ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ ಇಂದು. ತಮ್ಮ ಹುಟ್ಟುಹಬ್ಬದಂದೇ ಮಹ್ವದ ನಿರ್ಧಾರವೊಂದನ್ನು ಕೈಗೊಳ್ಳುವ ಮೂಲಕ ಸಚಿನ್ ಮತ್ತೊಮ್ಮೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೋವಿಡ್ನಿಂದ ಗುಣಮುಖರಾಗಿರುವ ಅವರು ಈಗ ಪ್ಲಾಸ್ಮಾ ದಾನ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ಮತ್ತೊಬ್ಬ ಸೋಂಕಿರತ ಜೀವ ಉಳಿಸಲು ಅವರು ಪಣ ತೊಟ್ಟಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಿಳಿಸಿರುವ ಅವರು, ಪ್ಲಾಸ್ಮಾದಾನಕ್ಕೆ ತಾವು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ನಾನು ಪ್ಮಾಸ್ಮಾ ಕೇಂದ್ರವನ್ನು ಉದ್ಘಾಟಿಸಿದ್ದೆ. ಈ ವೇಳೆ ವೈದ್ಯರು ಸರಿಯಾದ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದರೆ, ಇದರಿಂದ ಇತರೆ ರೋಗಿಗಳು ಚೇತರಿಸಿಕೊಳ್ಳಬಹುದು ಎಂದಿದ್ದರು. ಅದರಂತೆ ಈಗ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೋವಿಡ್ನಿಂದ ನಾನು ಗುಣಮುಖನಾಗಿದ್ದೇನೆ. ನಾನು ದಾನಕ್ಕೆ ಅರ್ಹವಾಗುತ್ತಿದ್ದಂತೆ ವೈದ್ಯರ ಸಲಹೆಯಂತೆ ಅದನ್ನು ದಾನ ಮಾಡುತ್ತೇನೆ. ಈ ಕುರಿತು ಈಗಾಗಲೇ ವೈದ್ಯರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.
Thank you everyone for your warm wishes. It's made my day special. I am very grateful indeed.
Take care and stay safe. pic.twitter.com/SwWYPNU73q
— Sachin Tendulkar (@sachin_rt) April 24, 2021
ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ನೀವು ನನ್ನ ಈ ದಿನದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದೀರಾ. ಕಳೆದ ತಿಂಗಳ ಸಾಕಷ್ಟು ಕಷ್ಟ ಎದುರಾಗಿತ್ತು. ಕೋವಿಡ್ ಪಾಸಿಟಿವ್ ಆದ ಹಿನ್ನಲೆ 21 ದಿನ ಐಸೋಲೇಷನ್ಗೆ ಒಳಗಾದೆ. ನಿಮ್ಮ, ಕುಟುಂಬ ಮತ್ತು ಪ್ರಾರ್ಥನೆ ಮತ್ತು ಹಾರೈಕೆಗಳಿಂದ ನಾನು ಗುಣಮುಖನಾಗಿದ್ದೇನೆ. ಎಲ್ಲಾ ವೈದ್ಯರು ನಾನು ಗುಣಮುಖನಾಗಲು ಸಾಕಷ್ಟು ಕಾರ್ಯ ನಿರ್ವಹಿಸಿದರು ಅವರಿಗೂ ಧನ್ಯವಾದಗಳು ಎಂದಿದ್ದಾರೆ.
ಇದನ್ನು ಓದಿ: ಪುನೀತ್ ದನಿಯಲ್ಲಿ ರಾಜ್ಕುಮಾರ್ ಕಂಡ ಅಭಿಮಾನಿಗಳು; ಪವರ್ ಸ್ಟಾರ್ ಕಾಣಿಕೆಗೆ ಫಿದಾ
ಕ್ರಿಕೆಟ್ ದಿಗ್ಗಜ ಸಚಿನ್ ಕಳೆದ ಮಾರ್ಚ್ 27ರಂದು ಸೋಂಕಿಗೆ ತುತ್ತಾಗಿದ್ದ ಅವರು, ಏ. 8ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದಾದ ಬಳಿಕ ಹೋಮ್ ಐಸೋಲೇಷನ್ಗೆ ಒಳಗಾಗಿದ್ದರು. ಪ್ಲಾಸ್ಮಾ ದಾನ ನೀಡುವ ವ್ಯಕ್ತಿಯೂ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರಬೇಕು. ಪ್ಲಾಸ್ಮಾ ದಾನ ನೀಡುವ ಕನಿಷ್ಟ 14 ದಿನಗಳ ಮುಂದೆ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಇರಬಾರದು.
ಕೋವಿಡ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನು ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರಿಂದ ಸೋಂಕಿತರು ಶೀಘ್ರ ಗುಣಮುಖರಾಗಲು ಸಹಾಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ