Covid Vaccine: ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ, ಆದ್ರೆ ಪಕ್ಕದವನಿಗೆ ಇನ್ನೂ ವ್ಯಾಕ್ಸಿನೇಷನ್ ಆಗಿಲ್ಲ; ಹಾಗಿದ್ರೆ ನಿಮಗೇ ಅಪಾಯ!

ಮುಂಬರುವ ಹೊಸ ರೂಪಾಂತರಿ ತಳಿಗಳ ಸೋಂಕಿಗೆ ತುತ್ತಾಗುವ ಲಸಿಕೆ ಪಡೆಯದವರು ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗುತ್ತಾರೆ ಎಂದು ವರದಿ ಹೇಳದೆ. ಕೊರೋನಾ ನಿರೋಧಕ ಲಸಿಕೆ ಪಡೆಯೆದೇ ಇರುವವರು ಲಸಿಕೆ ಪಡೆದಿರುವವರಿಗೂ ಆಪತ್ತು ತಂದೊಡ್ಡಬಹುದು ಎಂದು ಎಚ್ಚರಿಸಿದ್ದಾರೆ.

ಕೋವಿಡ್ ಲಸಿಕೆ

ಕೋವಿಡ್ ಲಸಿಕೆ

  • Share this:
ಕೋವಿಡ್ ಪ್ರಕರಣಗಳ (Covid Case) ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಚೀನಾ (China) ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ನಿಧಾನಕ್ಕೆ ಲಾಕ್‌ ಡೌನ್ (Lockdown) ಘೋಷಣೆಯಾಗುತ್ತಿದೆ. ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ (Corona) ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಏಪ್ರಿಲ್ 27ರಂದು ಎಲ್ಲಾ ರಾಜ್ಯಗಳ ಸಿಎಂಗಳ (CM) ಜೊತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹತ್ವದ ಚರ್ಚೆ ನಡೆಸಲಿದ್ದಾರೆ. ಬಳಿಕ ದೇಶದಲ್ಲಿ ಮತ್ತಷ್ಟು ಟಫ್ ರೂಲ್ಸ್ (Tough Rules) ಜಾರಿಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ (Karnataka) ನಿನ್ನೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಮತ್ತೆ ಕಡ್ಡಾಯ ಮಾಸ್ಕ್ (Mask) ಹಾಗೂ ಸಾಮಾಜಿಕ ಅಂತರದ ನಿಯಮ (Social Distance) ತಂದಿದ್ದಾರೆ. ಬಹುತೇಕರು 2 ಡೋಸ್ (2 dose) ಕೋವಿಡ್ ಲಸಿಕೆ (Covid Vaccine) ಹಾಕಿಸಿಕೊಂಡಿದ್ದಾರೆ. ಇಷ್ಟಾದರೂ ಅಪಾಯ ತಪ್ಪಿಲ್ಲ ಅಂತಿದೆ ಒಂದು ರಿಪೋರ್ಟ್.

ಲಸಿಕೆ ಪಡೆಯದವರಿಂದ ಲಸಿಕೆ ಪಡೆದವರಿಗೂ ಅಪಾಯ

ಹೌದು ಇಂಥದ್ದೊಂದು ಆತಂಕಕಾರಿ ವರದಿಯನ್ನು ಕೇನಡಾದ ಟೊರೆಂಟೋ ವಿಶ್ವವಿದ್ಯಾಲಯ ನೀಡಿದೆ. ಮುಂಬರುವ ಹೊಸ ರೂಪಾಂತರಿ ತಳಿಗಳ ಸೋಂಕಿಗೆ ತುತ್ತಾಗುವ ಲಸಿಕೆ ಪಡೆಯದವರು ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗುತ್ತಾರೆ ಎಂದು ವರದಿ ಹೇಳದೆ. ಕೊರೋನಾ ನಿರೋಧಕ ಲಸಿಕೆ ಪಡೆಯೆದೇ ಇರುವವರು ಲಸಿಕೆ ಪಡೆದಿರುವವರಿಗೂ ಆಪತ್ತು ತಂದೊಡ್ಡಬಹುದು ಎಂದು ಎಚ್ಚರಿಸಿದ್ದಾರೆ.

ಪ್ರಕಟವಾದ ವರದಿಯಲ್ಲಿ ಹೇಳಿದ್ದೇನು?

ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ​​ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರು ಮಿಶ್ರಣಗೊಂಡಾಗ, ಲಸಿಕೆ ಹಾಕಿದ ಜನರಲ್ಲಿ ಗಣನೀಯ ಸಂಖ್ಯೆಯ ಹೊಸ ಸೋಂಕುಗಳು ಸಂಭವಿಸುತ್ತವೆ, ಪ್ರತಿರಕ್ಷಣೆ ದರಗಳು ಹೆಚ್ಚಿರುವ ಸನ್ನಿವೇಶಗಳಲ್ಲಿಯೂ ಸಹ ಅಪಾಯ ಇದೆ ಅಂತ ತಿಳಿಸಿದೆ.

ಇದನ್ನೂ ಓದಿ: Corona Virus: ಮಾಸ್ಕ್ ಹಾಕದೆ ಹೊರಗೆ ಹೋಗುವಂತಿಲ್ಲ, ರಸ್ತೆಯಲ್ಲಿ ಉಗುಳಿದ್ರೂ ಬೀಳುತ್ತೆ ದಂಡ- ಸರ್ಕಾರದ ಆದೇಶ

ಲಸಿಕೆ ಹಾಕಿದ, ಲಸಿಕೆ ಹಾಕದ ಜನರ ಮೇಲೆ ಅಧ್ಯಯನ

SARS-CoV-2 ನಂತಹ ಸಾಂಕ್ರಾಮಿಕ ಕಾಯಿಲೆಯ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಲಸಿಕೆ ಹಾಕದ ಮತ್ತು ಲಸಿಕೆ ಹಾಕಿದ ಜನರನ್ನು ಅಧ್ಯಯನ ಮಾಡಿ, ಪರಿಣಾಮವನ್ನು ಪರಿಶೋಧಿಸಿದ್ದಾರೆ. ಬೂಸ್ಟರ್ ಡೋಸ್ ಅನ್ನು ಸ್ವೀಕರಿಸದ ಅಥವಾ ಹೊಸ SARS-CoV-2 ರೂಪಾಂತರಗಳೊಂದಿಗೆ ಸೋಂಕನ್ನು ತಡೆಗಟ್ಟಲು ಕಡಿಮೆ ಮಟ್ಟದ ಲಸಿಕೆ ಪರಿಣಾಮಕಾರಿತ್ವವನ್ನು ಅವರು ರೂಪಿಸಿದಾಗಲೂ ಸಹ ಸಂಶೋಧನೆಗಳು ಸ್ಥಿರವಾಗಿರುತ್ತವೆ ಅಂತ ಹೇಳಲಾಗಿದೆ.

ನಾಳೆ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ಕೋವಿಡ್ ಕೇಸ್‌ಗಳ ಏರಿಕೆ ಹಿನ್ನೆಲೆಯಲ್ಲಿ ಏಪ್ರಿಲ್ 27ರಂದು ಅಂದರೆ ನಾಳೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಎಲ್ಲಾ ರಾಜ್ಯಗಳ ಸಿಎಂಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಮೋದಿ ಚರ್ಚಿಸಲಿದ್ದಾರೆ. ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿರುವ ಪ್ರಧಾನಿ, ರಾಜ್ಯಗಳ ಕೋವಿಡ್ ಪ್ರಕರಣಗಳ ಕುರಿತಂತೆ ಮಾಹಿತಿ ಪಡೆಯಲಿದ್ದಾರೆ ಎಂದು ಕೇಂದ್ರ  ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಇದನ್ನೂ ಓದಿ: Modi Meeting: ಮತ್ತೆ ಕೋವಿಡ್ ಕೇಸ್ ಹೈಕ್, ಆಗುತ್ತಾ ದೇಶ 'ಲಾಕ್'? ಏಪ್ರಿಲ್ 27ಕ್ಕೆ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ಮತ್ತೆ ದೇಶದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್

ಕೋವಿಡ್ ಕೇಸ್‌ಗಳು ಕಡಿಮೆ ಆಗುತ್ತಿದ್ದಂತೆ ಜನರು ಮೈಮರೆತಿದ್ದಾರೆ. ರೂಲ್ಸ್‌ಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ಇದ್ದಾರೆ. ಹೀಗಾಗಿ ಮತ್ತೆ ಕೇಸ್ ಜಾಸ್ತಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಬೇಕೋ ಅಥವಾ ಟಫ್ ರೂಲ್ಸ್ ಜಾರಿ ಮಾಡಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಯಿದೆ.
Published by:Annappa Achari
First published: