿನ್​ರಿಂದ 50 ಲಕ್ಷ ರೂಪಾಯಿ ಸಹಾಯ; ಧೋನಿ ಕೇವಲ 1 ಲಕ್ಷ

  ಆದರೆ, ಲಾಕ್​ಡೌನ್​ನಿಂದಾಗಿ ದೈನಂದಿನ ಕೂಲಿ ಕಾರ್ಮಿಕರು ಮತ್ತು ಕುಟುಂಬದವರು ಒರದಾಡುವಂತಾಗಿದೆ. ಈ ನಡುವೆ ಕೆಲವು ಸಂಸ್ಥೆಗಳು ಮತ್ತು ಟ್ರಸ್ಟ್​ಗಳು ಬಡವರ ನೆರವಿಗೆ ಧಾವಿಸಿದೆ. ಕ್ರೀಡಾಪಟುಗಳು ಕೂಡ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ.

  ಅಂತೆಯೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊರೋನಾ ವಿರುದ್ಧದ ಹೋರಾಟಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿತ್ತು. ಕ್ರೌಡ್ ಫಂಡಿಂಗ್ ವೆಬ್​ಸೈಟ್​ಗೆ ಧೋನಿ 1 ಲಕ್ಷ ರೂಪಾಯಿ ಧೋನಿ ನೀಡಿದ್ದಾರೆ ಎನ್ನಲಾಗಿತ್ತು.

  ಪ್ರೀತಿಗಾಗಿ ದೇಶ ತೊರೆದ ಕ್ರಿಕೆಟರ್, ಬಳಿಕ 37 ತಂಡಗಳ ಪರ ಆಡಿದ್ರು..!

     ಇದೇ ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಟ್ರೋಲ್ ಆಗಿದ್ದರು. ವಾರ್ಷಿಕ 800 ಕೋಟಿ ಹಣಗಳಿಕೆ ಮಾಡುವ ಧೋನಿ, ಕೊರೋನಾ ವಿರುದ್ಧ ಹೋರಾಡಲು ಕೇವಲ 1 ಲಕ್ಷ ನೀಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಕೆಲವರು ಕಾಲೆಳೆದಿದ್ದರು.

  ಸದ್ಯ ಈ ವಿಚಾರ ತಿಳಿದಿರುವ ಧೋನಿ ಪತ್ನಿ ಸಾಕ್ಷಿ ಗರಂ ಆಗಿದ್ದು ಸ್ಪಷ್ಟನೆ ನೀಡಿದ್ದಾರೆ. 'ನನ್ನ ಗಂಡ ಯಾವುದೇ ದೇಣಿಗೆ ನೀಡಿಲ್ಲ. ಇಂತಹ ಸೂಕ್ಷ್ಮ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ನಿಲ್ಲಿಸಬೇಕು ಎಂದು ನಾನು ಎಲ್ಲಾ ಮಾಧ್ಯಮಗಳಿಗೆ ವಿನಂತಿಸುತ್ತೇನೆ. ನಿಮಗೆ ನಾಚಿಕೆಯಾಗಬೇಕು! ಜವಾಬ್ದಾರಿಯುತ ಪತ್ರಿಕೋಧ್ಯಮ ಎಲ್ಲಿ ಕಣ್ಮರೆಯಾಯಿತು ಎಂದು ನಾನು ಆಶ್ಚರ್ಯ ಪಡುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.

        First published: