HOME » NEWS » Coronavirus-latest-news » RICE MILLS IN FEAR OF CLOSURE FOR CORONA EFFECT IN RAICHUR HK

ಅಕ್ಕಿ ಗಿರಣಿ ಮೇಲೂ ಕೊರೋನಾ ಎಫೆಕ್ಟ್ - ಮುಚ್ಚುವ ಭೀತಿಯಲ್ಲಿ ರೈಸ್ ಮಿಲ್ ಗಳು

ಕಳೆದ ಒಂದು ತಿಂಗಳನಿಂದ‌ ಕೊರೋನಾ ಹೆಮ್ಮಾರಿಯಿಂದಾಗಿ ಅಕ್ಕಿ ಗಿರಣಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

news18-kannada
Updated:April 4, 2020, 11:40 PM IST
ಅಕ್ಕಿ ಗಿರಣಿ ಮೇಲೂ ಕೊರೋನಾ ಎಫೆಕ್ಟ್ - ಮುಚ್ಚುವ ಭೀತಿಯಲ್ಲಿ ರೈಸ್ ಮಿಲ್ ಗಳು
ರೈಸ್​ ಮಿಲ್
  • Share this:
ರಾಯಚೂರು(ಏ.04): ಮಹಾಮಾರಿ ಕೊರೋನಾ ಎಫೆಕ್ಟ್ ಅಕ್ಕಿ ಗಿರಣಿಗಳ ಮೇಲೆಯೂ ಬಿದ್ದಿದೆ, ಮೊದಲೇ ಜಿಎಸ್ ಟಿ, ಎಪಿಎಂಸಿ ಶುಲ್ಕ ಗೊಂದಲದಲ್ಲಿದ್ದವರಿಗೆ ಈಗ ಕೊರೋನಾದಿಂದ ವಹಿವಾಟು ಸ್ಥಗಿತಗೊಂಡಿದೆ, ಇದೇ ರೀತಿ ಮುಂದುವರಿದರೆ ಅಕ್ಕಿ ಗಿರಣಿಗಳು ಬಾಗಿಲು ಹಾಕಲಿವೆ.

ಕೊರೋನಾ ವೈರಸ್ ಕೇವಲ ಮನುಷ್ಯನ ಮೇಲೆ‌ ಪರಿಣಾಮ ಬೀರಿಲ್ಲ, ತಿನ್ನುವ ಅನ್ನದ ಉದ್ಯಮದ ಮೇಲೆಯೂ ಬಿದ್ದಿದೆ. ಕಳೆದ ಒಂದು ತಿಂಗಳನಿಂದ‌ ಕೊರೋನಾ ಹೆಮ್ಮಾರಿಯಿಂದಾಗಿ ಅಕ್ಕಿ ಗಿರಣಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೊದಲು ಅವೈಜ್ಞಾನಿಕ ಜಿಎಸ್ಟಿ ಹಾಗೂ ಎಪಿಎಂಸಿ ಶುಲ್ಕಗಳಿಂದಾಗಿ ಅಕ್ಕಿ ಗಿರಣಿ ಮಾಲೀಕರು ಹಾನಿಗೊಳಗಾಗಿದ್ದರು. ಈಗ ಕೊರೊನಾದಿಂದ‌ ವಿಶ್ವದ ಇತರ ಕಡೆ ವಹಿವಾಟು ಸ್ಥಗಿತಗೊಂಡಿದೆ.

ಇದೇ ರೀತಿ ಸ್ಥಳೀಯವಾಗಿ ಮಾರುಕಟ್ಟೆಗಳು ಬಂದ್ ಆಗಿದ್ದರಿಂದ ಅಕ್ಕಿ ಗಿರಣಿಗಳಲ್ಲಿ ಭತ್ತ ನುರಿಸಿ ತಯಾರಿಸಿದ ಅಕ್ಕಿಯನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದಾಗಿ ರೈಸ್ ಮಿಲ್ ಗಳಲ್ಲಿ ಈಗ ಅಕ್ಕಿ ಮಾರಾಟವಾಗದೆ ಉಳಿದಿವೆ. ರೈಸ್ ಮಿಲ್ ಗಳಲ್ಲಿ ಅಕ್ಕಿ ಮಾರಾಟವಾಗದೆ ಇರುವದರಿಂದ ಅನಿವಾರ್ಯವಾಗಿ ರೈಸ್ ಮಿಲ್ ಗಳನ್ನು ಮಾಲೀಕರು ತಾತ್ಕಾಲಿಕವಾಗಿ ಬಂದ್ ಮಾಡುತ್ತಿದ್ದಾರೆ.

ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಅಕ್ಕಿ ಗಿರಣಿಗಳಿವೆ, ರಾಯಚೂರು ಜಿಲ್ಲೆಯಲ್ಲಿ 136 ಅಕ್ಕಿ ಗಿರಣಿಗಳಿವೆ. ಈಗ ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಭತ್ತವನ್ನು ಖರೀದಿಸಿದ ಭತ್ತವನ್ನು ನುರಿಸಿ ಅಕ್ಕಿ ಮಾಡುವ ಸಿಜನ್ ನಲ್ಲಿ ಕೊರೋನಾ ಎಫೆಕ್ಟ್ ನಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಇನ್ನು ಪ್ರತಿ ಮಿಲ್ ನಲ್ಲಿ 50 -100 ಜನ‌ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂಥ‌ ಸ್ಥಿತಿ ಬಂದಿದೆ  ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ ಹೇಳುತ್ತಾರೆ.

ಇದನ್ನೂ ಓದಿ : ದೇಶವೇ ಲಾಕ್ ಡೌನ್ ಇದ್ದರೂ ಇಲ್ಲಿ 24 ತಾಸು ಕೆಲಸ; ಸರ್ಜಿಕಲ್ ಕಿಟ್ ಸಿದ್ಧಪಡಿಸಲು ಹಗಲಿರುಳು ಶ್ರಮ

ಈ ಮಧ್ಯೆ ಕೊರೋನಾ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಜನತಾ ಕರ್ಫ್ಯೂ ನಂಥ ಕಾರ್ಯಕ್ರಮ ಉತ್ತಮವಾಗಿದೆ. ಹೇಗಾದರೂ ಮೊದಲು ಕೊರೋನಾ ಸೋಂಕು‌‌ ಕಡಿಮೆಯಾಗಿ ಅಕ್ಕಿ ಉದ್ಯಮ ಆರಂಭವಾಗಲಿ‌ ಎಂದು ರೈಸ್​​ ಮಿಲ್​​​ ಮಾಲೀಕರು ಪ್ರಾರ್ಥಿಸುತ್ತಿದ್ದಾರೆ.
Youtube Video
First published: April 4, 2020, 11:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories