ನವ ದೆಹಲಿ (ಮೇ 28); ದೇಶದಲ್ಲಿ ಎರಡನೇ ಅಲೆಯ ಕೊರೋನಾ ಸೋಂಕನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಈ ಸೋಂಕು ದಿನದಿಂದ ದಿನ್ಕಕೆ ವಿಷಮವಾಗುತ್ತಲೇ ಇದೆ. ಈ ನಡುವೆ ಜನರಿಗೆ ಸೂಕ್ತ ಔಷಧಗಲೂ ಲಭ್ಯವಾಗುತ್ತಿಲ್ಲ. ಅಲ್ಲದೆ, ಕೋವಿಡ್ ಔಷಧಗಳ ಬೆಲೆಯೂ ಇಳಿಯುತ್ತಿಲ್ಲ. ಇದರಿಂದ ಮಧ್ಯಮ ಮತ್ತು ಬಡ ವರ್ಗದ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಈ ಸಂಬಂಧ ಇಂದು ಧ್ವನಿ ಎತ್ತಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ಕೊರೋನಾ ವಿರುದ್ಧದ ಹೋರಾಟದಲ್ಲಿ ಬಳಸಲಾಗುವ ಎಲ್ಲಾ ಔಷಧಿಗಳು ಮತ್ತು ಸಲಕರಣೆಗಳ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕುಬೇಕು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಂತಹ ವಸ್ತುಗಳ ಮೇಲೆ ತೆರಿಗೆ ವಿಧಿಸುವುದು ಅಮಾನವೀಯ" ಎಂದು ಕಿಡಿಕಾರಿದ್ದಾರೆ.
ಇಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸರ್ಕಾರವು ಕೋವಿಡ್ ಔಷಧಗಳ ಮೇಲಿನ ತೆರಿಗೆಯನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.
Imposing GST on essential medical products like oxygen, ventilators, vaccines and medicines during a pandemic is cruel and insensitive.
In today’s GST Council meet, the government should remove GST from all life saving medicins and equipment that are being used to fight Covid pic.twitter.com/yjPI3K0BUm
— Priyanka Gandhi Vadra (@priyankagandhi) May 28, 2021
"ಕೊರೋನಾ ವಿರುದ್ದ ಹೋರಾಟದಲ್ಲಿ ಬಳಸಲಾಗುವ, ಎಲ್ಲಾ ಜೀವ ಉಳಿಸುವ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರವು ಇಂದು ನಡೆಯುವ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಕಿತ್ತು ಹಾಕಬೇಕು" ಎಂದು ಅವರು ಕೇಂದ್ರ ಸರ್ಕಾರವನ್ನು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. ಕೊರೋನಾ ವೈರಸ್ ವಿರುದ್ಧದ ಹೋರಾಟದ ಸಮಯದಲ್ಲಿ ಸಾಮಾನ್ಯವಾಗಿ ಬಳಸಲಾಗುವ ವಸ್ತುಗಳ ಪಟ್ಟಿಯನ್ನು ಮತ್ತು ಅವುಗಳ ಮೇಲೆ ವಿಧಿಸಲಾಗುವ ಜಿಎಸ್ಟಿ ದರದ ಚಿತ್ರವನ್ನೂ ಪ್ರಿಯಾಂಕ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ.
ಭಾರತದಲ್ಲಿ ಕೊರೋನಾ ಕೇಕೆ:
ದೇಶದಲ್ಲಿ ಒಂದು ದಿನ ಹೆಚ್ಚು ಪ್ರಕರಣಗಳು ಮತ್ತೊಂದು ದಿನ ಕಡಿಮೆ ಕೇಸುಗಳು ಬರುತ್ತಿದ್ದು ಹಾವು ಏಣಿ ಆಟದಂತಾಗಿದೆ. ಇದರಿಂದ ಕೊರೋನಾ ಎರಡನೇ ಅಲೆ ಸಂಪೂರ್ಣವಾಗಿ ಕೆಳಮುಖವಾಗಿ ಸಾಗುತ್ತಿಲ್ಲ ಎಂಬುದು ಖಾತರಿ ಆದಂತಾಗಿದೆ. ಅಲ್ಲದೆ ಎರಡನೇ ಅಲೆ ಮುಗಿಯಲು ಇನ್ನೂ ಒಂದಷ್ಟು ದಿನ ಸಮಯ ಬೇಕಾಗಬಹುದು ಎಂದು ಹೇಳಬಹುದಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನಾ ಎರಡನೇ ಅಲೆ ತಾರಕಕ್ಕೆ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ದೇಶಿಯ ಮತ್ತು ವಿದೇಶಿ ತಜ್ಞರ ಅಭಿಪ್ರಾಯದಂತೆ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಎಂಬ ದಾಖಲೆಯಾಗಿತ್ತು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು.
ಇತ್ತೀಚೆಗಿನ ಈ ಹಾವು ಏಣಿ ಆಟ ನೋಡುವುದಾದರೆ ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಕಂಡುಬಂದಿದ್ದವು. ಇದರಿಂದ ಇಡೀ ದೇಶವನ್ನೇ ಕಾಡಿ ಕಂಗೆಡಿಸಿದ್ದ ಎರಡನೇ ಸುತ್ತಿನ ಕೊರೋನಾ ಅಲೆ ಕೊನೆಯಾಗಲಿದೆ ಎಂಬ ನಿಟ್ಟುಸಿರು ಬಿಡುವಷ್ಟರಲ್ಲಿ, ಮೇ 25ರಿಂದ ಮತ್ತೆ ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು (2,08,921) ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದವು. ಇದಾದ ಬಳಿಕ ಮೇ 26ರಂದು 2,11,298 ಪ್ರಕರಣಗಳು ಗೋಚರಿಸುವ ಮೂಲಕ ಮತ್ತೆ ಕೊರೋನಾ ಸೋಂಕು ಹರಡುವಿಕೆ ಏರುಮುಖವಾಗಿ ಸಾಗುತ್ತಿದೆ ಎಂಬ ಆತಂಕ ಮೂಡಿಸಿತು. ಈಗ ಮೇ 27ರಂದು 1,86,364 ಕೇಸುಗಳು ಕಂಡುಬಂದಿದ್ದು ಇಳಿಮುಖವಾಗಿರುವುದನ್ನು ತೋರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ