Jeeta Rahe India: ಕೊರೋನಾ ವಿರುದ್ಧದ ಹೋರಾಟದಲ್ಲಿ ರಿಲಿಯನ್ಸ್​ ಟೀಮ್​​​; ಗೆಲುವು ನಮ್ಮದೇ ಎಂದ ನೀತಾ ಅಂಬಾನಿ

ಈ ವಿಶೇಷ ಆಸ್ಪತ್ರೆಯಲ್ಲಿ ಒಟ್ಟು 200 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯವೂ ಇದೆ. ಇದರೊಂದಿಗೆ ರಿಲಯನ್ಸ್ ಅಗತ್ಯವಿರುವ ಮಾಸ್ಕ್​​ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ಈ ಸಂಸ್ಥೆ ಮಾಡುತ್ತಿದೆ.

ಮುಖೇಶ್​ ಅಂಬಾನಿ ದಂಪತಿ

ಮುಖೇಶ್​ ಅಂಬಾನಿ ದಂಪತಿ

 • Share this:
  ಬೆಂಗಳೂರು(ಮೇ.17): ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​​ ಆರ್ಭಟ ಭಾರತದಲ್ಲಿ ಮುಂದುವರಿದಿದೆ. ಇದರ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇರಿದಂತೆ ಇಡೀ ದೇಶವೇ ಸಜ್ಜಾಗಿದೆ. ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರು ಹಗಲು ರಾತ್ರಿಯೆನ್ನದೇ ಕೊರೋನಾ ವೈರಸ್​​ ತಡೆಗೆ ಹೋರಾಡುತ್ತಿದ್ದಾರೆ. ಹೀಗಿರುವಾಗ ಕೋವಿಡ್​​​-19 ನಿಯಂತ್ರಣಕ್ಕೆ ತರಲು ಉದ್ಯಮಿಗಳು, ಸಿನಿಮಾ ನಟರು ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ಅದರಂತೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್​​ ಅಂಬಾನಿ ಮಾಲೀಕತ್ವದ ರಿಲಿಯನ್ಸ್​​ ಇಂಡಸ್ಟ್ರೀಸ್​​​ ಲಿಮಿಟೆಡ್​​ ಕಂಪನಿ ಕೂಡ ಪ್ರಧಾನಮಂತ್ರಿ ಪರಿಹಾರ ನಿಧಿಗೆ 500 ಕೋಟಿ ರೂಪಾಯಿ ದೇಣಿಗೆ ನೀಡಿತ್ತು.

  ಜತೆಗೆ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಮುಖೇಶ್ ಅಂಬಾನಿ ಐದು ಕೋಟಿ ರೂ. ಸಹಾಯ ಧನ ನೀಡಿದ್ದರು. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯ ನೆರವಿನೊಂದಿಗೆ ಹೆಚ್.ಎನ್​​ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ನಿರ್ಮಿಸಿದರು. ಮುಂಬೈನ ಸವೆನ್ ಹಿಲ್ಸ್ ಏರಿಯಾದಲ್ಲಿ ಕೇವಲ ಎರಡು ವಾರದ ಸಮಯದಲ್ಲೇ ಆಸ್ಪತ್ರೆಯೊಂದನ್ನು ನಿರ್ಮಿಸುವ ಮೂಲಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದರು.  ಈ ವಿಶೇಷ ಆಸ್ಪತ್ರೆಯಲ್ಲಿ ಒಟ್ಟು 200 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯವೂ ಇದೆ. ಇದರೊಂದಿಗೆ ರಿಲಯನ್ಸ್ ಅಗತ್ಯವಿರುವ ಮಾಸ್ಕ್​​ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ಈ ಸಂಸ್ಥೆ ಮಾಡುತ್ತಿದೆ.

  ಇದನ್ನೂ ಓದಿ: ಕೋವಿಡ್-19 ನಿಯಂತ್ರಣ: ಸರ್ಕಾರದ ನಡೆಗೆ ಕೊರೋನಾ ವಾರಿಯರ್ಸ್​, ಸಾರ್ವಜನಿಕರಿಂದ ಶ್ಲಾಘನೆ

  ಇದರ ನಡುವೇ ಕೊರೋನಾ ವಾರಿಯರ್ಸ್​​ ಮತ್ತು ರಿಲಿಯನ್ಸ್​ ಸಂಸ್ಥೆ ಸೇರಿ ಕೊರೋನಾ ತಡೆಗೆ ಮಾಡುತ್ತಿರುವ ಕೆಲಸಗಳ ಬಗ್ಗೆ ಸಂಸ್ಥೆ ಸಣ್ಣ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಕರ್​​ ದೇ ಮೇರೆ ಹವಾಲೇ... ಹೈ ತೇರೆ ದರ್ದ್​​ ಯೇ ಸಾರೇ ಎಂಬ ಹಾಡು ಇದಾಗಿದೆ. ಹಾಡಿನ ಕೊನೆಯಲ್ಲಿ ರಿಲಿಯನ್ಸ್​ ಫೌಂಡೇಶನ್​​ ಚೇರ್​​​ ಪರ್ಸನ್​​​​​, ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲುವು ನಮ್ಮದೇ. ನಾವೆಲ್ಲಾ ಒಗ್ಗಟ್ಟಿನಿಂದ ಕೊರೋನಾ ಹಿಮ್ಮೆಟ್ಟಿಸುವ ಎಂದು ಕರೆ ನೀಡಿದ್ದಾರೆ.


  ಇನ್ನು, ಕೊರೋನಾ ವೈರಸ್​​ ಬಿಕ್ಕಟ್ಟಿನಿಂದ ದೇಶ ಹೊರಬರಲು ಬೇಕಾದ ಕಾರ್ಯವನ್ನು ರಿಲಿಯನ್ಸ್​ ಸಂಸ್ಥೆ ಮಾಡುತ್ತಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಇಡೀ ಕುಟುಂಬ ರಾಷ್ಟ್ರದೊಂದಿಗೆ ನಿಂತಿದೆ. ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಗೆಲವಿಗಾಗಿ ಮಾಡಬೇಕಾದ ಎಲ್ಲ ಕೆಲಸ ಮಾಡುತ್ತಿದೆ.
  First published: