HOME » NEWS » Coronavirus-latest-news » RUSSIA SEEKS COLLABORATION WITH INDIA FOR MANUFACTURING COVID 19 VACCINE SPUTNIK V SNVS

Sputnik V - ಕೋವಿಡ್ ಲಸಿಕೆ ಉತ್ಪಾದನೆಗೆ ಭಾರತದ ಸಹಯೋಗ ಪಡೆಯಲು ಮುಂದಾದ ರಷ್ಯಾ

ಲಸಿಕೆ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಜಗತ್ತಿನ ಬಹುತೇಕ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತದೆ. ಈಗ ರಷ್ಯಾ ತನ್ನ ಲಸಿಕೆಯ ಉತ್ಪಾದನೆಗೆ ಭಾರತದ ಸಹಯೋಗ ಬಯಸಿದೆ ಎನ್ನಲಾಗಿದೆ.

news18
Updated:August 26, 2020, 6:25 PM IST
Sputnik V - ಕೋವಿಡ್ ಲಸಿಕೆ ಉತ್ಪಾದನೆಗೆ ಭಾರತದ ಸಹಯೋಗ ಪಡೆಯಲು ಮುಂದಾದ ರಷ್ಯಾ
ಸಾಂದರ್ಭಿಕ ಚಿತ್ರ
  • News18
  • Last Updated: August 26, 2020, 6:25 PM IST
  • Share this:
ನವದೆಹಲಿ(ಆ. 26): ಹಲವು ಟೀಕೆಗಳ ಮಧ್ಯೆ ವಿಶ್ವದ ಮೊತ್ತಮೊದಲ ಕೋವಿಡ್ ಲಸಿಕೆ ಎಂದು ಹೇಳಿ ರಷ್ಯಾ ದೇಶ ಬಿಡುಗಡೆ ಮಾಡಿದ ಸ್ಪುಟ್ನಿಕ್ ವಿ (Sputnik V) ಲಸಿಕೆಯ ಉತ್ಪಾದನೆಗೆ ಭಾರತದ ಸಹಾಯವನ್ನು ಪಡೆಯಲು ರಷ್ಯಾ ಮುಂಂದಾಗಿರುವುದು ತಿಳಿದುಬಂದಿದೆ. ಸ್ಪುಟ್ನಿಕ್ ವ್ಯಾಕ್ಸಿನ್​ನ ಉತ್ಪಾದನೆ ವಿಚಾರದಲ್ಲಿ ಭಾರತ ಸರ್ಕಾರದ ಜೊತೆ ರಷ್ಯಾದ ರಾಯಭಾರಿ ಮಾತನಾಡುವ ಮೂಲಕ ಪ್ರಥಮ ಹೆಜ್ಜೆ ಇರಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಈ ವಿಚಾರವನ್ನು ಕೇಂದ್ರ ಸರ್ಕಾರ ದೇಶದ ವ್ಯಾಕ್ಸಿನ್ ತಜ್ಞರ ಜೊತೆ ಸಮಾಲೋಚನೆ ಕೂಡ ಮಾಡಿದೆ ಎಂದು ಮೂಲಗಳು ಹೇಳಿವೆ.

ರಷ್ಯಾದ ಗಮಾಲೆಯಾ ರೀಸರ್ಚ್ ಇನ್ಸ್​ಟಿಟ್ಯೂಟ್ ಸಂಸ್ಥೆ ಸ್ಪುಟ್ನಿಕ್ ಲಸಿಕೆ ತಯಾರಿಸಿದೆ. ಆದರೆ, ಲಸಿಕೆ ತಯಾರಿಕೆಯ ಎಲ್ಲಾ ಹಂತಗಳನ್ನ ಪೂರ್ಣಗೊಳಿಸದೆಯೇ ಬಿಡುಗಡೆ ಮಾಡಿರುವುದು ಬಹಳಷ್ಟು ಸಂದೇಹ ಮತ್ತು ಆಕ್ಷೇಪಗಳಿಗೆ ಕಾರಣವಾಗಿದೆ. ಲಸಿಕೆ ಪರೀಕ್ಷೆಯಲ್ಲಿ ಬಹಳ ಪ್ರಮುಖವೆನ್ನಲಾಗುವ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಇನ್ನೂ ಆಗಿಲ್ಲ. ಹೆಚ್ಚೆಚ್ಚು ಜನರ ಮೇಲೆ ಲಸಿಕೆ ಪ್ರಯೋಗಿಸಿ ಯಾವುದೇ ಅಪಾಯವಿಲ್ಲವೆಂದು ದೃಢಪಟ್ಟ ಬಳಿಕವಷ್ಟೇ ಅಧಿಕೃತವಾಗಿ ಬಿಡುಗಡೆ ಮಾಡಬೇಕೆಂಬ ನಿಯಮ ಇದೆ. ರಷ್ಯಾ ಬಹಳ ಮುಂಚಿತವಾಗಿಯೇ ವ್ಯಾಕ್ಸಿನ್ ರಿಲೀಸ್ ಮಾಡಿದೆ.

ಇದನ್ನೂ ಓದಿ: COVID-19 ಲಸಿಕೆ; ಇಂದಿನಿಂದ ಪುಣೆಯಲ್ಲಿ ಆರಂಭವಾಗಲಿದೆ ಮಾನವನ ಮೇಲಿನ ಕ್ಲಿನಿಕಲ್‌ ಪ್ರಯೋಗ

ಲಸಿಕೆ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಜಗತ್ತಿನ ಬಹುತೇಕ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತದೆ. ಈಗ ರಷ್ಯಾ ತನ್ನ ಲಸಿಕೆಯ ಉತ್ಪಾದನೆಗೆ ಭಾರತದ ಸಹಯೋಗ ಬಯಸಿದೆ. ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಆರೋಗ್ಯ ಸಂಶೋಧನೆ ಇಲಾಖೆಗೆ ಈ ವಿಚಾರವನ್ನು ಅವಲೋಕಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಸ್ಪುಟ್ನಿಕ್ ವ್ಯಾಕ್ಸಿನ್ ಬಗ್ಗೆ ಕೆಲ ಮಾಹಿತಿಯನ್ನು ರಷ್ಯಾ ಅಧಿಕಾರಿಗಳು ನೀಡಿದ್ದಾರೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕ್ಕೆ ಸಂಬಂಧಿಸಿ ಇನ್ನಷ್ಟು ಮಾಹಿತಿಯನ್ನು ಎದುರುನೋಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: ದೆಹಲಿ ಗಲಭೆ; ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ರನ್ನು ಮತ್ತೊಮ್ಮೆ ಬಂಧಿಸಿದ ದೆಹಲಿ ಪೊಲೀಸರು

ರಷ್ಯಾದ ರಾಯಭಾರಿ ನಿಕೋಲೇ ಕುಡಶೆವ್ ಅವರು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಹಾಗೂ ಬಯೋಟೆಕ್ನಾಲಜಿ, ಹೆಲ್ತ್ ರೀಸರ್ಜ್ ಇಲಾಖೆಗಳ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಲಸಿಕೆ ವಿಚಾರವಾಗಿ ಭಾರತ ರಷ್ಯಾ ಮಧ್ಯೆ ಸಂವಹನ ನಡೆದಿದೆ. ಆರಂಭಿಕ ಮಾಹಿತಿ ಹಂಚಿಕೆಯಾಗಿದೆ. ಹೆಚ್ಚು ವಿವರದ ಮಾಹಿತಿ ಎದುರುನೋಡಲಾಗುತ್ತಿದೆ. ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನ ಯುವಕ ಭಾನುಪ್ರಕಾಶ್ ವಿಶ್ವದ ಅತಿವೇಗದ ಹ್ಯೂಮನ್ ಕ್ಯಾಲ್ಕುಲೇಟರ್

ಭಾರತದಲ್ಲೂ ಹಲವು ಲಸಿಕೆಗಳು ತಯಾರಾಗುತ್ತಿವೆ. ಎರಡು ಲಸಿಕೆಗಳು ಅಂತಿಮ ಹಂತದ ಟ್ರಯಲ್ ಪ್ರಾರಂಭಿಸಿವೆ. ಡಿಸೆಂಬರ್​ನಲ್ಲಿ ಭಾರತದ ಮೊದಲ ಲಸಿಕೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.
Published by: Vijayasarthy SN
First published: August 26, 2020, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories