ಕೊರೋನಾ ನಿಗ್ರಹಕ್ಕೆ ರಿಲಾಯನ್ಸ್ ಸಮಗ್ರ ಯೋಜನೆ; #CoronaHaaregaIndiaJeetega

ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಮೂಲಕ ದೇಶದ ವಿವಿಧ ನಗರಗಳಲ್ಲಿ ಅಲ್ಲಿಯ ಎನ್​ಜಿಒಗಳ ಸಹಾಯದಿಂದ ಉಚಿತ ಆಹಾರ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • News18
 • Last Updated :
 • Share this:
  ಮುಂಬೈ(ಮಾ. 23): ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ರಿಲಾಯನ್ಸ್ (ಆರ್​ಐಎಲ್) ಸಂಸ್ಥೆಯೂ ತನ್ನದೇ ಸಾಮರ್ಥ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ವಿವಿಧ ಸ್ತರಗಳಲ್ಲಿ ವಿವಿಧ ರೀತಿಯಲ್ಲಿ ಕೊರೋನಾ ವೈರಸ್ ನಿಗ್ರಹಕ್ಕೆ ಯೋಜನೆಗಳನ್ನ ಹಮ್ಮಿಕೊಂಡಿದೆ. ಅದರ ಹಲವು ಯೋಜನೆಗಳು ಅನುಷ್ಠಾನದಲ್ಲೇ ಇವೆ. ಹಾಗೆಯೇ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ಆರಂಭಿಕ ಸಹಾಯ ನೀಡಿದೆ. ಇದೇ ವೇಳೆ, ಜಿಯೋದಿಂದ #CoronaHaaregaIndiaJeetega ಅಭಿಯಾನ ಕೂಡ ಪ್ರಾರಂಭಿಸಿದೆ.

  ರಿಲಾಯನ್ಸ್ ಇಂಡಸ್ಟ್ರೀಸ್, ರಿಲಾಯನ್ಸ್ ಫೌಂಡೇಶನ್, ರಿಲಾಯನ್ಸ್ ರೀಟೇಲ್, ಜಿಯೋ, ರಿಲಾಯನ್ಸ್ ಲೈಫ್ ಸೈನ್ಸಸ್ ಈ ಎಲ್ಲಾ ಸಂಸ್ಥೆಗಳು ಹಾಗೂ ಇದರಲ್ಲಿರುವ 6 ಲಕ್ಷದಷ್ಟು ಸಿಬ್ಬಂದಿಯ ಸೇವೆಯನ್ನ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ.

  ವೈದ್ಯಕೀಯ ಸೇವೆ:

  ಮುಂಬೈನಲ್ಲಿರುವ ರಿಲಾಯನ್ಸ್ ಒಡೆತನದ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದೆ. ಇದರಲ್ಲಿ 100 ಬೆಡ್​ಗಳಿವೆ. ಎರಡೇ ವಾರದಲ್ಲಿ ಈ ಕಾರ್ಯ ಮಾಡಲಾಗಿದೆ. ಇಂಥದ್ದೊಂದು ಸರ್ವಸಜ್ಜಿತ ಚಿಕಿತ್ಸಾ ಕೇಂದ್ರ ಭಾರತದಲ್ಲೇ ಮೊದಲಾಗಿದೆ. ಇಲ್ಲಿ ನೆಗಟಿವ್ ಪ್ರೆಷರ್ ರೂಮ್​ನ ವ್ಯವಸ್ಥೆ ಕೂಡ ಇದೆ. ಇಲ್ಲಿಂದ ಕೊರೊನಾ ವೈರಾಣು ಬೇರೆಯವರೆಗೆ ಹರಡದಂತೆ ಈ ನೆಗಟಿವ್ ಪ್ರೆಷರ್ ರೂಮ್ ಕೆಲಸ ಮಾಡುತ್ತದೆ. ಇದನ್ನೂ ಸೇರಿದಂತೆ ಅನೇಕ ಅಗತ್ಯ ಸೌಕರ್ಯಗಳು ಈ ಆಸ್ಪತ್ರೆಯಲ್ಲಿ ಇವೆ. ಮುಂಬೈ ಪಾಲಿಕೆಯ ಸಹಯೋಗದಲ್ಲಿ ರಿಲಾಯನ್ಸ್ ಈ ಕಾರ್ಯ ಮಾಡುತ್ತಿದೆ.

  ಇದನ್ನೂ ಓದಿ: ಭಾರತದಲ್ಲಿ ಮುಂದುವರೆದ ಕೊರೋನಾ ಮರಣಮೃದಂಗ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಲಿ; ಸಾವಿನ ಸಂಖ್ಯೆ 9ಕ್ಕೇರಿಕೆ

  ರಿಲಾಯನ್ಸ್ ಒಡೆತನದ ಆಸ್ಪತ್ರೆಯಲ್ಲಿ ನಿರ್ದಿಷ್ಟ ದೇಶಗಳಿಂದ ಬಂದಿರುವ ಕೊರೋನಾ ಸೋಂಕಿನ ಶಂಕಿತರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಇದೆ. ಹಾಗೆಯೇ, ಐಸೋಲೇಶನ್ ವ್ಯವಸ್ಥೆ ಹಾಗೂ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆಯನ್ನೂ ಹೆಚ್.ಎನ್. ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ. ಮುಂಬೈನ ಲೋಧಿವಲಿಯಲ್ಲೂ ಪೂರ್ಣ ಸಜ್ಜಿತ ಐಸೋಲೇಶನ್ ಕೇಂದ್ರ ಸ್ಥಾಪಿಸಿ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.

  ರಿಲಾಯನ್ಸ್ ಲೈಫ್ ಸೈನ್ಸಸ್ ಸಂಸ್ಥೆಯು ವಿದೇಶಗಳಿಂದ ಕೊರೋನಾ ಪರೀಕ್ಷಾ ಕಿಟ್​ಗಳನ್ನ ಆಮದು ಮಾಡಿಕೊಳ್ಳುತ್ತಿದೆ. ಈ ಸಂಸ್ಥೆಯಲ್ಲಿರುವ ವೈದ್ಯರು ಮತ್ತು ಸಂಶೋಧಕರು ಕೊರೋನಾಗೆ ಮದ್ದು ಕಂಡುಹಿಡಿಯಲು ತಮ್ಮದೇ ಪ್ರಯತ್ನ ಹಾಕಿದ್ದಾರೆ.

  ರಿಲಾಯನ್ಸ್ ಸಂಸ್ಥೆಯ ವಿವಿಧ ಘಟಕಗಳನ್ನ ಉಪಯೋಗಿಸಿಕೊಂಡು ದಿನಕ್ಕೆ ಒಂದು ಲಕ್ಷ ಫೇಸ್ ಮಾಸ್ಕ್​ಗಳನ್ನ ತಯಾರಿಸುವ ಪ್ರಯತ್ನ ಆಗುತ್ತಿದೆ. ವೈದ್ಯರಿಗೆ ರಕ್ಷಣೆಯಾಗಿ ವಿಶೇಷ ಉಡುಪನ್ನೂ ತಯಾರಿಸಲಾಗುತ್ತಿದೆ.

  ಇದನ್ನೂ ಓದಿ: ಅತ್ತ ಅಪ್ಪನಿಂದ ಮನೆಯಲ್ಲೇ ಇರಿ ಎಂಬ ಆದೇಶ, ಇತ್ತ ಮಗಳಿಂದ ನೂರಾರು ಮಂದಿಗೆ ಪಾರ್ಟಿ: ಕೆಸಿಆರ್​ ಮಗಳ ವಿರುದ್ಧ ಆಕ್ರೋಶ

  ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಮೂಲಕ ದೇಶದ ವಿವಿಧ ನಗರಗಳಲ್ಲಿ ಅಲ್ಲಿಯ ಎನ್​ಜಿಒಗಳ ಸಹಾಯದಿಂದ ಉಚಿತ ಆಹಾರ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

  ಇನ್ನು, ಹೊರಗೆಲ್ಲೂ ಓಡಾಡದ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಕೆಲ ಅಗತ್ಯ ವೈದ್ಯಕೀಯ ವ್ಯವಸ್ಥೆಗೆ ರಿಲಾಯನ್ಸ್ ಒಂದಷ್ಟು ಸೌಲಭ್ಯ ಕಲ್ಪಿಸುತ್ತಿದೆ. ಕೊರೋನಾ ಸೋಂಕು ತಗುಲಿದೆಯಾ ಎಂಬುದನ್ನು ಮನೆಯಲ್ಲೇ ಪರೀಕ್ಷಿಸಬಹುದಾದ ಸಿಂಪ್ಟನ್ ಚೆಕರ್ ಅನ್ನು ರಿಲಾಯನ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಯಂತ್ರವು ಕೊರೋನಾ ರೋಗ ಲಕ್ಷಣಗಳು ತಮ್ಮಲ್ಲಿವೆಯಾ ಎಂಬುದನ್ನು ಪತ್ತೆ ಮಾಡಬಲ್ಲುದು.

  ಕೊರೋನಾ ವೈರಸ್​ಗೆ ಸಂಬಂಧಪಟ್ಟ ಮಾಹಿತಿ ಮತ್ತು ಸಹಾಯ ಮಾಡಲು ಸಾರ್ವಜನಿಕರಿಗಾಗಿ ಕೇಂದ್ರ ಸರ್ಕಾರ ವಾಟ್ಸಾಪ್ ಚಾಟ್​ಬೋಟ್ ವ್ಯವಸ್ಥೆ ಮಾಡಿದೆ. ಮೈಕ್ರೋಸಾಫ್ಟ್ ತಂತ್ರಜ್ಞಾನದ ಸಹಯೋಗದಲ್ಲಿ ಇದನ್ನು ಸರ್ಕಾರಕ್ಕೆ ಮಾಡಿಕೊಟ್ಟಿದ್ದು ರಿಲಾಯನ್ಸ್ ಸಂಸ್ಥೆಯೇ.

  First published: