ಅಂಗವಿಕಲರು, ನಿರ್ಗತಿಕರು, ಬಡವರಿಗೆ 5 ಸಾವಿರ ಫುಡ್ ಕಿಟ್ ವಿತರಿಸಿದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ

ನಿವೃತ್ತ ಜಿಲ್ಲಾಧಿಕಾರಿಯಾಗಿರುವ ಪುಟ್ಟಸ್ವಾಮಿಯವರು ಈ ಹಿಂದೆ ಅಂಗವಿಕಲ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ‌. ಆದ್ದರಿಂದ ಅಂಗವಿಕಲರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದಾರೆ. ಅಂಗವಿಕಲರ ಸಮಸ್ಯೆ ಚೆನ್ನಾಗಿ ಗೊತ್ತಿರುವ ಕಾರಣ ಈಗ ಲಾಕ್ ಡೌನ್ ಆದ ಸಮಯದಲ್ಲಿ ಅವರ ಬಳಿಗೆ ಹೋಗಿ ಫುಡ್ ಕಿಟ್ ವಿತರಿಸುತ್ತಿದ್ದಾರೆ.

news18-kannada
Updated:May 14, 2020, 7:16 PM IST
ಅಂಗವಿಕಲರು, ನಿರ್ಗತಿಕರು, ಬಡವರಿಗೆ 5 ಸಾವಿರ ಫುಡ್ ಕಿಟ್ ವಿತರಿಸಿದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ
ಹಾಸನ ಜಿಲ್ಲೆಯಲ್ಲಿ ಬಡವರು, ನಿರ್ಗತಿಕರು ಹಾಗೂ ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಿದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ. ಎಚ್​.ವಿಶ್ವನಾಥ್ ಉಪಸ್ಥಿತರಿದ್ದಾರೆ.
  • Share this:
ಹಾಸನ; ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೇ ಅತಿ ಹೆಚ್ಚು ನೊಂದಿರುವ ಅಂಗವಿಕರು, ನಿರ್ಗತಿಕರು, ಬಡವರಿಗೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರಿಗೆ ಆಹಾರದ ಕಿಟ್ ನೀಡುವ ಮೂಲಕ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಸಹಾಯ ಹಸ್ತ ಚಾಚಿದ್ದಾರೆ. 5 ಸಾವಿರ ಫುಡ್ ಕಿಟ್ ವಿತರಿಸುವ ಮೂಲಕ ಬಡವರ ನೆರವಿಗೆ ಧಾವಿಸಿದ್ದಾರೆ. 

ಹಳ್ಳಿಮೈಸೂರು ಸುತ್ತಮುತ್ತಲ ಗ್ರಾಮಗಳಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಪುಟ್ಟಸ್ವಾಮಿ ಅವರು ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ. ಲಾಕ್​ಡೌನ್ ಆದಾಗಿನಿಂದಲೂ ಬಡವರಿಗೆ ಮತ್ತು ನೊಂದವರಿಗೆ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಪ್ರತಿನಿತ್ಯ ಫುಡ್ ಕಿಟ್ ವಿತರಿಸುತ್ತಿದ್ದು, ಪುಟ್ಟಸ್ವಾಮಿಯವರ ಈ ಕಾರ್ಯಕ್ಕೆ ಹಾಸನ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಬಡವರು, ನಿರ್ಗತಿಕರು, ಶೋಷಿತರ ಪರವಾಗಿ ದುಡಿಯುತ್ತಿರುವ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಈಗ ಲಾಕ್ ಡೌನ್ ಸಮಯದಲ್ಲೂ ಬಡವರ ನೆರವಿಗೆ ಧಾವಿಸಿದ್ದಾರೆ. ಅರಕಲಗೂಡು ತಾಲ್ಲೂಕಿನ ಯಾವುದೇ ಗ್ರಾಮದ ಜನರು ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದರೆ ತಕ್ಷಣವೇ ಸ್ಪಂದಿಸುವ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರ ಈಗಿನ ಕಾರ್ಯಕ್ಕೆ ಎಲ್ಲರೂ ಶ್ಲಾಘಿಸಿದ್ದಾರೆ.

ಮಾಜಿ ಸಚಿವ ಎಚ್.ವಿಶ್ವನಾಥ್, ಹಿರೀಸಾವೆಯ ಸಾಯಿಬಾಬಾ ಮಠದ ಗುರೂಜಿ, ಮತ್ತು ಬೆಂಗಳೂರಿನ ಉದ್ಯಮಿ ಚಿಕ್ಕರೇವಣ್ಣರವರು ಹಳ್ಳಿ ಮೈಸೂರಿನ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಳೆದ ಹಲವು ದಿನಗಳಿಂದಲೂ ಫುಡ್ ಕಿಟ್ ವಿತರಿಸುತ್ತಿರುವ ಪುಟ್ಟಸ್ವಾಮಿಯವರು ಅರಕಲಗೂಡು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿನ ಬಡವರು, ನಿರ್ಗತಿಕರು, ಮತ್ತು ಅಂಗವಿಕಲರಿಗೆ ಸಹಾಯದ ಹಸ್ತ ಚಾಚಿದ್ದಾರೆ.

ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಈ ಹಿಂದೆ ಅಂಗವಿಕಲ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ‌. ಆದ್ದರಿಂದ ಅಂಗವಿಕಲರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದಾರೆ. ಅಂಗವಿಕಲರ ಸಮಸ್ಯೆ ಚೆನ್ನಾಗಿ ಗೊತ್ತಿರುವ ಕಾರಣ ಈಗ ಲಾಕ್ ಡೌನ್ ಆದ ಸಮಯದಲ್ಲಿ ಅವರ ಬಳಿಗೆ ಹೋಗಿ ಫುಡ್ ಕಿಟ್ ವಿತರಿಸುತ್ತಿದ್ದಾರೆ.

ಫುಡ್ ಕಿಟ್ ವಿತರಿಸಿದ ಬಳಿಕ ಮಾತನಾಡಿದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಯವರು ಕೊರೋನಾವೆಂಬ ಮಹಾಮಾರಿ ಜನರನ್ನು ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಅದರಲ್ಲೂ ಸರ್ಕಾರದ ಸೂಚನೆಯಂತೆ ಲಾಕ್‌ಡೌನ್ ಆದ ದಿನದಿಂದಲೂ ಮೇಲಿನ ಎಲ್ಲಾ ಸಮುದಾಯಗಳು ಬಡತನದಿಂದ ನೊಂದು ಹೋಗಿವೆ. ಹೀಗಾಗಿ ಎಲ್ಲಾ ಬಡವರಿಗೆ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದು, ಸಾಮಾಜಿಕ ಅಂತರದೊಂದಿಗೆ ನೊಂದ ಕುಟುಂಬಗಳಿಗೆ ಸ್ವಲ್ಪ ಮಟ್ಟಿನ ಸಹಾಯ ಮಾಡುತ್ತಿದ್ದೇನೆ ಎಂದರು.

ಇದನ್ನು ಓದಿ: ಕೊರೋನಾಮುಕ್ತ ಮೈಸೂರಿಗೆ 2 ಹೆಜ್ಜೆ ಬಾಕಿ: ಇಂದಿನಿಂದ ಲಾಕ್‌ಡೌನ್‌ ಸಡಿಲಿಕೆ, ತಿಂಗಳ ನಂತರ ಬಾಗಿಲು ತೆರೆದ ಅಂಗಡಿಗಳುಮನೆಯಿಂದ ಆಚೆ ಬರುವ ಪ್ರತಿಯೊಬ್ಬರು ಮಾಸ್ಕ್  ಕಡ್ಡಾಯವಾಗಿ ಧರಿಸಬೇಕು. ಸಂಕಷ್ಟದ ದಿನಗಳಲ್ಲಿರುವ ಜನರು ತಮ್ಮ ಆರೋಗ್ಯ ದೃಷ್ಠಿಯಿಂದ ಹೊರಗಿನಿಂದ ತಮ್ಮ ಮನೆಗಳಿಗೆ ಬಂದ ನಂತರ ಶುಭ್ರವಾಗಿ ಕೈಕಾಲು ತೊಳೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
First published: May 14, 2020, 7:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading