Coronavirus Vaccine: ಕೊರೋನಾಗೆ ಔಷಧ ಕಂಡುಹಿಡಿದ ರಷ್ಯಾ; ಲಸಿಕೆಗಾಗಿ 20 ದೇಶಗಳಿಂದ ಈಗಾಗಲೇ ಬೇಡಿಕೆ

ಮಾಸ್ಕೋದ ಗಮಲೇಯ ಇನ್​ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತವಾಗಿದೆ. ಮತ್ತು ಅದನ್ನು ಅವರ ಹೆಣ್ಣುಮಕ್ಕಳಿಗೆ ಸಹ ನೀಡಲಾಗಿದೆ ಎಂದು ಪುಟಿನ್ ಹೇಳಿದರು. ಇದು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿಸಿದ್ದರು.

news18-kannada
Updated:August 11, 2020, 5:26 PM IST
Coronavirus Vaccine: ಕೊರೋನಾಗೆ ಔಷಧ ಕಂಡುಹಿಡಿದ ರಷ್ಯಾ; ಲಸಿಕೆಗಾಗಿ 20 ದೇಶಗಳಿಂದ ಈಗಾಗಲೇ ಬೇಡಿಕೆ
ಸಾಂದರ್ಭಿಕ ಚಿತ್ರ
  • Share this:
ಮಾಸ್ಕೋ; ಇಡೀ ಜಗತ್ತನ್ನೇ ಬಿಟ್ಟು ಬಿಡದೆ ಕಾಡುತ್ತಿರುವ ಕೊರೋನಾ ಸೋಂಕಿಗೆ ಕೊನೆಗೂ ರಷ್ಯಾ ಔಷಧಿ ಕಂಡುಹಿಡಿದಿದೆ. ಈ ವಿಷಯವನ್ನು ಇಂದು ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಘೋಷಣೆ ಮಾಡಿದ್ದರು. ಪುಟಿನ್ ಔಷಧಿ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಔಷಧಿಗಾಗಿ ಜಾಗತಿಕವಾಗಿ ತೀವ್ರ ಬೇಡಿಕೆ ಬಂದಿದೆ.

20 ದೇಶಗಳು ಬಿಲಿಯನ್ ಡೋಸ್​ಗಳಿಗೆ ಈಗಾಗಲೇ ಬೇಡಿಕೆ ಇಟ್ಟಿವೆ ಎಂದು ರಷ್ಯಾ ಹೇಳಿದೆ. ಸದ್ಯಕ್ಕೆ ಇಷ್ಟು ದೇಶಗಳು ಕೊರೋನಾ ಔಷಧಿಗೆ ನೋಂದಾಯಿಸಿಕೊಂಡಿದ್ದು, ಮುಂದೆ ಔಷಧ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರುವ ಸಾಧ್ಯತೆ ಇದೆ.
ಕೊರೋನಾ ವಿರುದ್ಧ "ಸುಸ್ಥಿರ ರೋಗ ನಿರೋಧಕ ಶಕ್ತಿ" ನೀಡುವ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದ್ದರು. ವಿಶ್ವದಲ್ಲೇ ಮೊದಲ ಬಾರಿಗೆ ಕೋವಿಡ್-19 ವಿರುದ್ಧ ಲಸಿಕೆ ನೋಂದಾಯಿಸಲಾಗಿದೆ ಎಂದು ಅವರು ಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಹೇಳಿದರು. ಕೊರೋನಾ ವೈರಸ್ ಲಸಿಕೆಯನ್ನು ತನ್ನ ಮಗಳಿಗೆ ನೀಡಲಾಗಿದೆ ಎಂದೂ ಪುಟಿನ್ ತಿಳಿಸಿದರು.ಇದನ್ನು ಓದಿ: Coronavirus Vaccine: ಕೊರೋನಾ ವೈರಸ್​ಗೆ ರಷ್ಯಾದಿಂದ ಮೊದಲ ಲಸಿಕೆ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ

ಮಾಸ್ಕೋದ ಗಮಲೇಯ ಇನ್​ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತವಾಗಿದೆ. ಮತ್ತು ಅದನ್ನು ಅವರ ಹೆಣ್ಣುಮಕ್ಕಳಿಗೆ ಸಹ ನೀಡಲಾಗಿದೆ ಎಂದು ಪುಟಿನ್ ಹೇಳಿದರು. ಇದು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿಸಿದ್ದರು.
Published by: HR Ramesh
First published: August 11, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading