Black Fungus: ಕೋಳಿಯಿಂದ ಬ್ಲಾಕ್​ ಫಂಗಸ್ ಹರಡುತ್ತದಂತೆ ! ನಿಜವಾ? ಸತ್ಯ ಇಲ್ಲಿದೆ !

ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಂದ ಚಿಕನ್​ ಜೊತೆಗೆ ಬ್ಲಾಕ್ ಫಂಗಸ್ ಕೂಡಾ ಉಚಿತವಾಗಿ ಬಂತಾ ಎನ್ನುವ ಆತಂಕ ಸಹಜವಾಗೇ ಜನರನ್ನು ಕಾಡುತ್ತಿದೆ. ಆದ್ರೆ ನಿಜವಾಗ್ಲೂ ಕೋಳಿ ಅಥವಾ ಚಿಕನ್​ನಿಂದ ಬ್ಲಾಕ್​ ಫಂಗಸ್ ಬರುತ್ತಾ? ಅಥವಾ ಹರಡೋ ಅವಕಾಶ ಇದೆಯಾ? ಈ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ.

ಬ್ಲಾಕ್​ ಫಂಗಸ್

ಬ್ಲಾಕ್​ ಫಂಗಸ್

  • Share this:
Black Fungus: ಇನ್ನೇನು ವಾರವಿಡೀ ಲಾಕ್​ಡೌನ್ ನಡುವೆ, ಕೊರೊನಾ ಭಯದ ಜೊತೆಗೇ ಕಳೆದು ಮುಗಿದಿದೆ. ಭಾನುವಾರದ ದಿನ ಭರ್ಜರಿಯಾಗಿ ಬಿರಿಯಾನಿ ತಿನ್ನೋಕೆ ರೆಡಿಯಾದ ಜನ ವಾಟ್ಸಪ್​ ಗ್ರೂಪ್​ಗಳಲ್ಲಿ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ನೋಡಿ ಸಹಜವಾಗೇ ಶಾಕ್ ಆಗಿದ್ದಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಂದ ಚಿಕನ್​ ಜೊತೆಗೆ ಬ್ಲಾಕ್ ಫಂಗಸ್ ಕೂಡಾ ಉಚಿತವಾಗಿ ಬಂತಾ ಎನ್ನುವ ಆತಂಕ ಸಹಜವಾಗೇ ಜನರನ್ನು ಕಾಡುತ್ತಿದೆ. ಆದ್ರೆ ನಿಜವಾಗ್ಲೂ ಕೋಳಿ ಅಥವಾ ಚಿಕನ್​ನಿಂದ ಬ್ಲಾಕ್​ ಫಂಗಸ್ ಬರುತ್ತಾ? ಅಥವಾ ಹರಡೋ ಅವಕಾಶ ಇದೆಯಾ? ಈ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ.

ತಜ್ಞರು ಹೇಳೋ ಪ್ರಕಾರ ಬ್ಲಾಕ್ ಫಂಗಸ್ ಮನುಷ್ಯನಿಂದ ಪ್ರಾಣಿಗೆ ಅಥವಾ ಪ್ರಾಣಿಯಿಂದ ಮನುಷ್ಯನಿಗೆ ಹರಡೋಕೆ ಸಾಧ್ಯವಿಲ್ಲ. ಸದ್ಯ ಕೋವಿಡ್ ಗುಣವಾಯ್ತು ಎಂದು ನಿಟ್ಟುಸಿರು ಬಿಡುತ್ತಿರುವವರಲ್ಲಿ ಮರಣಭಯ ಉಂಟುಮಾಡುತ್ತಿರೋ ಈ ಕಪ್ಪು ಶಿಲೀಂಧ್ರ ಖಂಡಿತವಾಗಿ ಚಿಕನ್ ನಿಂದ ಬರುವುದಿಲ್ಲ, ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.

ವಿಶ್ವದೆಲ್ಲೆಡೆ ಕೋವಿಡ್ ಸೋಂಕಿನಿಂದ ಗುಣಮುಖರಾದ ಅನೇಕರನ್ನು ಬ್ಲಾಕ್​ ಫಂಗಸ್ ಸೋಂಕು ಕಾಡುತ್ತಿದೆ. ಇದಕ್ಕೆ ನೀಡುವ ಔಷಧಗಳ ಅಭಾವ ಕೂಡಾ ಉಂಟಾಗಿದ್ದು ಅದು ಮತ್ತೊಂದು ಹೊಸಾ ತಲೆನೋವಾಗಿ ಪರಿಣಮಿಸಿದದೆ. ಕೋವಿಡ್ ಸೋಂಕಿತರಿಗೆ ಕನಿಷ್ಟ ಚಿಕಿತ್ಸೆಗೆ ಸಿಗುವಷ್ಟು ಸಮಯವೂ ಬ್ಲಾಕ್ ಫಂಗಸ್ ವಿಚಾರದಲ್ಲಿ ಸಿಗುತ್ತಿಲ್ಲ. ​ ಹಾಗಾಗಿ ಅನೇಕರು ಚಿಕಿತ್ಸೆ ಸಿಗುವ ಮುನ್ನವೇ ಜೀವ ಚೆಲ್ಲುತ್ತಿದ್ದಾರೆ.

ಇದನ್ನೂ ಓದಿ: Coronavirus: ಪಾಸಿಟಿವ್ ಬಂದಾಗ ಗೋಮೂತ್ರ ಕುಡಿದು, ಬೆಳ್ಳುಳ್ಳಿ ತಿನ್ನಬಹುದಿತ್ತಲ್ಲಾ? ಬಿಜೆಪಿಯನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

ಆರಂಭದಲ್ಲಿ ಕೇವಲ ತಲೆ ನೋವಿನಂತೆ ಕಾಣುವ ಕಪ್ಪು ಶಿಲೀಂಧ್ರದ ರೋಗ ಲಕ್ಷಣ ನಂತರ ನಿಧಾನಕ್ಕೆ ಕಣ್ಣಿಗೆ ಹರಡುತ್ತದೆ. ಕೋವಿಡ್ ಸೋಂಕಿನಿಂದ ಗುಣವಾದವರೆಲ್ಲರಿಗೂ ಈ ಸಮಸ್ಯೆ ಕಾಡುವುದಿಲ್ಲ. ಐಸಿಯುಗಳಲ್ಲಿ ಅಥವಾ ಆಕ್ಸಿಜನ್ ಬಳಕೆ ಮಾಡಿದವರಲ್ಲಿ ಮಾತ್ರ ಕಂಡು ಬರುತ್ತದೆ. ಆಕ್ಸಿಜನ್ ಪೈಪ್ ಮತ್ತು ಅದಕ್ಕೆ ಸಂಬಂಧಿಸಿದ ಉಳಿದ ಸಲಕರಣೆಗಳನ್ನು ಸರಿಯಾಗಿ ಸ್ವಚ್ಛ ಮಾಡದೇ ಇರೋದ್ರಿಂದಲೇ ಈ ಸೋಂಕು ಸುಲಭವಾಗಿ ರೋಗಿಯನ್ನು ತಟ್ಟುತ್ತಿದೆ ಎನ್ನಲಾಗಿದೆ.

ಇನ್ನು ಬ್ಲಾಕ್ ಫಂಗಸ್ ಸೋಂಕಿನ ಆರಂಭದಲ್ಲಿ ತಲೆ ನೋವು ಕಂಡುಬಂದು ಅನೇಕರು ಅದನ್ನು ಕೋವಿಡ್​ ನಂತರ ಬರುವ ಆರೋಗ್ಯ ಸಮಸ್ಯೆ ಎಂದೇ ಭಾವಿಸುವ ಅಪಾಯವಿದೆ. ಅದ್ರಲ್ಲೂ ಸೈನಸ್ ಇದ್ದವರಿಗೆ ಬರುವಂತೆ ಹಣಯ ನಡುಮಧ್ಯೆ ಹೆಚ್ಚು ನೋವು ಇದರಲ್ಲಿ ಇರುತ್ತದೆ. ಆ ಹಂತದಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆ ಆರಂಭಿಸಿಬಿಡಬೇಕು. ಇಲ್ಲದಿದ್ದರೆ ಅದು ಮುಂದಿನ ಹಂತವಾಗಿ ಕಣ್ಣಿಗೆ ಹರಡುತ್ತದೆ. ಸೋಂಕು ಕಣ್ಣಿಗೆ ಹರಡಿದಾಗ ಕಣ್ಣು ಕೆಂಪಾಗುವುದು, ನೋವು ಉಂಟಾಗುವುದು ಕಂಡುಬರುತ್ತದೆ.

ಅನೇಕ ರೋಗಿಗಳು ಕಣ್ಣಿಗೆ ಏನೋ ಅಲರ್ಜಿ ಆಗಿದೆ ಎಂದುಕೊಂಡು ಒಂದೆರಡು ದಿನ ಕಾಯೋಣ ಎಂದು ಮನೆಯಲ್ಲೇ ಉಳಿದುಬಿಡುತ್ತಾರೆ. ಇದೇ ಅತ್ಯಂತ ಅಪಾಯಕಾರಿ ವಿಷಯ. ಯಾಕೆಂದ್ರೆ ಕಪ್ಪು ಶಿಲೀಂಧ್ರ ಬಹಳ ವೇಗವಾಗಿ ಒಂದು ಭಾಗದಿಂದ ಮತ್ತೊಂದಕ್ಕೆ ಹರಡುತ್ತದೆ. ಅನೇಕ ಸಂದರ್ಭಗಳಲ್ಲಿ 48 ಗಂಟೆಗಳಿಂದ 72 ಗಂಟೆಗಳೊಳಗೆ ಸೋಂಕು ಮೆದುಳಿಗೆ ತಲುಪಿಬಿಟ್ಟಿರುತ್ತದೆ. ಒಮ್ಮೆ ಸೋಂಕು ಮೆದುಳಿಗೆ ತಲುಪಿದರೆ ನಂತರ ಚಿಕಿತ್ಸೆ ಸಾಧ್ಯವಾಗುವುದಿಲ್ಲ.

ಇನ್ನುಮಧುಮೇಹಿಗಳು ಅಥವಾ ಈಗಾಗಲೇ ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಬಹಳ ವೇಗವಾಗಿ ತಗಲುವ ಅಪಾಯ ಇರುತ್ತದೆ. ಆದ್ದರಿಂದ ಕೋವಿಡ್ ನಿಂದ ಗುಣಮುಖರಾದರೂ ಆರೋಗ್ಯದ ಮೇಲೆ ನಿಗಾ ಇರಬೇಕು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಎನಿಸಿದರೂ ವೈದ್ಯರನ್ನು ಕಾಣಬೇಕು. ಆರಂಭದಲ್ಲೇ ಚಿಕಿತ್ಸೆ ದೊರೆತರೆ ಬ್ಲಾಕ್ ಫಂಗಸ್ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಎಚ್ಚರಿಕೆಯೊಂದೇ ಇಲ್ಲಿ ಮೂಲಮಂತ್ರ ಎನ್ನುವುದನ್ನು ಎಲ್ಲರೂ ನೆನಿನಲ್ಲಿ ಇಟ್ಟುಕೊಳ್ಳಬೇಕಿದೆ.
Published by:Soumya KN
First published: