Reliance: ಕೋವಿಡ್​ ವಿರುದ್ಧ ಮಕ್ಕಳ, ವಯಸ್ಕರ ರಕ್ಷಣೆಗೆ ಸುಸಜ್ಜಿತ ಆರೋಗ್ಯ​ ಘಟಕ ಸ್ಥಾಪಿಸಿದ ರಿಲಯನ್ಸ್​ ಫೌಂಡೇಶನ್​

ಐಸಿಯು ಬೆಡ್​ಗಳು ವಯಸ್ಕರು ಮತ್ತು ಮಕ್ಕಳ ವೆಂಟಿಲೇಟರ್​ ಮಾನಿಟರ್​ ಸೌಲಭ್ಯವನ್ನು ಹೊಂದಿದ್ದು, ಡಯಾಲಿಸಿಸ್​ ಮತ್ತು ಆಕ್ಸಿಜನ್​ ಪೂರೈಕೆ ಸೌಲಭ್ಯವನ್ನು ಹೊಂದಿದೆ.

 ಕ್ರಿಟಿಕಲ್​ ಕೇರ್​ ಘಟಕ

ಕ್ರಿಟಿಕಲ್​ ಕೇರ್​ ಘಟಕ

  • Share this:
    ಮುಂಬೈ  (ಮೇ. 21):  ಕೊರೋನಾ ವೈರಸ್​ ಎರಡನೇ ಅಲೆ ತೀವ್ರ ಸ್ವರೂಪ ಪಡೆದಿರುವಾಗಲೇ ಮೂರನೇ ಅಲೆಯಲ್ಲಿ ವೈರಸ್​ ಮಕ್ಕಳಿಗೂ ಕಾಡಬಹುದು ಎಂಬ ಆಘಾತಕಾರಿ ಅಂಶವನ್ನು ವೈದ್ಯರು ಎಚ್ಚರಿಸಿದ್ದಾರೆ. ಈ ಹಿನ್ನಲೆ ಭವಿಷ್ಯದಲ್ಲಿ ಮಕ್ಕಳಿಗೆ ಕಾಡಬಹುದಾದ ಸೋಂಕಿ ಹಿನ್ನಲೆ ಈಗಿನಿಂದಲೇ ಮುಂಜಾಗ್ರತೆವಹಿಸುವುದು ಅಗತ್ಯವಾಗಿದೆ. ಇದೇ ಕಾರಣದಿಂದ ರಿಲಯನ್ಸ್​ ಫೌಂಡೇಶನ್​ ಸಿದ್ಧತೆ ನಡೆಸಿದೆ. ಈಗಾಗಲೇ ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ತತ್ತರಿಸಿದ್ದ ಮುಂಬೈ ಜನರ ಸಹಾಯಕ್ಕೆ ನಿಂತ ಸರ್​ ಎಚ್​ ಎನ್​ ರಿಲಯನ್ಸ್​ ಫೌಂಡೇಶನ್​ ಆಸ್ಪತ್ರೆ ಮುಂದಿನ ಅಲೆ ಎದುರಿಸಲು ಸಿದ್ಧತೆ ನಡೆಸಿದ್ದು, ತನ್ನ ಕಾರ್ಯಾಚರಣೆಯನ್ನು ಹಂತ ಹಂತವಾಗು ಹೆಚ್ಚಿಸಿದೆ, ನಗರದಲ್ಲಿ ವಯಸ್ಕರು ಮತ್ತು ಮಕ್ಕಳ ಹಾಸಿಗೆಗಳ ಹೆಚ್ಚಿಸಿದೆ. ಈ ಕಾರ್ಯಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್​ಮುಂಬೈ ಮಹಾನಗರ ಪಾಲಿಕೆ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಸಹಕಾರ ನೀಡಿದೆ.

    ಮಕ್ಕಳು ಮತ್ತು ಮಧ್ಯ ವಯಸ್ಕರಲ್ಲಿ ಕೋವಿಡ್​ ಸೋಂಕು ಹೆಚ್ಚುತ್ತಿರುವುದನ್ನು ಗಮನಿಸಿದ ಆರ್ ​ಎಫ್ ​ಎಚ್​ ಮಕ್ಕಳ ಮತ್ತು ವಿಶೇಷ ಮಕ್ಕಳ ಕಾಳಜಿಗೆ ಹೆಚ್ಚಿನ ಸೌಲಭ್ಯಕ್ಕೆ ಮುಂದಾಗಿದೆ. ವರ್ಲಿಯಲ್ಲಿ ನ್ಯಾಷನಲ್​ ಸ್ಪೋರ್ಟ್​ ಕ್ಲಬ್​ ಆಫ್​ ಇಂಡಿಯಾದಲ್ಲಿ ಇದಕ್ಕಾಗಿ 650 ಹಾಸಿಗೆಗಳ ಸೌಲಭ್ಯ ನೀಡಿದೆ, ಇದರಲ್ಲಿ 100 ಬೆಡ್​ಗಳನ್ನು ಸೋಂಕು ಲಕ್ಷಣ ರಹಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ, ಇನ್ನು 20 ಬೆಡ್​ಗಳನ್ನು ಐಸಿಯುಗೆ ಮೀಸಲಿರಲಾಗಿದೆ. ಐಸಿಯು ಬೆಡ್​ಗಳು ವಯಸ್ಕರು ಮತ್ತು ಮಕ್ಕಳ ವೆಂಟಿಲೇಟರ್​ ಮಾನಿಟರ್​ ಸೌಲಭ್ಯವನ್ನು ಹೊಂದಿದ್ದು, ಡಯಾಲಿಸಿಸ್​ ಮತ್ತು ಆಕ್ಸಿಜನ್​ ಪೂರೈಕೆ ಸೌಲಭ್ಯವನ್ನು ಹೊಂದಿದೆ.



    ಚಿಕಿತ್ಸೆಗಾಗಿ ವೈದ್ಯರು, ನರ್ಸ್​ ವೈದ್ಯಕೀಯ ವೃತ್ತಿಪರರು ಸೇರಿದಂತೆ ಈಗಾಗಲೇ 500 ಕ್ಕೂ ಹೆಚ್ಚು ಆರೋಗ್ಯ ಮುಂಚೂಣಿ ಕಾರ್ಯಕರ್ತರ ತಂಡ ಸಜ್ಜಾಗಿದ್ದಾರೆ. ಇನ್ನು ಈ ಯೋಜನೆಗಾಗಿ ಬೆಡ್​, ಮಾನಿಟರ್​, ಮಕ್ಕಳು ಮತ್ತು ವಯಸ್ಕ್​ ವೆಂಟಿಲೇಟರ್​, ವೈದ್ಯಕೀಯ ಉಪಕರಣ ಸೇರಿದಂತೆ ಇನ್ನಿತರ ವೆಚ್ಚಗಳನ್ನು ರಿಲಯನ್ಸ್​ ಫೌಂಡೇಶನ್​ ಭರಿಸುತ್ತಿದೆ. ಎನ್​ಎಸ್​ಸಿಐ ಅನ್ನು ದಾಖಲಾಗುವ ಎಲ್ಲರಿಗೂ ರಿಲಯನ್ಸ್​ ಫೌಂಡೇಶನ್​ ಉಚಿತವಾಗಿ ಭರಿಸುತ್ತಿದೆ.



    ಈ ಕುರಿತು ಮಾತನಾಡಿರುವ ರಿಲಯನ್ಸ್​ ಫೌಂಡೇಷನ್​ ಸಂಸ್ಥಾಪಕರುಮ ಮುಖ್ಯಸ್ಥರು ಆದ ನೀತಾ ಅಂಬಾನಿ, ಸಂಕಷ್ಟದಲ್ಲಿರುವ ಜನರ ನೋವು, ದುಃಖಗಳಿಗೆ ನಮ್ಮ ಹೃದಯಗಳು ಮಿಡಿಯುತ್ತವೆ, ಭಾರತವನ್ನು ಬೆಂಬಲಿಸಿ, ಬಲಪಡಿಸಲು ನಾವು ಎಲ್ಲಾ ಸಹಕಾರ ನೀಡುತ್ತವೆ. ದೇಶ ಕೋವಿಡ್​ ಬಿಕ್ಕಟ್ಟಿನಲ್ಲಿದ್ದು ರಿಲಯನ್ಸ್​ ಫೌಂಡೇಶ್ವನ್​ ನಿಯಂತರವಾಗಿ ಬೆಡ್​, ಆಕ್ಸಿಜನ್​ ಸೌಲಭ್ಯ ಕಲ್ಪಿಸಲು ಕಾರ್ಯ ನಿರ್ವಹಿಸುತ್ತದೆ. ಕೋವಿಡ್​ ಬಿಕ್ಕಟ್ಟಿನಲ್ಲಿ ಸ್ವಾರ್ಥ ರಹಿತವಾಗಿ ಅವಿರಹಿತ ಕೆಲಸ ನಡೆಸುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇವೆ. ಒಗ್ಗಟ್ಟಾಗಿ ನಾವು ಈ ಸವಾಲಿನ ವಿರುದ್ಧ ಹೋರಾಡಿದಾಗ ಜಯ ಸಾಧಿಸಬಹುದು ಎಂದಿದ್ದಾರೆ

    ಇದನ್ನು ಓದಿ: ಪ್ರೀತಿಪಾತ್ರರ ಎಷ್ಟು ಜನರ ಜೀವ ಬಲಿತೆಗೆದುಕೊಂಡು ಬಿಟ್ಟಿತು ಈ ಕೊರೋನಾ; ಭಾವುಕರಾದ ಮೋದಿ

    ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನ ದಿ ಟ್ರೈಡೆಂಟ್​ ಹೋಟೆಲ್​ ಕೂಡ ಸ್ಟೇಪ್​ ಡೌನ್​ ಆಸ್ಪತ್ರೆಯಾಗಿ ಮಾಡಿದ್ದು, ಇಲ್ಲಿ ಆರ್​ಎಫ್​ಹೆಚ್​ 100 ಬೆಡ್​ಗಳ ಸೌಲಭ್ಯ ನೀಡಿದ್ದು, ಸೌಮ್ಯ, ಮಧ್ಯಮ ಮತ್ತು ಲಕ್ಷಣ ರಹಿತ ರೋಗಿಗಳಿಗೆ ಬಿಎಂಸಿ ನೀಡಿರುವ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ

    ಕಳೆದ ವರ್ಷ ಕೂಡ ರಿಲಯನ್ಸ್​ ಫೌಂಡೇಶನ್​ ಸೆವೆನ್​ ಹಿಲ್ಸ್​ ಆಸ್ಪತ್ರೆಯಲ್ಲಿ 225 ಬೆಡ್​ಗಳ ಮೊಲದ ಕೋವಿಡ್​ ಆಸ್ಪತ್ರೆಯನ್ನು ಸ್ಥಾಪಿಸಲು ಸಹಾಯ ಮಾಡಿತ್ತು. 225 ಬೆಡ್​ಗಳ ಈ ಸೌಲಭ್ಯದಲ್ಲಿ ಇತ್ತೀಚೆಗೆ 45 ಐಸಿಯು ಬೆಡ್​ಗಳ ಸೇವೆಯನ್ನು ನೀಡಲಾಗುತ್ತಿದೆ. ಪ್ರತಿ ನಿತ್ಯ ಆರ್​ಎಫ್​ಎಚ್​ 2. 500ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.
    Published by:Seema R
    First published: