HOME » NEWS » Coronavirus-latest-news » RESTRICTIONS CONTINUE IN KASHMIR POLICE BOOK SEVERAL PEOPLE FOR ORGANISING FRIDAY PRAYERS SNVS

ಕಾಶ್ಮೀರದಲ್ಲಿ ಮುಂದುವರಿದ ನಿರ್ಬಂಧ; ಶುಕ್ರವಾರದ ಪ್ರಾರ್ಥನೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು

ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ಶುಕ್ರವಾರ ಪ್ರಾರ್ಥನೆ ಆಯೋಜಿಸಿದ್ದಕ್ಕಾಗಿ ಪೊಲೀಸರು ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

news18
Updated:March 28, 2020, 3:26 PM IST
ಕಾಶ್ಮೀರದಲ್ಲಿ ಮುಂದುವರಿದ ನಿರ್ಬಂಧ; ಶುಕ್ರವಾರದ ಪ್ರಾರ್ಥನೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು
ಕಾಶ್ಮೀರದಲ್ಲಿ ನಿರ್ಬಂಧ
  • News18
  • Last Updated: March 28, 2020, 3:26 PM IST
  • Share this:
ಶ್ರೀನಗರ: ಕಣಿವೆ ನಾಡಿನಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜನರು ಸಾರ್ವಜನಿಕವಾಗಿ ಓಡಾಡದಂತೆ ವಿಧಿಸಿರುವ ನಿರ್ಬಂಧಗಳು ಇವತ್ತು ಶನಿವಾರ ಸತತ ಹತ್ತನೇ ಡಿನವೂ ಮುಂದುವರಿದಿದೆ. ಇದೇ ವೇಳೆ, ನಿನ್ನೆ ಶುಕ್ರವಾರ ಪ್ರಾರ್ಥನೆಯನ್ನು ಆಯೋಜಿಸುವ ಮೂಲಕ ಲಾಕ್‌ಡೌನ್ ಅನ್ನು ಧಿಕ್ಕರಿಸಿದ್ದಕ್ಕಾಗಿ ಪೊಲೀಸರು ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕ್ಯಾಲಿಯಲ್ಲಿನ ಹೆಚ್ಚಿನ ಮಸೀದಿಗಳು ಮತ್ತು ದೇವಾಲಯಗಳು ಮುಚ್ಚಲ್ಪಟ್ಟಿದ್ದವಾದರೂ, ಕೆಲ ಮಸೀದಿಗಳು ಶುಕ್ರವಾರ ಪ್ರಾರ್ಥನೆ ನಡೆಸಿದವು. ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ಶುಕ್ರವಾರ ಪ್ರಾರ್ಥನೆ ಆಯೋಜಿಸಿದ್ದಕ್ಕಾಗಿ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಲ್ಲಿ, ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಹೆಚ್ಚು ಜನ ಸೇರಿದ್ದ ಕಾರಣ ಪೊಲೀಸರು ಹಲವಾರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇದೇ ಕಾರಣಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಶೋಪಿಯಾನ್‌ನ ಪಾಂಡುಶನ್ ಗ್ರಾಮದಲ್ಲಿ ಶುಕ್ರವಾರ ಪ್ರಾರ್ಥನೆ ನಡೆಸಲಾಗಿದ್ದು, ನೂರಾರು ಗ್ರಾಮಸ್ಥರ ಪ್ರಾಣವನ್ನು ಲೆಕ್ಕಿಸದೇ ಜನ ಸೇರಿದ್ದರು. ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಪಾಂಡುಶನ್ ನಿವಾಸಿ ಮೌಲ್ವಿ ಅಬ್ದುಲ್ ಘನಿ ಥೋಕರ್ ಮತ್ತು ಸಭೆಯನ್ನ ಆಯೋಜಿಸಿದ್ದ ಇತರ ನಾಲ್ವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

ಇದನ್ನೂ ಓದಿ: 21 ದಿನದಲ್ಲಿ 21 ಸಂಗತಿ: ಸಂಬಂಧಗಳ ಮಹತ್ವ ಬಗ್ಗೆ ಅಣ್ಣಾಮಲೈ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 21 ದಿನಗಳ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದಾರೆ. ಆದರೆ, ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಆಡಳಿತವು ಮಾರ್ಚ್ 31ರವರೆಗೆ ಇಲ್ಲಿ ಲಾಕ್ ಡೌನ್ ನಡೆಸುತ್ತಿದೆ.

ಆರೋಗ್ಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳನ್ನು ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಅಗತ್ಯ ಸೇವೆಗಳ ನಿರಂತರ ಸರಬರಾಜು ಮತ್ತು ಅಗತ್ಯ ವಸ್ತುಗಳನ್ನು ಮನೆಗೇ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಕಣಿವೆಯಾದ್ಯಂತ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಮತ್ತು ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಲಾಗಿದೆ. ಔಷಧಾಲಯಗಳು ಮತ್ತು ದಿನಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಜಿಮ್ನಾಷಿಯಂಗಳು, ಉದ್ಯಾನವನಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಗೆ ಒಂದು ವಾರ ಮುಂಚೆಯೇ ಮುಚ್ಚಲಾಗಿತ್ತು.ಕಳೆದ ವಾರ ಗುರುವಾರ ಕಣಿವೆಯ ಹಲವು ಭಾಗಗಳಲ್ಲಿ ಈ ನಿರ್ಬಂಧಗಳನ್ನು ಮೊದಲು ವಿಧಿಸಲಾಯಿತು. ನಗರದ ಖಾನ್ಯಾರ್ ಪ್ರದೇಶದ 67 ವರ್ಷದ ಮಹಿಳೆ, ಉಮ್ರಾ ಪ್ರದರ್ಶನದ ನಂತರ ಮಾರ್ಚ್ 16 ರಂದು ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಅವರಲ್ಲಿ ಸೋಂಕು ದೃಢವಾದ ಹಿನ್ನೆಲೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿದೆ. ಕಾಶ್ಮೀರವೊಂದರಲ್ಲೇ 14 ಪ್ರಕರಣಗಳು ವರದಿಯಾಗಿವೆ.

- ಸಂಧ್ಯಾ ಎಂ.

First published: March 28, 2020, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories