• Home
  • »
  • News
  • »
  • coronavirus-latest-news
  • »
  • Reliance: ಕೋವಿಡ್​ ಬಿಕ್ಕಟ್ಟಿನಲ್ಲಿ ಸಹೋದ್ಯೋಗಿಗಳ ಹಿತಕಾಯಲು ಮುಂದಾದ ರಿಲಾಯನ್ಸ್​; ಸಾವನ್ನಪ್ಪಿದವರ ಕುಟುಂಬಕ್ಕೆ 10 ಲಕ್ಷ ಪರಿಹಾರ

Reliance: ಕೋವಿಡ್​ ಬಿಕ್ಕಟ್ಟಿನಲ್ಲಿ ಸಹೋದ್ಯೋಗಿಗಳ ಹಿತಕಾಯಲು ಮುಂದಾದ ರಿಲಾಯನ್ಸ್​; ಸಾವನ್ನಪ್ಪಿದವರ ಕುಟುಂಬಕ್ಕೆ 10 ಲಕ್ಷ ಪರಿಹಾರ

ರಿಲಯನ್ಸ್​ ಇಂಡಸ್ಟ್ರೀಸ್

ರಿಲಯನ್ಸ್​ ಇಂಡಸ್ಟ್ರೀಸ್

ರಿಲಾಯನ್ಸ್​ ಗ್ರೂಪ್​ ಕುಟುಂಬದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೋದ್ಯೋಗಿಗಳ ಕುಟುಂಬಕ್ಕೆ ಈಗ ರಿಲಾಯನ್ಸ್​ ಫೌಂಡೇಶನ್​ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ.

  • Share this:

    ಜಗತ್ತನ್ನೇ ಕಾಡುತ್ತಿರುವ ಏಕೈಕ ಶತ್ರು ಈಗ ಕೋವಿಡ್​ ಸೋಂಕಾಗಿದೆ. ಭಾರತದಲ್ಲಿ ಎರಡನೇ ಅಲೆ ಕೋವಿಡ್​ ಸಾಕಷ್ಟು ಹಾನಿ ಮಾಡಿದೆ. ಎರಡನೇ ಅಲೆ ಸೋಂಕಿನ ತೀವ್ರತೆಗೆ ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಸೋಂಕಿನಿಂದಾಗಿ ಕುಟುಂಬದ ಆಧಾರದ ಸ್ತಂಬವಾಗಿರುವರನ್ನು ಕಳೆದುಕೊಂಡು ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಪ್ರೀತಿ ಪಾತ್ರ ಸಹೋದ್ಯೋಗಿ, ಸ್ನೇಹಿತರನ್ನು ಕಳೆದುಕೊಂಡ ನೋವು ಅಪಾರ. ಈ ನೋವನ್ನು ಭರಿಸುವ ಶಕ್ತಿ ಯಾರಿಗೂ ಇರುವುದಿಲ್ಲ. ಆದರೆ, ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ನೆರವಾಗಿ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ಇದೇ ಕಾರಣಕ್ಕೆ ರಿಲಾಯನ್ಸ್​ ಈಗ ಮುಂದಾಗಿದೆ.


    ಕೋವಿಡ್​ 19 ಹಿನ್ನಲೆ ತಮ್ಮ ಸಹೋದ್ಯೋಗಿಗಳ ಆರೋಗ್ಯದ ಬಗ್ಗೆ ಹೆಚ್ಚಿ ಕಾಳಜಿಗೆ ರಿಲಾಯನ್ಸ್​ ಮುಂದಾಗಿದೆ. ಇದೇ ವೇಳೆ ಈ ಸೋಂಕಿನಿಂದ ಕಳೆದುಕೊಂಡ ಸಹೋದ್ಯೋಗಿಗಳ ಕುಟುಂಬಕ್ಕೂ ಆರ್ಥಿಕ ಸಹಾಯಕ್ಕೆ ಮುಂದಾಗಿದೆ. ರಿಲಾಯನ್ಸ್​ ಗ್ರೂಪ್​ ಕುಟುಂಬದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೋದ್ಯೋಗಿಗಳ ಕುಟುಂಬಕ್ಕೆ ಈಗ ರಿಲಾಯನ್ಸ್​ ಫೌಂಡೇಶನ್​ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ. ರಿಲಾಯನ್ಸ್​ ಗ್ರೂಪ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿ ಕೋವಿಡ್​ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೀಡಲು ರಿಲಾಯನ್ಸ್​ ನಿರ್ಧರಿಸಿದೆ. ಸಾವನ್ನಪ್ಪಿದ ಉದ್ಯೋಗಿಯ ನಾಮಿನಿಗೆ 10 ಲಕ್ಷ ಹಣವನ್ನು ನೇರವಾಗಿ ಪಾವತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.


    ಇದೇ ವೇಳೆ ಎಲ್ಲರಿಗೂ ಸುರಕ್ಷತೆ ಇರುವಂತೆ ಅವರು ಕೋರಿದ್ದಾರೆ.  ಸಾವನ್ನಪ್ಪಿದ ಉದ್ಯೋಗಿಯ ಕೊನೆಯದಾಗಿ ಪಡೆದ ವೇತನವನ್ನು ಐದು ವರ್ಷಗಳ ಕಾಲ ಅವರ ಕುಟುಂಬಕ್ಕೆ ನೀಡಲಾಗುವುದು. ಸಾವನ್ನಪ್ಪಿದ ಕುಟುಂಬದ ಮಕ್ಕಳ ಡಿಗ್ರಿ ಪದವಿ ಹೊಂದುವವರೆಗೂ ಟ್ಯೂಷನ್​ ಫೀಸ್​, ಹಾಸ್ಟೆಲ್​ ವ್ಯವಸ್ಥೆ, ಬುಕ್​ ಫೀಸ್​ಗಳನ್ನು ಶೇ 100ರವರೆಗೂ ಭರ್ತಿ ಮಾಡಲಾಗುವುದು.  ಅಲ್ಲದೇ ಮಕ್ಕಳು ಪದವಿ ಪಡೆಯುವವರೆಗೂ ಕುಟುಂಬದ ಪೋಷಕರ, ಹೆಂಡತಿ ಅಥವಾ ಗಂಡ ಹಾಗೂ ಮಕ್ಕಳ ಆರೋಗ್ಯ ವಿಮೆಯನ್ನು ಶೇ 100ರವರೆಗೆ ಭರಿಸಲಾಗುವುದು ಎಂದಿದ್ದಾರೆ


    ರಿಲಾಯನ್ಸ್​ ಸಂಸ್ಥೆಗೆ ನಮ್ಮ ಸಹೋದ್ಯೋಗಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಉಚಿತ ಲಸಿಕೆ ಅಭಿಯಾನ ನಡೆಸಲಾಗಿದೆ. ಇದರಿಂದ ಮೂರ ಲಕ್ಷ ಉದ್ಯೋಗಿಗಳು ಲಾಭ ಪಡೆದಿದ್ದಾರೆ.  ಅವರಿಗೆ ನಮ್ಮ ಸಹಾಯ ಸದಾ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.


    Disclosure: Network18, the parent company of News18 , is controlled by Independent Media Trust, of which Reliance Industries is the sole beneficiary.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು