HOME » NEWS » Coronavirus-latest-news » RUSSIA SPUTNIK V VACCINE MAY RECEIVE AUTHORIZATION IN INDIA SOON CORONAVIRUS LIVE UPDATES SCT DBDEL

Sputnik Vaccine: ಭಾರತದಲ್ಲಿ ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ಸಾಧ್ಯತೆ

Sputnik Vaccine | ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿದೆ. ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

news18-kannada
Updated:April 9, 2021, 9:38 AM IST
Sputnik Vaccine: ಭಾರತದಲ್ಲಿ ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ಸಾಧ್ಯತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, ಏ. 9: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಈಗ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರು‌ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಇದರಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಜೊತೆಗೆ ಮತ್ತೊಂದು ಅಗತ್ಯ ಕಂಡುಬರುತ್ತಿದೆ. ಈ‌ ಹಿನ್ನೆಲೆಯಲ್ಲಿ ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿದೆ. ಹೈದರಾಬಾದ್ ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು ಸ್ಪುಟ್ನಿಕ್ ಸಂಸ್ಥೆಯು ಈಗ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (SEC) ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮುಂದೆ ಮನವಿ ಮಾಡಿದೆ.

ಇದನ್ನೂ ಓದಿ: Coronavirus: ಕೊರೋನಾ ಲಸಿಕೆ ಪಡೆದ ನಂತರ ಆ್ಯಂಟಿಬಾಡಿ ಟೆಸ್ಟ್​ನ ಅಗತ್ಯವಿದೆಯೇ?

ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕಳೆದ ವಾರ ಸಭೆ ನಡೆಸಿದೆ.  ಸಭೆಯ ಎದುರು ಸ್ಪುಟ್ನಿಕ್ ಸಂಸ್ಥೆಯು ಮೂರನೇ ಹಂತದಲ್ಲಿ ನಡೆಸಿದ ಕ್ಲಿನಿಕಲ್ ಪ್ರಯೋಗದ ವರದಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಡೇಟಾ ಸಲ್ಲಿಕೆ ಮಾಡಿತ್ತು. ಸ್ಪುಟ್ನಿಕ್ ಲಸಿಕಾ ಸಂಸ್ಥೆ ಸಲ್ಲಿಸಿರುವ ಡೆಟಾಗಳ ಬಗ್ಗೆ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅತೃಪ್ತಿ ವ್ಯಕ್ತಪಡಿಸಿದ್ದು ಹೆಚ್ಚಿನ ಮಾಹಿತಿ ಮತ್ತು ಡೆಟಾ ಕೇಳಿತ್ತು.

ಸ್ಪುಟಿಕ್ ಲಸಿಕಾ ಸಂಸ್ಥೆಯಿಂದ ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಇನ್ನೂ ಹೆಚ್ಚಿನ ಡೆಟಾ ಕೇಳಿದ್ದು ಅವುಗಳ ಸಲ್ಲಿಕೆಯಾದ ಬಳಿಕ ಪರಿಶೀಲನೆ ನಡೆಸಿ ಸ್ಪುಟ್ನಿಕ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ  ಅಂತಿಮ ತಿರ್ಮಾನ ಕೈಗೊಳ್ಳುತ್ತದೆ. ಆದರೀಗ ದೇಶದಲ್ಲಿ ಕೊರೋನಾ ಲಸಿಕೆಗಳ ಕೊರತೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಸ್ಪುಟಿಕ್ ಲಸಿಕಾ ಸಂಸ್ಥೆ ಶೀಘ್ರವೇ ಹೆಚ್ಚಿನ‌ ಮಾಹಿತಿ ಮತ್ತು ಡೆಟಾ ಸಲ್ಲಿಸಲಿದೆ.

ಸ್ಪೆಷಲ್ ಎಕ್ಸಫರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಶೀಘ್ರವೇ ಸಭೆ ಸೇರಿ 'ಎಲ್ಲವೂ ಸರಿ ಇದ್ದರೆ' ಕೂಡಲೇ ತುರ್ತು ಬಳಕೆಗೆ ಅನುಮತಿ ನೀಡಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
Published by: Sushma Chakre
First published: April 9, 2021, 9:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories