Remdesivir: ಕೋವಿಡ್​ ಚಿಕಿತ್ಸೆಯಲ್ಲಿ ರೆಮಿಡಿಸಿವರ್​ ಔಷಧ ಪರಿಣಾಮಕಾರಿಯಲ್ಲ

ಕೆಲವು ದಿನಗಳ ಹಿಂದೆ ಪ್ಲಾಸ್ಲಾ ಥೆರಪಿಯನ್ನು ಕೂಡ ಸೋಂಕಿತರ ಜೀವ ಉಳಿಸಲು ಸಹಕಾರಿಯಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿತ್ತು.

ರೆಮ್​ಡೆಸಿವಿರ್

ರೆಮ್​ಡೆಸಿವಿರ್

  • Share this:
    ನವದೆಹಲಿ (ಮೇ. 19):  ಕೊರೋನಾ ಸೋಂಕಿತರ ರಕ್ಷಣೆಗೆ ಆಂಟಿವೈರಲ್​ ಇಂಜೆಕ್ಷನ್​ ರೆಮಿಡಿಸಿವರ್​ ಬಳಕೆಯನ್ನು ವೈದ್ಯರು ನೀಡುತ್ತಿದ್ದಾರೆ. ಇದೇ ಕಾರಣದಿಂದಲೇ ಈ ರೆಮಿಡಿಸಿವರ್​ ಔಷಧಕ್ಕೂ ಸಾಕಷ್ಟು ಬೇಡಿಕೆ ಹೆಚ್ಚಾಯಿತು. ಕೊರೋನಾ ಸೋಂಕಿತರ ಜೀವ ರಕ್ಷಕವಾಗಿ ಈ ಔಷಧ ಬಳಕೆ ಮಾಡಲಾರಂಭಿಸಲಾಗಿತ್ತು. ಆದರೆ, ಈಗ ಭಾರತೀಯ ವೈದ್ಯಕೀಯ ಮಂಡಳಿ ಈ ರೆಮಿಡಿಸಿವರ್​ ಔಷಧವನ್ನು ಸೋಂಕಿತರ ಚಿಕಿತ್ಸೆಗೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದೆ. ಇದನ್ನು ಶೀಘ್ರವಾಗಿ ಕೋವಿಡ್​ 19 ಚಿಕಿತ್ಸೆಯಿಂದ ಕೈ ಬಿಡಲಾಗುವುದು ಎಂದು ದೆಹಲಿಯ ಗಂಗಾ ರಾಮ್​ ಆಸ್ಪತ್ರೆಯ ಮುಖ್ಯಸ್ಥ ಡಾ ಡಿಎಸ್​ ರಾಣಾ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ರೆಮಿಡಿಸಿವರ್​, ಕೋವಿಡ್​ 19 ಚಿಕಿತ್ಸೆಯಲ್ಲಿ ಕೆಲಸ ಮಾಡುತ್ತಿದೆ ಎಂಬ ಯಾವುದೇ ಪುರಾವೆಗಳಿಲ್ಲ. ಈ ಔಷಧ ಯಾವುದೇ ಕಾರ್ಯ ಮಾಡದ ಹಿನ್ನಲೆ ಇದನ್ನು ನಿಲ್ಲಿಸಲಾಗುತ್ತಿದೆ ಎಂದಿದ್ದಾರೆ.

    ಕೆಲವು ದಿನಗಳ ಹಿಂದೆ ಪ್ಲಾಸ್ಲಾ ಥೆರಪಿಯನ್ನು ಕೂಡ ಸೋಂಕಿತರ ಜೀವ ಉಳಿಸಲು ಸಹಕಾರಿಯಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿತ್ತು. ಸೋಂಕಿನಿಂದ ಗುಣಮುಖರಾದ ವ್ಯಕ್ತಿ ಪ್ಲಾಸ್ಲಾ ದಾನದಿಂದ ಮತ್ತೊಬ್ಬ ಸೋಂಕಿತರನ್ನು ಉಳಿಸಬಹುದು ಎನ್ನಲಾಗಿತ್ತು. ಈ ಥೆರಪಿ ಕೂಡ ಪರಿಣಾಮಕಾರಿ ಕೆಲಸ ಮಾಡುವುದಿಲ್ಲ ಎಂದು ಇದನ್ನು ಕೋವಿಡ್​ 19 ಚಿಕಿತ್ಸೆಯಿಂದ ಸ್ಥಗಿತಗೊಳಿಸಲಾಗಿದೆ, ಅದೇ ರೀತಿ ಈಗ ರೆಮಿಡಿಸಿವರ್​ ಔಷಧಕ್ಕೆ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ಕೇವಲ ಮೂರು ಔಷಧಗಳು ಮಾತ್ರ ಕೋವಿಡ್​ 19 ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.

    ಪ್ಲಾಸ್ಮಾ ಥೆರಪಿಯಲ್ಲಿ ಸೋಂಕಿನಿಂದ ಗುಣಮುಖರಾದವರ ಆಂಟಿಬಾಡಿಗಳನ್ನು ಸೋಂಕಿತರಿಗೆ ನೀಡಲಾಗುತ್ತದೆ. ಆಗ ಅವರು ವೈರಸ್​ ವಿರುದ್ಧ ಹೋರಾಡುತ್ತವೆ. ವೈರಸ್​ ದಾಳಿ ಮಾಡಿದಾಗ ದೇಹದಲ್ಲಿ ಸಾಮಾನ್ಯವಾಗಿ ಆಂಟಿಬಾಡಿಗಳು ರೂಪುಗೊಳ್ಳುತ್ತವೆ. ಪ್ಲಾಸ್ಮಾ ನೀಡುವುದರಿಂದ ಸೋಂಕಿತರ ದೇಹದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಮೊದಲು ಪ್ಲಾಸ್ಮಾ ಥೆರಪಿಯನ್ನು ವೈಜ್ಞಾನಿಕ ಆಧಾರದ ಮೇಲೆ ಪ್ರಾರಂಭಿಸಲಾಯಿತು. ಆದರೆ ಇದು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಯಾಗಿಲ್ಲ ಎಂಬ ಬಗ್ಗೆ ಸಾಕ್ಷ್ಯಾಧರದ ಮೇಲೆ ಇದನ್ನು ನಿಲ್ಲಿಸಲಾಗಿದೆ.
    Published by:Seema R
    First published: