ಕೊರೋನಾ ಹೆಸರಿನಲ್ಲಿ RSS​ ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ತಿದಾರೆ; ಡಿಕೆಶಿ ಆರೋಪ

ಫೋನ್ ಎತ್ತಿದರೆ ಕೆಮ್ಮೋದು ಬರುತ್ತೆ, ಅದನ್ನ ಕೇಳಿದರೆ ನಮಗೂ ಕೆಮ್ಮು ಜಾಸ್ತಿಯಾಗುತ್ತದೆ. ನಮ್ಮ ಜಿಲ್ಲೆಯಲ್ಲೂ ಕೊರೋನಾ ಶಂಕಿತರು ಹೆಚ್ಚಾಗಿದ್ದಾರೆ. ನಮ್ಮ ಡ್ರೈವರ್ ಗಳು ಕೂಡ ಬೆಂಗಳೂರಿನಿಂದ ಓಡೋಗಿದ್ದಾರೆ.  ಹಳ್ಳಿಗಳಿಗೂ ಕೂಡ ಸೋಂಕು ಹರಡಿದೆ. ನನ್ನ ಕಚೇರಿ ಕೂಡ ಮುಚ್ಚಿದ್ದೇನೆ. ಇನ್ಮುಂದೆ ಸುದ್ದಿಗೋಷ್ಠಿ ಮಾಡಲ್ಲ, ಪ್ರೆಸ್ ರಿಲೀಸ್ ಮಾಡ್ತೇನೆ. ನನಗೂ ಭಯ ಇದೆ. ಅದಕ್ಕೆ ದೂರ ಕುಳಿತಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

 • Share this:
  ಬೆಂಗಳೂರು(ಮಾ.26): ಕೊರೋನಾ ವೈರಸ್​ ಭೀತಿ ಹೆಚ್ಚಾಗಿರುವ ಹಿನ್ನೆಲೆ ಏಪ್ರಿಲ್​ 14ರವರೆಗೆ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಕೊರೋನಾ ಕುರಿತಾಗಿ ಸದಾಶಿವನಗರದ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.

  ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ನನಗೆ ಕರೆ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಸಂಘಟನೆಗಳ ಮುಖ್ಯಸ್ಥರು ಕರೆ ಮಾಡುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ರೈತ ಸಂಘಟನೆಗಳ ಮುಖ್ಯಸ್ಥರು ಮಾತನಾಡಿದ್ದಾರೆ. ಪ್ರತಿಯೊಬ್ಬ ನಾಗರಿಕ ಕೂಡ ಮನೆಯಲ್ಲಿ ಇರಬೇಕು ಅಂತ ಪ್ರಧಾನಿ ಮೋದಿ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಗಳು ಅದೇ ರೀತಿಆಗಿ ಕೆಲಸ ಮಾಡುತ್ತಿವೆ. ಈಗ ಏನನ್ನೂ ನಾನು ವ್ಯಾಖ್ಯಾನ ಮಾಡಲು ಹೋಗಲ್ಲ ಎಂದು ಹೇಳಿದರು.

  ಪೊಲೀಸರು ಮಾಡುತ್ತಿರುವ ಕಾರ್ಯಶೈಲಿ ತೋರಿಸುತ್ತಿದ್ದೀರಿ. ಜನರಿಗೆ ಹೊಡೆಯುವ, ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ಅಪರಾಧ ಏನ್ ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರನ್ನೂ ನಿಯಂತ್ರಣ ಮಾಡಿ.  ನಿಮ್ಮ ಆರ್ ಎಸ್ ಎಸ್ ಸಿದ್ದಾಂತ ಕೆಲಸದ ಬಗ್ಗೆ ಚರ್ಚೆ ಮಾಡಲ್ಲ. ಅನುಮತಿ ತೆಗೆದುಕೊಂಡಿದ್ದೇವೆ ಅಂತ ಕಲೆಕ್ಷನ್ ಮಾಡಲು ಹೊರಟಿದ್ದಾರೆ. ಐದು ಕೆ.ಜಿ ಅಕ್ಕಿ, ಉಪ್ಪು, ಅಡುಗೆ ಅಣ್ಣೆ ಕೊಡುತ್ತೇವೆ ಅಂತ ಗಾಡಿಗಳಲ್ಲಿ ಓಡಾಡುತ್ತಿದ್ದಾರೆ. ಇದಕ್ಕೆ ಸಿಎಂ ಬಿಎಸ್​ವೈ ಅನುಮತಿ ಕೊಟ್ಟಿದ್ದಾರಾ? ಎಲ್ಲರೂ ಕೂಡ ಸೇವೆ ಮಾಡಲು ರೆಡಿಯಾಗಿದ್ದಾರೆ. ಆದರೆ ಇವರು ಬೇಕಾಬಿಟ್ಟಿ ಓಡಾಡಿಕೊಂಡು ಇದ್ದಾರೆ.  ಕೊರೋನಾ ಇದು ಪ್ರಪಂಚದ ಸಮಸ್ಯೆ, ದೇಶದ ಸಮಸ್ಯೆ. ನಾವು ಎಲ್ಲ ರೀತಿಯ ಸಹಕಾರ ಕೊಡ್ತೀವಿ ಅಂತ ಹೇಳಿದ್ದೇವೆ. ಆದರೆ ನಿಮ್ಮ ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

  ಲಾಕ್‌ಡೌನ್ ಪರಿಹಾರಕ್ಕಾಗಿ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ; ಯಾವ ವಲಯಕ್ಕೆ ಎಷ್ಟು ಹಣ? ಇಲ್ಲಿದೆ ಮಾಹಿತಿ

  ಸರ್ಕಾರ ಇದುವರೆಗೂ ಒಂದೇ ಒಂದು ಪ್ಲಾನ್ ಆಫ್ ಆ್ಯಕ್ಷನ್ ತೆಗೆದುಕೊಂಡಿಲ್ಲ. ನಮ್ಮನ್ನು ಕರೆದು ಸಲಹೆನೂ ಪಡೆಯದೇ ಹೋಗ್ತಿದ್ದಾರೆ. ಇಬ್ಬರು ಸಚಿವರ ನಡುವೆ ಗೊಂದಲ ಇದೆ ಅನ್ನೋದನ್ನ ನೋಡ್ತಾ ಇದ್ದೀವಿ. ಇದು ನಿಮ್ಮ ಪಕ್ಷದ ಸಮಸ್ಯೆನಾ? ಅಥವಾ ಆಡಳಿತದ ಸಮಸ್ಯೆನಾ? ಎಂದು ಪ್ರಶ್ನಿಸಿದರು. ಮುಂದುವರೆದ ಅವರು, ಅತೀ ಬುದ್ದಿವಂತ ಸಚಿವರಿದ್ದಾರೆ, ಅವರ ಬಗ್ಗೆ ನಾನು ಮಾತಾಡೋಕೆ ಹೋಗಲ್ಲ. ಇಬ್ಬರೂ ಸಚಿವರಿಗೆ ಕೆಲಸ ಭಾಗ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.

  ಫೋನ್ ಎತ್ತಿದರೆ ಕೆಮ್ಮೋದು ಬರುತ್ತೆ, ಅದನ್ನ ಕೇಳಿದರೆ ನಮಗೂ ಕೆಮ್ಮು ಜಾಸ್ತಿಯಾಗುತ್ತದೆ. ನಮ್ಮ ಜಿಲ್ಲೆಯಲ್ಲೂ ಕೊರೋನಾ ಶಂಕಿತರು ಹೆಚ್ಚಾಗಿದ್ದಾರೆ. ನಮ್ಮ ಡ್ರೈವರ್ ಗಳು ಕೂಡ ಬೆಂಗಳೂರಿನಿಂದ ಓಡೋಗಿದ್ದಾರೆ.  ಹಳ್ಳಿಗಳಿಗೂ ಕೂಡ ಸೋಂಕು ಹರಡಿದೆ. ನನ್ನ ಕಚೇರಿ ಕೂಡ ಮುಚ್ಚಿದ್ದೇನೆ. ಇನ್ಮುಂದೆ ಸುದ್ದಿಗೋಷ್ಠಿ ಮಾಡಲ್ಲ, ಪ್ರೆಸ್ ರಿಲೀಸ್ ಮಾಡ್ತೇನೆ. ನನಗೂ ಭಯ ಇದೆ. ಅದಕ್ಕೆ ದೂರ ಕುಳಿತಿದ್ದೇನೆ ಎಂದರು.

  ಗಡಿ ವಿಚಾರ, ನೀರು, ಭೂಮಿ ವಿಚಾರ ಬಂದಾಗ ಸರ್ವಪಕ್ಷ ಸಭೆ ಕರೆದು ಮಾತನಾಡುವುದು ವಾಡಿಕೆ. ಸರ್ವ ಪಕ್ಷ ಸಭೆ ಕರೆಯಬೇಕು ಅಂತ ನಾನು ಒತ್ತಾಯ ಮಾಡುತ್ತೇನೆ. ಪ್ರಧಾನಿ ಮೋದಿ ಕೂಡ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

  ಕೆಎಂಎಫ್​​ಗೂ ತಟ್ಟಿದ ಕೊರೋನಾ ಎಫೆಕ್ಟ್​​​: ಹೊರ ರಾಜ್ಯಗಳಿಗೆ ನಂದಿನಿ​ ಹಾಲಿನ ಪೂರೈಕೆ ಸ್ಥಗಿತ
  First published: