CoronaVirus| ರೂಪಾಂತರಿ ಭಯ; ಚೀನಾ ಸೇರಿ 7 ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆ ಕಡ್ಡಾಯ

ಹೊಸ ರೂಪಾಂತರ ಕೊರೋನಾ ವೈರಸ್​ ಅನ್ನು ಮೊದಲು ಮೇನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಮಾಡಲಾಯಿತು. ಇದು ನಂತರ ಚೀನಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲೂ ಸಹ ಇದೇ ರೀತಿಯ ರೂಪಾಂತರಿ ಕಂಡುಬಂದಿದೆ.

file photo

file photo

 • Share this:
  ನವ ದೆಹಲಿ (ಸೆಪ್ಟೆಂಬರ್​ 02); ಮಾರಣಾಂತಿಕ ಕೊರೋನಾ ವೈರಸ್​ ಕಾಟ ಇನ್ನೂ ಭಾರತಕ್ಕೆ ತಪ್ಪಿಲ್ಲ. ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದರೂ ಸಹ ಕೊರೋನಾಗೆ ತುತ್ತಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಯಾಗುತ್ತಿಲ್ಲ. ಇನ್ನೂ ಸಾವಿನ ಸಂಖ್ಯೆಯೂ ಅಧಿಕವಾಗಿರುವುದು ಕಳವಳಕಾರಿ ಯಾಗಿದೆ. ಈ ನಡುವೆ ಯೂರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗಿದೆ. ಅಲ್ಲದೆ, ಕೊರೋನಾ ವೈರಸ್​ ಮತ್ತೆ ರೂಪಾಂತರ ಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಭಾರತ ವಿಮಾನ ಯಾನ ಸಚಿವಾಲಯ ಈಗಾಗಲೇ ಯೂರೋಪ್-ಮಧ್ಯಪ್ರಾಚ್ಯ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಿತ್ತು. ಆದರೆ, ಇದೀಗ ಚೀನಾ-ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸ್ವಾನ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ  ಸೇರಿದಂತೆ ಮತ್ತೆ 7 ದೇಶಗಳ ಭಾರತ ಪ್ರವೇಶಕ್ಕೆ ಕೇಂದ್ರ ಸರ್ಕಾರ ಇದೇ ನಿಯಮವನ್ನು ಜಾರಿಗೊಳಿಸಿದೆ.

  ಈ ಮೇಲ್ಕಂಡ ದೇಶಗಳಿಂದ ಭಾರತಕ್ಕೆ ಪ್ರವೇಶ ಭಯಸುವ ಪ್ರವಾಸಿಗಳು 72 ಗಂಟೆಯ ಒಳಗೆ ಪರೀಕ್ಷೆ ನಡೆಸಲಾಗಿರುವ RT-PCR ದಾಖಲಾತಿ ಪ್ರತಿಗಳು ಇದ್ದರೆ ಮಾತ್ರ ಭಾರತಕ್ಕೆ ಪ್ರವೇಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಂಕ್ರಾಮಿಕ ಕೊರೋನಾ ವೈರಸ್ ಹೊಸ ರೂಪಾಂತರ ಪತ್ತೆಯಾಗಿರುವ ಕಾರಣದಿಂದಾಗಿ ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಈ ಕ್ರಮ ಅನಿವಾರ್ಯ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಹೊಸ ರೂಪಾಂತರ ಕೊರೋನಾ ವೈರಸ್​ ಅನ್ನು ಮೊದಲು ಮೇನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಮಾಡಲಾಯಿತು. ಇದು ನಂತರ ಚೀನಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲೂ ಸಹ ಇದೇ ರೀತಿಯ ರೂಪಾಂತರಿ ಕಂಡುಬಂದಿದೆ. ಹೀಗಾಗಿ ಭಾರತ ಈ ದೇಶಗಳ ವಿಮಾನಗಳಿಗೆ ನಿರ್ಬಂಧ ಹೇರಿತ್ತು.

  ಹೊಸ ಮಾರ್ಗಸೂಚಿಗಳ ಪ್ರಕಾರ, ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಭಾರತಕ್ಕೆ ವಿಮಾನ ಹತ್ತಲು ಅವಕಾಶವಿದೆ ಮತ್ತು ಬಂದ ನಂತರ, ಅವರನ್ನು ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಕೋವಿಡ್‌ಗಾಗಿ ಪರೀಕ್ಷಿಸಲಾಗುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಜೀನೋಮ್ ಕಣ್ಗಾವಲುಗಾಗಿ ಸಕಾರಾತ್ಮಕ ಪ್ರಕರಣಗಳ ನಿರ್ದಿಷ್ಟ ಶೇಕಡಾವಾರು ಮಾದರಿಗಳನ್ನು ಕಳುಹಿಸಲು ಸಚಿವಾಲಯವು ಎಲ್ಲಾ ರಾಜ್ಯಗಳನ್ನು ಕೇಳಿದೆ.

  ಇದನ್ನೂ ಓದಿ: ಉತ್ತರಪ್ರದೇಶ; ಅನ್ಯ ಮಹಿಳೆಗಾಗಿ ಹೆಂಡತಿ ಮಕ್ಕಳನ್ನು ಕೊಂದು ಮನೆಯಲ್ಲೇ ಹೂತು ಪರಾರಿಯಾಗಿದ್ದ ವ್ಯಕ್ತಿ ಬಂಧನ

  ಈ ಹಿಂದೆ, ಮುಂಬೈನ ನಾಗರಿಕ ಸಂಸ್ಥೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೆಪ್ಟೆಂಬರ್ 3 ರಿಂದ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ RT-PCR ಪರೀಕ್ಷೆಗಳನ್ನು ಕಡ್ಡಾಯಗೊಳಿಸಿತ್ತು.

  2019ರಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಈ ಮಾರಣಾಂತಿಕ ಕೊರೋನಾ ವೈರಸ್​ ಕಳೆದ ಎರಡು ವರ್ಷಗಳ ಅವಧಿಯಲ್ಲಿ 44 ರಿಂದ 59 ಭಾರಿ ರೂಪಾಂತರ ಹೊಂದಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ. ಈಗ ರೂಪಾಂತರಗೊಂಡಿರುವ ವೈರಸ್​ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆದರೆ, ಈ ಹೊಸ ರೂಪಾಂತರಿಯ ಯಾವುದೇ ಪ್ರಕರಣಗಳು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

  ಇದನ್ನೂ ಓದಿ: Naseeruddin Shah| ತಾಲಿಬಾನಿಗಳ ಗೆಲುವಿಗೆ ಭಾರತದ ಕೆಲ ಮುಸ್ಲಿಮರು ಸಂಭ್ರಮಿಸುತ್ತಿರುವುದು ಆಘಾತಕಾರಿ; ನಾಸೀರುದ್ದೀನ್ ಶಾ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: