RIL Q4 Results: ರಿಲಾಯನ್ಸ್ 4ನೇ ತ್ರೈಮಾಸಿಕ ವರದಿ ಪ್ರಕಟ; ಇಲ್ಲಿವೆ ಹೈಲೆಟ್ಸ್
ರಿಲಾಯನ್ಸ್ ಸಂಸ್ಥೆಯೂ 136,240 ಕೋಟಿ ರೂ. ಏಕೀಕೃತ ಆದಾಯದೊಂದಿಗೆ 2020-21 ಆರ್ಥಿಕ ವರ್ಷದಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಕಾರ್ಯಾಚರಣಾ EBITDA 21,782 ಕೋಟಿ ರೂ. ಮೂಲಕ ದ್ವಿಗುಣಗೊಂಡಿದೆ. ಇನ್ನು ನಿವ್ವಳ ಲಾಭಾಂಶ 6,546 ಕೋಟಿ ರೂ ಮತ್ತು ನೆಟ್ ಪ್ರಾಫಿಟ್ ಬಿಫೋರ್ ಎಕ್ಸೆಪ್ಷನಲ್ ಐಟಮ್ಸ್(NPBEI) 10,813 ಕೋಟಿ. ರೂ ಆಗಿದೆ.
ನವದೆಹಲಿ(ಏ.30): ಏಷ್ಯಾದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಮಾಲೀಕತ್ವದ ದೇಶದ ಅತೀದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ 4ನೇ ತ್ರೈಮಾಸಿಕದಲ್ಲಿ ಗಳಿಸಿದ ಆದಾಯವನ್ನು ಘೋಷಿಸಿದೆ. ಈ ವರ್ಷ 2020ನೇ ಸಾಲಿನ ಕ್ಯೂ4ನಲ್ಲಿ ಒಟ್ಟು 136,240 ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ 10,813 ಕೋಟಿ ರೂ. ನಿವ್ವಳ ಲಾಭಾಂಶ ಎಂದು ರಿಲಯನ್ಸ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಮುಖ ಅಂಶಗಳು:
ರಿಲಯನ್ಸ್ ಸಂಸ್ಥೆಯೂ 136,240 ಕೋಟಿ ರೂ. ಏಕೀಕೃತ ಆದಾಯದೊಂದಿಗೆ 2020-21 ಆರ್ಥಿಕ ವರ್ಷದಲ್ಲಿ ಉತ್ತಮ ಆರಂಭವನ್ನು ಮಾಡಿದೆ. ಕಾರ್ಯಾಚರಣಾ EBITDA 21,782 ಕೋಟಿ ರೂ. ಮೂಲಕ ದ್ವಿಗುಣಗೊಂಡಿದೆ. ಇನ್ನು ನಿವ್ವಳ ಲಾಭಾಂಶ 6,546 ಕೋಟಿ ರೂ ಮತ್ತು ನೆಟ್ ಪ್ರಾಫಿಟ್ ಬಿಫೋರ್ ಎಕ್ಸೆಪ್ಷನಲ್ ಐಟಮ್ಸ್(NPBEI) 10,813 ಕೋಟಿ. ರೂ ಆಗಿದೆ.
ಇನ್ನು ಗ್ರಾಸ್ ರಿಫೈನಿಂಗ್ ಮಾರ್ಜಿನ್ಸ್(Gross refining margins) 8.9 ಯುಎಸ್ ಡಾಲರ್ಸ್ ವರ್ಸಸ್ 9.2 ಯುಎಸ್ ಡಾಲರ್ಸ್ ಆಗಿದೆ. ಈ ಪೈಕಿ 2020ನೇ ತ್ರೈಮಾಸಿಕದಲ್ಲಿ ಶೇ.3ರಷ್ಟು ಕುಸಿತ ವರ್ಸಸ್ ಶೇ.15ರಷ್ಟು ನಿರೀಕ್ಷಿತ ಕುಸಿತ ಎಂಬತಾಗಿದೆ.
ಸೆಗ್ಮೆಂಟಲ್ ಫಲಿತಾಂಶ:
ಆದಾಯ: ಪೆಟ್ರೋಕೆಮಿಕಲ್ಸ್- 32,206 ಕೋಟಿ ರೂ., ರಿಫೈನಿಂಗ್- 84,854 ಕೋಟಿ ರೂ., ಆರ್ಗನೈಸ್ಡ್ ರೀಟೈಲ್- 38,211 ಕೋಟಿ ರೂ., ಡಿಜಿಟಲ್ ಸರ್ವೀಸಸ್- 18,632 ಕೋಟಿ ರೂ.
ಇಬಿಐಟಿಡಿಎ: ಪೆಟ್ರೋಕೆಮಿಕಲ್ಸ್- 5,938 ಕೋಟಿ ರೂ., ರಿಫೈನಿಂಗ್- 6,614 ಕೋಟಿ ರೂ., ಆರ್ಗನೈಸ್ಡ್ ರೀಟೈಲ್- 2,556 ಕೋಟಿ ರೂ., ಡಿಜಿಟಲ್ ಸರ್ವೀಸಸ್- 6,452 ಕೋಟಿ ರೂ.
ನೆಟ್ ಪ್ರಾಫಿಟ್: ಜಿಯೋ- 2331 ಕೋಟಿ ನಿವ್ವಳ ಲಾಭ
ಒಟ್ಟಾರೆ ಹೈಲೆಟ್ಸ್:
ವಾರ್ಷಿಕ EBITDA ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ. ದಾಟಿದೆ
ತ್ರೈಮಾಸಿಕ ಡಿಜಿಟಲ್ ಸರ್ವೀಸ್ EBITDA 6,452 ಕೋಟಿ ರೂ. ಅಂದರೇ ಶೇ.42.9 ಲಾಭಾಂಶ ಆಗಿದೆ
ವಾರ್ಷಿಕ ಆದಾಯವೂ ಶೇ.40.7 ಡಿಜಿಟಲ್ ವ್ಯವಹಾರ ಮತ್ತು ಶೇ. 24.8 ರೀಟೆಲ್ ಬ್ಯುಸಿನೆಸ್ನಿಂದ ಬಂದಿದೆ
ಒಂದು ಡಿವಿಡೆಂಟ್ ಶೇರ್ಗೆ 6.5 ರೂ. ಆಗಿದೆ
ಭಾರತದಲ್ಲೇ ಮೊದಲ ಬಾರಿಗೆ ದೊಡ್ಡ ಮೊತ್ತವೆಂದರೇ ಒಂದು ಶೇರ್ಗೆ 1,257 ರೂ. ಅಂದರೆ 1:15 ರೇಷಿಯೋ ಆಗುವ ಮೂಲಕ 53,125 ಕೂಟಿ ರೂ ಲಾಭ ಬಂದಿದೆ
ಫೇಸ್ಬುಕ್ ಸಂಸ್ಥೆಯೂ ಜಿಯೋನ ಶೇ.9.99 ಪಾಲುದಾರಿಗೆ ಖರೀದಿ ಮಾಡಿದ ಕಾರಣ 43,574 ಕೋಟಿ ಆದಾಯ
ಫೇಸ್ಬುಕ್, ಬಿಪಿ ಹೂಡಿಕೆ ಸೇರಿದಂತೆ ಇತ್ಯಾದಿ ಮೂಲಗಳಿಂದ ಬಂದ ಒಟ್ಟು ಆದಾಯ 1.04 ಲಕ್ಷ ಕೋಟಿ ರೂ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ