ಕೊರೋನಾ ಪೀಡಿತರಿಗಾಗಿ ದೊಡ್ಡ ಆಸ್ಪತ್ರೆ ಮೀಸಲಿರಿಸಿದ ಮುಖೇಶ್​​ ಅಂಬಾನಿ ಮಾಲೀಕತ್ವದ ರಿಲಿಯನ್ಸ್​ ಕಂಪನಿ

ಕೊರೋನಾ ತಡೆಗೆ ದಿನಕ್ಕೆ 1 ಲಕ್ಷ ಫೇಸ್​​ ಮಾಸ್ಕ್​​ ತಯಾರಿ ಮಾಡುತ್ತಿದೆ. ಈ ಮಾರಕ ರೋಗದ ವಿರುದ್ಧ ಹೋರಾಟಕ್ಕೆ ಬೇಕಾದ ಎಲ್ಲಾ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಉದ್ಯೋಗಿಗಳಿಗೂ ಸೂಚನೆ ನೀಡಲಾಗಿದೆ.

news18-kannada
Updated:March 23, 2020, 8:59 PM IST
ಕೊರೋನಾ ಪೀಡಿತರಿಗಾಗಿ ದೊಡ್ಡ ಆಸ್ಪತ್ರೆ ಮೀಸಲಿರಿಸಿದ ಮುಖೇಶ್​​ ಅಂಬಾನಿ ಮಾಲೀಕತ್ವದ ರಿಲಿಯನ್ಸ್​ ಕಂಪನಿ
ಮುಖೇಶ್​ ಅಂಬಾನಿ
  • Share this:
ನವದೆಹಲಿ(ಮಾ.23): ಭಾರತದ ಶ್ರೀಮಂತ ಉದ್ಯಮಿ ಮುಖೇಶ್​​ ಅಂಬಾನಿ ಮಾಲೀಕತ್ವದ ರಿಲಿಯನ್ಸ್​​ ಇಂಡಸ್ಟ್ರೀಸ್​​​ ಲಿಮಿಟೆಡ್​​ ಕಂಪನಿ ತನ್ನ ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತ್ಯೇಕ ಆಸ್ಪತ್ರೆಯೊಂದನ್ನೇ ಕೊರೋನಾ ಪರೀಕ್ಷಾ ಕೇಂದ್ರಕ್ಕಾಗಿ ಮೀಸಲಿರಿಸಿದೆ. ದೇಶದಲ್ಲಿ ಕೊರೋನಾ ವೈರಸ್​​​ ಹೆಚ್ಚಾಗುತ್ತಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗೆಯೇ ಒಂದು ವೇಳೆ ಮನೆಯಿಂದ ಕೆಲಸ ಮಾಡುವ ಅವಕಾಶ ಇಲ್ಲದೇ ಹೋದಲ್ಲಿ ಉದ್ಯೋಗಿಗಳಿಗೆ ರಜೆ ಘೋಷಿಸಿ ತಿಂಗಳ ಸಂಬಳವನ್ನು ನೀಡುತ್ತಿದೆ. ಕಂಪನಿಗಾಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ಪೆಟ್ರೋಲ್​​ ಭತ್ಯೆಯೊಂದಿಗೆ ಉಚಿತ ಆಹಾರವನ್ನು ವ್ಯವಸ್ಥೆ ಮಾಡಲಾಗಿದೆ.


ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವಿರುದ್ಧ ಹೋರಾಡಲು ಕಂಪನಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕಾಗಿ ರಿಲಿಯನ್ಸ್​ ಕಂಪನಿಗೆ ಸೇರಿದ ಮುಂಬೈನ ದೊಡ್ಡ ಆಸ್ಪತ್ರೆಯನ್ನೇ ಕೋವಿಡ್​​​-19 ಪರೀಕ್ಷಾ ಕೇಂದ್ರವನ್ನಾಗಿ ಪರಿವರ್ತಿಸಿದೆ.ಮುಂಬೈನ ಈ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನೂರು ಬೆಡ್​​ಗಳನ್ನು ಸೆಟಪ್​​ ಮಾಡಲಾಗಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆ ಮೀಸಲಿರಿಸಲಾಗಿದೆ. ಭಾರತದಲ್ಲೇ ಇಂತಹದ್ದೊಂದು ಆಸ್ಪತ್ರೆಯನ್ನು ರಿಲಿಯನ್ಸ್​ ಕಂಪನಿ ತನ್ನ ಉದ್ಯೋಗಿಗಳಿಗಾಗಿಯೇ ಕಟ್ಟಿಸಿದೆ.

ಬೆಡ್​​ ಜತೆಗೆ ಕೊರೋನಾ ಪರೀಕ್ಷಾ ಕೇಂದ್ರಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ವ್ಯವಸ್ಥೆ ಮಾಡಲಾಗಿದೆ. ಬಯೋಮೆಡಿಕಲ್​​​ ಎಕ್ವಿಪ್​ಮೆಂಟ್ಸ್​, ವೆಂಟಿಲೇಟರ್ಸ್​, ಪೇಸ್​​ ಮೇಕರ್ಸ್​, ಡಯಾಲಿಸಿಸ್​​ ಮಿಷನ್​​, ಪೇಷಂಟ್​​ ಮಾನಿಟರಿಂಗ್​ ಡಿವೈಸಸ್​​ ಕೂಡ ವ್ಯವಸ್ಥೆ ಮಾಡಲಾಗಿದೆ.ಕೊರೋನಾ ತಡೆಗೆ ದಿನಕ್ಕೆ 1 ಲಕ್ಷ ಫೇಸ್​​ ಮಾಸ್ಕ್​​ ತಯಾರಿ ಮಾಡುತ್ತಿದೆ. ಈ ಮಾರಕ ರೋಗದ ವಿರುದ್ಧ ಹೋರಾಟಕ್ಕೆ ಬೇಕಾದ ಎಲ್ಲಾ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಉದ್ಯೋಗಿಗಳಿಗೂ ಸೂಚನೆ ನೀಡಲಾಗಿದೆ. 
First published: March 23, 2020, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading