HOME » NEWS » Coronavirus-latest-news » RUPSA WROTE LETTER TO CM AND PM TO RUSH TO THE AID OF PRIVATE SCHOOLS RHHSN SHTV

ಕೊರೋನಾ ಸಂಕಷ್ಟ ಕಾಲದಲ್ಲಿ ಖಾಸಗಿ ಶಾಲೆಗಳ ನೆರವಿಗೆ ಧಾವಿಸುವಂತೆ ಸಿಎಂ, ಪಿಎಂಗೆ ಪತ್ರ ಬರೆದ ರುಪ್ಸಾ

ಕೊರೋನಾದಿಂದ ಶೈಕ್ಷಣಿಕ ಸಂಸ್ಥೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಈಗಾಗಲೇ‌ ಕೆಲವು ಬಜೆಟ್ ಶಾಲೆಗಳು ಮುಚ್ಚಿಹೋಗಿವೆ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ತೊಂದರೆ ಕೊಡದೇ ಆರ್ಥಿಕವಾಗಿ ಉತ್ತೇಜಿಸಬೇಕಿದೆ. ಈ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ ಎಂದು ರುಪ್ಸಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

news18-kannada
Updated:May 5, 2021, 5:18 PM IST
ಕೊರೋನಾ ಸಂಕಷ್ಟ ಕಾಲದಲ್ಲಿ ಖಾಸಗಿ ಶಾಲೆಗಳ ನೆರವಿಗೆ ಧಾವಿಸುವಂತೆ ಸಿಎಂ, ಪಿಎಂಗೆ ಪತ್ರ ಬರೆದ ರುಪ್ಸಾ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಕೊರೋನಾ‌ ಆರ್ಭಟಕ್ಕೆ ಕರುನಾಡು ನಲುಗಿ ಹೋಗುತ್ತಿದೆ. ದಾಖಲೆ‌ ಮಟ್ಟದಲ್ಲಿ ಕೊರೋನಾ‌ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನತಾ ಕರ್ಫ್ಯೂ ಮುಂದುವರೆಯುವ ಲಕ್ಷಣವಿದೆ. ಇದರಿಂದ ಈ ವರುಷವೂ ಶಾಲೆ ನಡೆಯದ ಕಾರಣ ಖಾಸಗಿ ಶಾಲೆಗಳ ನೆರವಿಗೆ ನೆರವಿಗೆ ಧಾವಿಸುವಂತೆ ಸಿಎಂ ಬಿಎಸ್​ವೈ ಹಾಗೂ ಪ್ರಧಾನಿ ಮೋದಿ ಅವರಿಗೆ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಪತ್ರ ಬರೆದಿದೆ. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. 62 ಲಕ್ಷ‌ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಮುಂದುವರೆದಿದೆ.‌ ಇದರಲ್ಲಿ ನಾಲ್ಕು ಲಕ್ಷ ಶಿಕ್ಷಕರು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ‌ ಸಂಕಷ್ಟ ಹಿನ್ನೆಲೆ ಖಾಸಗಿ ಶಾಲೆಗಳ ನೆರವಿಗೆ ಧಾವಿಸುವಂತೆ ಸಿಎಂ, ಪಿಎಂಗೆ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದಿಂದ ಪತ್ರ ಬರೆಯಲಾಗಿದೆ.

ಖಾಸಗಿ ಶಾಲೆಗಳ ಮೇಲೆ ಆರ್ಥಿಕ ‌ಹೊರೆಯಾಗದಂತೆ ನೋಡಿಕೊಳ್ಳಿ ಎಂದು ಸಿಎಂ ಯಡಿಯೂರಪ್ಪ, ಪಿಎಂ ನರೇಂದ್ರ ಮೋದಿಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಖಾಸಗಿ ಶಾಲೆಗಳು ನಲುಗಿಹೋಗಿವೆ. ಕಳೆದ‌ ವರ್ಷ ಲಾಕ್ ಡೌನ್‌ನಿಂದಾಗಿ ಶಾಲೆಗಳು ನಡೆಸಲು ಆಗಲಿಲ್ಲ. ಕೆಲ ತಿಂಗಳು ಶಾಲೆ ನಡೆಸಿದರೂ ಸಮರ್ಪಕವಾಗಿ ಜರುಗಲೇ ಇಲ್ಲ. ಇಡೀ ವರ್ಷ ಆನ್ ಲೈನ್ ಕ್ಲಾಸ್ ಇದ್ದುದರಿಂದ ತರಗತಿಗಳು ಸಂಪೂರ್ಣಗೊಳ್ಳಲಿಲ್ಲ. ಇದೀಗ ಪರೀಕ್ಷೆಗಳಿಲ್ಲದೇ 9ನೇ ತರಗತಿಯವರೆಗೆ ತೇರ್ಗಡೆಗೊಳಿಸಲಾಗುತ್ತಿದೆ‌. ಇದರಿಂದ ಸರ್ಕಾರ ನಿಗಧಿ ಮಾಡಿದ್ದ ಶೇ.70ರಷ್ಟು ಶುಲ್ಕ‌ವನ್ನು ಪೋಷಕರು ಕಟ್ಟುತ್ತಿಲ್ಲ. ಇದರಿಂದ‌ ಸಾಕಷ್ಟ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಕಳೆದೊಂದು ವರ್ಷದಿಂದ ಶಾಲೆಗಳು ನಡೆದಿಲ್ಲ. ಸರ್ಕಾರ ನಿಗಧಿ ಮಾಡಿದಷ್ಟು ಶುಲ್ಕವೂ ಪೋಷಕರು ಕಟ್ಟಿಲ್ಲ. ಈ‌ ವರ್ಷವೂ ಆನ್ ಲೈನ್ ಕ್ಲಾಸ್ ಮುಂದುವರಿಯುವ ಸಾಧ್ಯತೆ ಇದೆ.‌ ಇದರಿಂದ ಖಾಸಗಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಶಾಲೆಗಳು ಮೇಲೆ ರಾಜ್ಯ ಹಾಗೂ ಕೇಂದ್ರ‌ ಸರ್ಕಾರ ಮೃದು ಧೋರಣೆ ತಾಳಬೇಕು ಎಂದು ಪತ್ರದಲ್ಲಿ‌ ಮನವಿ ಮಾಡಲಾಗಿದೆ.

ಇದನ್ನು ಓದಿ: ರಾಜ್ಯದ ಪ್ರತಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ನಿರ್ಧಾರ; ಸಚಿವ ಅರವಿಂದ್ ಲಿಂಬಾವಳಿ

ಪತ್ರದಲ್ಲಿ ಪ್ರಮುಖವಾಗಿ ರುಪ್ಸಾ ಈ ಮನವಿಯನ್ನು ಮಾಡಿದೆ. ಪಬ್ಲಿಕ್ ಸೆಕ್ಟರ್, ಖಾಸಗಿ ಸೆಕ್ಟರ್, ಮತ್ತು ಇತರೆ ಆರ್ಥಿಕ ಸಂಸ್ಥೆಗಳು, ಬ್ಯಾಂಕ್ ಗಳಿಂದ‌ ಪಡೆದ ಕಂತುಗಳ ಸಾಲದ‌ ಮೇಲಿನ ‌ಬಡ್ಡಿ ಮನ್ನಾ ಮಾಡಬೇಕು. ಏಪ್ರಿಲ್ 2020ರಿಂದ ಶಾಲೆಗಳು ಪುನರಾರಂಭವಾಗುವವರೆಗೆ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮೂಲಸೌಕರ್ಯ ಸಾಲಗಳು ಪುನರಾರಂಭವಾಗುವವರೆಗೆ NPA ಆಗದಂತೆ ಪುನರ್ ರಚನೆ ಮಾಡಬೇಕು.‌ ಕಡಿಮೆ ಬಡ್ಡಿ ದರದಲ್ಲಿ ಮೃದು ಸಾಲ ಕೊಡಿ ಎಂದು ಮನವಿ ಮಾಡಿದ್ದಾರೆ. ‘
Youtube Video

ಕೊರೋನಾದಿಂದ ಶೈಕ್ಷಣಿಕ ಸಂಸ್ಥೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಈಗಾಗಲೇ‌ ಕೆಲವು ಬಜೆಟ್ ಶಾಲೆಗಳು ಮುಚ್ಚಿಹೋಗಿವೆ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ತೊಂದರೆ ಕೊಡದೇ ಆರ್ಥಿಕವಾಗಿ ಉತ್ತೇಜಿಸಬೇಕಿದೆ. ಈ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ ಎಂದು ರುಪ್ಸಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
Published by: HR Ramesh
First published: May 5, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories