ಕೊರೋನಾ ನಡುವೆ ಪುಡಿ ರೌಡಿಗಳ ಅಟ್ಟಹಾಸ; ಪೊಲೀಸರಿಗೆ ದೂರು ನೀಡಿದ್ದಕ್ಕೆ ರೌಡಿ ಶೀಟರ್​​ಗಳಿಂದ ದಾಂಧಲೆ

ಕಮ್ಮನಹಳ್ಳಿ ವಾಸಿ ನಾರಾಯಣಪ್ಪ ಎಂಬುವವರಿಗೆ ಸೇರಿದ ಎರಡು ಕಾರು, ವಾಟರ್ ಟ್ಯಾಂಕರ್, ಆಟೋ ಮತ್ತು ಬೈಕ್ ಒಂದನ್ನು ಇದೇ ಕಮ್ಮನಹಳ್ಳಿ ಪುಡಿ ರೌಡಿಗಳಾದ ಮಾದೇಶ, ಶ್ರೀನಾಥ, ಅಪ್ಪಿ  ಮತ್ತು ಅಸ್ಲಂ ಬೆಂಕಿ ಹಚ್ಚಿ, ಸೈಜು ಕಲ್ಲುಗಳನ್ನು ವಾಹನಗಳ ಮೇಲೆ ಹಾಕಿ ಧ್ವಂಸಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್(ಜೂ.06): ಒಂದು ಕಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಇದರ ನಡುವೆ ಹಲ್ಲೆ ನಡೆಸಿದ ಪುಡಿ ರೌಡಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬರ ಮನೆಯ ಬಳಿ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಇಂಡಿಗೋ ಕಾರು, ವಾಟರ್ ಟ್ಯಾಂಕರ್ ವಾಹನ, ಆಟೋ ಗಾಜುಗಳನ್ನು ಪುಡಿಗೈದು ಬೈಕ್ ನ್ನು ಜಖಂಗೊಳಿಸಿರುವ ಘಟನೆ ಬೆಂಗಳೂರು ಹೊರವಲಯ ಕಮ್ಮನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಕಮ್ಮನಹಳ್ಳಿ ವಾಸಿ ನಾರಾಯಣಪ್ಪ ಎಂಬುವವರಿಗೆ ಸೇರಿದ ಎರಡು ಕಾರು, ವಾಟರ್ ಟ್ಯಾಂಕರ್, ಆಟೋ ಮತ್ತು ಬೈಕ್ ಒಂದನ್ನು ಇದೇ ಕಮ್ಮನಹಳ್ಳಿ ಪುಡಿ ರೌಡಿಗಳಾದ ಮಾದೇಶ, ಶ್ರೀನಾಥ, ಅಪ್ಪಿ  ಮತ್ತು ಅಸ್ಲಂ ಬೆಂಕಿ ಹಚ್ಚಿ, ಸೈಜು ಕಲ್ಲುಗಳನ್ನು ವಾಹನಗಳ ಮೇಲೆ ಹಾಕಿ ಧ್ವಂಸಗೊಳಿಸಿದ್ದಾರೆ.

ಅಂದ ಹಾಗೆ ನಿನ್ನೆ ರಾತ್ರಿ ಪುಡಿ ರೌಡಿಗಳಾದ ಮಾದೇಶ ಅಂಡ್ ಗ್ಯಾಂಗ್ ಮಹಿಳೆ ಸೇರಿದಂತೆ ಆಕೆಯ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗಿತ್ತು. ಈ ವೇಳೆ ನೆರವಿಗೆ ಧಾವಿಸಿದ ನಾರಾಯಣಪ್ಪ ಮತ್ತು ಇಬ್ಬರು ಮಕ್ಕಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಪುಡಿ ರೌಡಿಗಳ ಆರ್ಭಟ ಹೆಚ್ಚಾಗುತ್ತಿದ್ದಂತೆ ನಾರಾಯಣಪ್ಪ ಮತ್ತು ಮಕ್ಕಳು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಾದೇಶ್ ಅಂಡ್ ಗ್ಯಾಂಗ್ ಮೇಲೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಹುಳಿಮಾವು ಠಾಣೆಯಲ್ಲಿ ದೂರು ದಾಖಲಾದ ವಿಚಾರ ತಿಳಿದ ಮಾದೇಶ ಅಂಡ್ ಗ್ಯಾಂಗ್ ದಾಂದಲೆ ನಡೆಸಿ ಪ್ರತಿಕಾರ ತೀರಿಸಿಕೊಂಡಿದ್ದಾರೆ.

ತಡರಾತ್ರಿ ನಾರಾಯಣಪ್ಪನ ಮನೆ ಬಳಿ ದಾಂಗುಡಿಯಿಟ್ಟ ಮಾದೇಶ್ ಅಂಡ್ ಗ್ಯಾಂಗ್ ಆತನಿಗೆ ಸೇರಿದ ಇನ್ನೋವಾ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಲ್ಲಿಯೇ ಪಕ್ಕದಲ್ಲಿದ್ದ ಇಂಡಿಗೋ ಕಾರು, ವಾಟರ್ ಟ್ಯಾಂಕರ್ ವಾಹನ ಆಟೋ ಗಾಜು ಪುಡಿ ಪುಡಿ ಮಾಡಿದ್ದಾರೆ. ಜೊತೆಗೆ ಬೈಕ್ ಮೇಲೆ ಸೈಜು ಕಲ್ಲುಗಳು ಎತ್ತಿಹಾಕಿ ಜಖಂಗೊಳಿಸಿದ್ದಾರೆ. ಜೊತೆಗೆ ಮಾರಕಾಸ್ತ್ರಗಳನ್ನು ಹಿಡಿದು ಮನೆಯಿಂದ ಹೊರಬರುವಂತೆ ಧಮ್ಕಿ ಹಾಕಿದ್ದಾರೆ. ಭಯಗೊಂಡ ನಾರಾಯಣಪ್ಪ ಪೊಲೀಸರಿಗೆ ಪೋನ್ ಮಾಡಿದ್ದಾರೆ. ಇನ್ನೂ ವಿಷಯ ತಿಳಿದು ಹುಳಿಮಾವು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಪುಡಿ ರೌಡಿಗಳು ಪರಾರಿಯಾಗಿದ್ದಾರೆ.

Reliance Jio | ಜಿಯೋ ಪ್ಲಾಟ್​ಫಾರಂನಲ್ಲಿ ಮತ್ತೆ 4,546 ಕೋಟಿ ಹೂಡಿಕೆ ಮಾಡಿದ ಸಿಲ್ವರ್ ಲೇಕ್ ಕಂಪನಿ

ಅಂದ ಹಾಗೆ ವರ್ಷದ ಹಿಂದೆ ನೈಸ್ ರಸ್ತೆಯಲ್ಲಿ ನಡೆದಿದ್ದ ಕಾಳೇನಾ ಅಗ್ರಹಾರ ಹರೀಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಮಾದೇಶ, ಶ್ರೀನಾಥ, ಅಪ್ಪಿ  ಮತ್ತು ಅಸ್ಲಂ ತಲಘಟ್ಟಪುರ ಮತ್ತು ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ಗಳಾಗಿದ್ದಾರೆ. ರಾಬರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಡರಾತ್ರಿ ನಡೆದ ಘಟನೆ ಸಂಬಂಧ ಆರೋಪಿಗಳ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
First published: