HOME » NEWS » Coronavirus-latest-news » RELIANCE FOUNDATION PROVIDE 3 CRORE MEALS ACROSS INDIA IN ITS MISSION ANNA SEVA PROGRAMME SNVS

Reliance Foundation - ವಿಶ್ವದಾಖಲೆಯ ಮಿಷನ್ ಅನ್ನ ಸೇವಾ: 3 ಕೋಟಿ ಮಂದಿಗೆ ಆಹಾರ ವಿತರಣೆ

ಮಿಷನ್ ಅನ್ನ ಸೇವಾ ಯೋಜನೆ ಅಡಿಯಲ್ಲಿ ಅಡುಗೆ ಮಾಡಿದ ಆಹಾರ, ತಿನ್ನಲು ಸಿದ್ಧವಿರುವ ಫೂಡ್ ಪ್ಯಾಕೆಟ್​ಗಳು, ಇಡೀ ಕುಟುಂಬಕ್ಕೆ ಆಗುವ ದಿನಸಿ ಪದಾರ್ಥಗಳ ಕಿಟ್, ಸಾಮುದಾಯಿಕ ಅಡುಗೆಮನೆಗಳಿಗೆ ದೊಡ್ಡ ಪ್ರಮಾಣದ ದಿನಸಿ ಪದಾರ್ಥಗಳನ್ನ ವಿತರಿಸಲಾಗುತ್ತಿದೆ.

news18
Updated:April 20, 2020, 1:10 PM IST
Reliance Foundation - ವಿಶ್ವದಾಖಲೆಯ ಮಿಷನ್ ಅನ್ನ ಸೇವಾ: 3 ಕೋಟಿ ಮಂದಿಗೆ ಆಹಾರ ವಿತರಣೆ
ನೀತಾ ಅಂಬಾನಿ
  • News18
  • Last Updated: April 20, 2020, 1:10 PM IST
  • Share this:
ಮುಂಬೈ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ಸ್ತರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಇದೀಗ ತನ್ನ ಮಿಷನ್ ಅನ್ನ ಸೇವಾ ಯೋಜನೆಯನ್ನು ಹೊಸ ಸ್ತರಕ್ಕೆ ತೆಗೆದುಕೊಂಡು ಹೋಗಿದೆ. ಭಾರತದಾದ್ಯಂತ 3 ಕೋಟಿ ಮಂದಿಗೆ ಅನ್ನಾಹಾರ ವಿತರಣೆ ಮಾಡುತ್ತಿದೆ. ಒಂದು ಕಾರ್ಪೊರೇಟ್ ಸಂಸ್ಥೆ ಇಷ್ಟೊಂದು ಪ್ರಮಾಣದಲ್ಲಿ ಅನ್ನದಾನ ಮಾಡುತ್ತಿರುವುದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ.

ಕೊರೋನಾ ವೈರಸ್ ಸೋಂಕು ತಡೆಯಲು ದೇಶವ್ಯಾಪಿ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಹಣವಿಲ್ಲದೆ ಸಂಕಷ್ಟದಲ್ಲಿರುವ ಕೋಟ್ಯಂತರ ಬಡವರು ಮತ್ತು ಕಾರ್ಮಿಕರಿಗೆ ಈ ಅನ್ನಾಹಾರವನ್ನು ವಿತರಿಸಲಾಗುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್) ಸಂಸ್ಥೆಯ ಸಾಮಾಜಿಕ ಸೇವೆಯ ಅಂಗವಾಗಿರುವ ರಿಲಾಯನ್ಸ್ ಫೌಂಡೇಶನ್ ಈ ಕೈಂಕರ್ಯ ನಡೆಸಿದೆ. ಈಗಾಗಲೇ 16 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 68 ಜಿಲ್ಲೆಗಳಲ್ಲಿ 2 ಕೋಟಿ ಆಹಾರವನ್ನು ವಿತರಿಸಲಾಗಿದೆ.

ಮಿಷನ್ ಅನ್ನ ಸೇವಾ ಯೋಜನೆ ಅಡಿಯಲ್ಲಿ ಅಡುಗೆ ಮಾಡಿದ ಆಹಾರ, ತಿನ್ನಲು ಸಿದ್ಧವಿರುವ ಫೂಡ್ ಪ್ಯಾಕೆಟ್​ಗಳು, ಇಡೀ ಕುಟುಂಬಕ್ಕೆ ಆಗುವ ದಿನಸಿ ಪದಾರ್ಥಗಳ ಕಿಟ್, ಸಾಮುದಾಯಿಕ ಅಡುಗೆಮನೆಗಳಿಗೆ ದೊಡ್ಡ ಪ್ರಮಾಣದ ದಿನಸಿ ಪದಾರ್ಥಗಳನ್ನ ವಿತರಿಸಲಾಗುತ್ತಿದೆ.

ಇದನ್ನೂ ಓದಿ: ಕೊರೋನಾ ನಿಗ್ರಹಕ್ಕೆ ರಿಲಾಯನ್ಸ್ ಸಮಗ್ರ ಯೋಜನೆ; #CoronaHaaregaIndiaJeetega

ರಿಲಾಯನ್ಸ್ ಫೌಂಡೇಶನ್​ನ ಸಂಸ್ಥಾಪಕಿ ನೀತಾ ಅಂಬಾನಿ ಅವರು ಮಾತನಾಡಿ, ಈ ಸಂಕಷ್ಟ ಕಾಲದಲ್ಲಿ ತೊಂದರೆಯಲ್ಲಿರುವ ಬಡಜನರಿಗೆ ನೆರವು ಒದಗಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಅನ್ನದಾನ ಮಹಾದಾನ ಎಂದು ಪರಿಗಣಿಸಿರುವುದು ನಮ್ಮ ಸಂಸ್ಕೃತಿ. ಅನ್ನವೇ ಬ್ರಹ್ಮ ಎಂದು ಉಪನಷಿದ್​ಗಳು ಹೇಳುತ್ತವೆ. ಅದರಂತೆ ನಮ್ಮ ಭಾರತ ಪರಿವಾರದವರೇ ಆದ ದಿನಗೂಲಿ ಕಾರ್ಮಿಕರಿಗೆ ನಾವು ಮಿಡಿಯಬೇಕಾದ್ದು ನಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮಿಷನ್ ಅನ್ನಸೇವಾ ಯೋಜನೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಈ ಕೋವಿಡ್-19 ಬಿಕ್ಕಟ್ಟಿನಲ್ಲಿ ಹಲವು ರೀತಿಯಲ್ಲಿ ನೆರವಿನ ಕಾರ್ಯಕ್ಕೆ ಕೈಜೋಡಿಸಿದೆ. ಮುಂಬೈನಲ್ಲಿ ಎರಡೇ ವಾರದಲ್ಲಿ 10 ಬೆಡ್​ಗಳ ಕೋವಿಡ್ ಆಸ್ಪತ್ರೆ ನಿರ್ಮಿಸಲಾಗಿತ್ತು. ಅದು ರಾಷ್ಟ್ರೀಯ ದಾಖಲೆಯಾಗಿತ್ತು. ಈಗ ಅದನ್ನು 250 ಬೆಡ್​ಗಳ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ. ಹಾಗೆಯೆ, ಆರೋಗ್ಯ ಕಾರ್ಯಕರ್ತರಿಗೆ ಒಂದು ಲಕ್ಷ ಮಾಸ್ಕ್ ಮತ್ತು ಒಂದು ಸಾವಿರ ಸುರಕ್ಷತಾ ಸಾಧನಗಳನ್ನ (ಪಿಪಿಇ) ವಿತರಿಸಲಾಗಿದೆ.

ಪಿಎಂ ಕೇರ್ಸ್ ನಿಧಿ ಸೇರಿದಂತೆ ವಿವಿಧ ಪರಿಹಾರ ನಿಧಿಗಳಿಗೆ ರಿಲಾಯನ್ಸ್ ಫೌಂಡೇಶನ್ 535 ಕೋಟಿ ರೂ ನೀಡಿದೆ. ತುರ್ತು ವಾಹನಗಳಿಗೆ ದೇಶಾದ್ಯಂತ ಉಚಿತವಾಗಿ ಇಂಧನ ಒದಗಿಸುತ್ತಿದೆ. 200 ನಗರ ಮತ್ತು ಪಟ್ಟಣಗಳಲ್ಲಿ ಕೋಟ್ಯಂತರ ಜನರಿಗೆ ದಿನಸಿ ಲಭ್ಯತೆ ನೀಡಲಾಗಿದೆ.
Youtube Video
First published: April 20, 2020, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories