ತಬ್ಲಿಘೀಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಡಿ ಎಂದು ಹೇಳಿದ್ದ ಆಡಿಯೋ ನಕಲಿ: ಪೊಲೀಸರ ಸ್ಪಷ್ಟನೆ

ಪೊಲೀಸರು ಈ ಆಡಿಯೋ ಕ್ಲಿಪ್​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಆಡಿಯೋ ಕ್ಲಿಪ್​ ತಿರುಚಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

news18-kannada
Updated:May 9, 2020, 3:03 PM IST
ತಬ್ಲಿಘೀಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಡಿ ಎಂದು ಹೇಳಿದ್ದ ಆಡಿಯೋ ನಕಲಿ: ಪೊಲೀಸರ ಸ್ಪಷ್ಟನೆ
ಮೌಲಾನ ಸಾದ್
  • Share this:
ನವದೆಹಲಿ (ಮೇ 9): ತಬ್ಲಿಘೀ ಜಮಾತ್​ ಸದಸ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಡಿ ಎಂದು ಮಾರ್ಕಾಜ್ ನಿಜಾಮುದ್ದೀನ್ ಮುಖ್ಯಸ್ಥ ಮೌಲಾನ ಸಾದ್​ ಖಂದಲ್ವಿ ಹೇಳಿರುವ ಆಡಿಯೋ ಕ್ಲಿಪ್​ ವೈರಲ್​​ ಆಗಿತ್ತು. ಆದರೆ, ಈ ಆಡಿಯೋ ಕ್ಲಿಪ್​ ತಿರುಚಿರುವುದು ಎಂದು ದೆಹಲಿ ಪೊಲೀಸ್​ ಇಲಾಖೆ ತನಿಖೆಯಲ್ಲಿ ತಿಳಿದು ಬಂದಿದೆ.

ಮೌಲಾನ ಸಾದ್ ಮಾತನಾಡಿದ್ದು ಎಂದು ಹೇಳಲಾಗಿರುವ ಆಡಿಯೋ ಕ್ಲಿಪ್​ನಲ್ಲಿ ಕೆಲ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದವು. “ಮುಸ್ಲಿಮರಿಗೆ ಕೊರೋನಾ ವೈರಸ್​ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯಕತೆ ಇಲ್ಲವೇ ಇಲ್ಲ. ಅಲ್ಲದೆ, ಇದನ್ನು ನಮ್ಮ ಧರ್ಮದಲ್ಲೂ ಹೇಳಿಲ್ಲ,” ಎಂದು ತಬ್ಲಿಘೀ ಜಮಾತ್​ ಸದಸ್ಯರಿಗೆ ಮೌಲಾನ ಸೂಚನೆ ನೀಡಿದ್ದರು.

ಇದನ್ನೂ ಓದಿ: ನಮ್ಮ ಪ್ರಾಣಕ್ಕೆ ಕುತ್ತು ಬಂದ್ರೆ ಏನ್ ಮಾಡೋದು? ನಾವ್ ಕೆಲ್ಸ ಮಾಡಲ್ಲ: ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

ಸದ್ಯ ಪೊಲೀಸರು ಈ ಆಡಿಯೋ ಕ್ಲಿಪ್​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಆಡಿಯೋ ಕ್ಲಿಪ್​ ತಿರುಚಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್​ 21ರಂದು ಈ ಆಡಿಯೋ ಕ್ಲಿಪ್​ ವಾಟ್ಸ್​ಆಪ್​​ನಲ್ಲಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದರಿಂದ ಮೌಲಾನ ಸಾದ್ ಸೇರಿ 6 ಜನರ ವಿರುದ್ಧ ಕೇಸ್​ ದಾಖಲಿಸಿಕೊಳ್ಳಲಾಗಿತ್ತು. ಈ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ನಿಜ ವಿಚಾರ ಬೆಳಕಿಗೆ ಬಂದಿದೆ.
First published: May 9, 2020, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading