Sputnik V: ಭಾರತದಲ್ಲಿ ಆಗಸ್ಟ್​ನಿಂದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ; ಮೇ ಅಂತ್ಯಕ್ಕೆ 3 ಮಿಲಿಯನ್ ಡೋಸ್ ಪೂರೈಕೆ

ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಆದರೆ, ದೇಶಾದ್ಯಂತ ಸ್ಪುಟ್ನಿಕ್ ವಿ ಲಸಿಕೆ ವ್ಯಾಪಕವಾಗಿ ಲಭ್ಯವಾಗುತ್ತಿಲ್ಲ. ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಸ್ಪುಟ್ನಿಕ್ ವಿ ಲಸಿಕೆ ಪ್ರಸ್ತುತ ಪ್ರತಿ ಡೋಸ್​ಗೆ 948 ರೂ. ಇದೆ. ಇದಕ್ಕೆ ಶೇ. 5ರಷ್ಟು ಜಿಎಸ್​ಟಿ ಇದ್ದು ಪ್ರತಿ ಡೋಸ್ ಬೆಲೆ 995.4 ರೂಪಾಯಿ ತಗುಲಲಿದೆ.

ಸ್ಪುಟ್ನಿಕ್ ವಿ ಲಸಿಕೆ

ಸ್ಪುಟ್ನಿಕ್ ವಿ ಲಸಿಕೆ

 • Share this:
  ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದ್ದು, ಸಾವಿನ ಕರಾಳತೆ ಭೀಕರತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಭಾರತದಲ್ಲಿ ಪ್ರಸ್ತುತ ಮಾರಕ ಕೊರೋನಾ ನಿಯಂತ್ರಣವಾಗಬೇಕಿದೆ. ನಿಯಂತ್ರಣಕ್ಕೆ ಲಸಿಕೆ ಅತ್ಯವಶ್ಯಕವಾಗಿದೆ. ಆದರೆ, ದೇಶದಲ್ಲಿ ಲಸಿಕೆ ಅಭಾವ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ತಯಾರಿಸಿದ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಅನ್ನು ಭಾರತದಲ್ಲಿ ತಯಾರಿಸಲು ಅನುಮತಿ ನೀಡಿದ್ದು, ಶೀಘ್ರದಲ್ಲಿ ಸ್ಪುಟ್ನಿಕ್ ವಿ ತಯಾರಿಕಾ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲಿದೆ. ಭಾರತದಲ್ಲಿ ಆಗಸ್ಟ್​ನಿಂದ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ರಷ್ಯಾ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರು ಶನಿವಾರ ತಿಳಿಸಿದ್ದಾರೆ.

  ಭಾರತಕ್ಕೆ ರಷ್ಯಾ ಮೇ ಅಂತ್ಯದ ವೇಳೆಗೆ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಒಟ್ಟಿಗೆ ಪೂರೈಕೆ ಮಾಡಲಿದೆ. ಮತ್ತು ಜೂನ್​ನಲ್ಲಿ ಈ ಸಂಖ್ಯೆಯನ್ನು 5 ಮಿಲಿಯನ್​ಗೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ವೆಂಕಟೇಶ್ ವರ್ಮಾ ಅವರು ತಿಳಿಸಿದ್ದಾರೆ. ಭಾರತದಲ್ಲಿ ಆರಂಭದಲ್ಲಿ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವರ್ಮಾ ಮಾಹಿತಿ ನೀಡಿದ್ದಾರೆ.

  ಇದನ್ನು ಓದಿ: ಕಿಮ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯದ ಕೋವಿಡ್‌ ಚಿಕಿತ್ಸೆ ಸಿಗುತ್ತಿಲ್ಲ: ಸಚಿವ ಸುಧಾಕರ್‌ ಅಸಮಾಧಾನ

  ರಷ್ಯಾ ಈಗಾಗಲೇ ಭಾರತದ ಡಾ ರೆಡ್ಡಿಸ್ ಸಂಸ್ಥೆಯ ಸಹಯೋಗದೊಂದಿಗೆ ಲಸಿಕೆ ಉತ್ಪಾದನೆ ಮಾಡುತ್ತಿದೆ. ಈಗಾಗಲೇ ಭಾರತಕ್ಕೆ ಎರಡು ಲಕ್ಷ ಡೋಸ್ ಪೂರೈಕೆ ಮಾಡಿದೆ. ಸ್ಪುಟ್ನಿಕ್ ವಿ ಈಗಾಗಲೇ ಭಾರತಕ್ಕೆ 150,000 ಡೋಸ್ ಹಾಗೂ ಆನಂತರ 60000 ಡೋಸ್ ಭಾರತಕ್ಕೆ ಪೂರೈಕೆ ಮಾಡಲಾಗಿದೆ.

  ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಆದರೆ, ದೇಶಾದ್ಯಂತ ಸ್ಪುಟ್ನಿಕ್ ವಿ ಲಸಿಕೆ ವ್ಯಾಪಕವಾಗಿ ಲಭ್ಯವಾಗುತ್ತಿಲ್ಲ. ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಸ್ಪುಟ್ನಿಕ್ ವಿ ಲಸಿಕೆ ಪ್ರಸ್ತುತ ಪ್ರತಿ ಡೋಸ್​ಗೆ 948 ರೂ. ಇದೆ. ಇದಕ್ಕೆ ಶೇ. 5ರಷ್ಟು ಜಿಎಸ್​ಟಿ ಇದ್ದು ಪ್ರತಿ ಡೋಸ್ ಬೆಲೆ 995.4 ರೂಪಾಯಿ ತಗುಲಲಿದೆ. ಕೊರೋನಾ ನಿಯಂತ್ರಣಕ್ಕೆ ಭಾರತದಲ್ಲಿ ಮೂರು ಲಸಿಕೆಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳನ್ನು ದೇಶಾದ್ಯಂತ ಜನರಿಗೆ ನೀಡಲಾಗುತ್ತಿದೆ.
  Published by:HR Ramesh
  First published: