HOME » NEWS » Coronavirus-latest-news » RELEASE OF UNLOCKED 4 GUIDELINES FROM KARNATAKA STATE FURTHER IMMUNITY TO THE ECONOMY MAK

ಕೇಂದ್ರದ ಬೆನ್ನಿಗೆ ರಾಜ್ಯದಿಂದ ಅನ್‌ಲಾಕ್‌-4 ಮಾರ್ಗಸೂಚಿ ಬಿಡುಗಡೆ; ಆರ್ಥಿಕತೆಗೆ ಮತ್ತಷ್ಟು ವಿನಾಯಿತಿ

ಕಳೆದ ಮೂರು ತಿಂಗಳಿನಿಂದ ಅನ್‌ಲಾಕ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಹ ಶಾಲಾ-ಕಾಲೇಜುಗಳು ಚಿತ್ರಮಂದಿರ ಸೇರಿದಂತೆ ಅನೇಕ ಸೇವೆಗಳಗೆ ನಿಷೇಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 01 ರಿಂದ ಅನ್‌ಲಾಕ್-04 ಆರಂಭವಾಗಲಿದ್ದು, ಕೆಲವು ನಿಬಂಧನೆಗಳ ಮೇಲೆ ಶಾಲಾ-ಕಾಲೇಜುಗಳನ್ನು ತೆರೆಯಲು ಹಾಗೂ ಮೆಟ್ರೋ ಸೇವೆಗೂ ಅವಕಾಶ ನೀಡಿರುವುದು ವಿಷೇಷ.

news18-kannada
Updated:August 31, 2020, 3:09 PM IST
ಕೇಂದ್ರದ ಬೆನ್ನಿಗೆ ರಾಜ್ಯದಿಂದ ಅನ್‌ಲಾಕ್‌-4 ಮಾರ್ಗಸೂಚಿ ಬಿಡುಗಡೆ; ಆರ್ಥಿಕತೆಗೆ ಮತ್ತಷ್ಟು ವಿನಾಯಿತಿ
ಸಾಂದರ್ಭಿಕ ಚಿತ್ರ.
 • Share this:
ಬೆಂಗಳೂರು (ಆಗಸ್ಟ್ 31); ಕೇಂದ್ರ ಸರ್ಕಾರ ಅನ್ಲಾಕ್-04 ಮಾರ್ಗಸೂಚಿ ಬಿಡುಗಡೆ ಮಾಡಿದ ಬೆನ್ನಿಗೆ ರಾಜ್ಯ ಸರ್ಕಾರ ಇಂದು ರಾಜ್ಯದ ಅನ್ಲಾಕ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ನೀಡಿರುವ ಹಲವಾರು ವಿನಾಯಿತಿಗಳಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶಗಳಲ್ಲಿನ ಕಾರ್ಯಚಟುವಟಿಕೆಗೆ ಮತ್ತಷ್ಟು ವಿನಾಯಿತಿ ನೀಡುವ ಮೂಲಕ ಆರ್ಥಿಕತೆಗೆ ಜೀವ ತುಂಬಲು ರಾಜ್ಯ ಸರ್ಕಾರ ಮುಂದಾಗಿದೆ.

ಮಾರಕ ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶದ ಮೇಲೆ ಮಾರ್ಚ್.25 ರಂದು ಲಾಕ್‌ಡೌನ್ ಹೇರಿತ್ತು. ಆದರೂ, ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಳೆದ ಮೂರು ತಿಂಗಳಿನಿಂದ ಹಂತ ಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆಯನ್ನು ಆರಂಭಿಸಿವೆ. ಇದೀಗ ನಾಲ್ಕನೇ ಹಂತದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಬೆನ್ನಿಗೆ ಇಂದು ರಾಜ್ಯ ಸರ್ಕಾರವೂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕಳೆದ ಮೂರು ತಿಂಗಳಿನಿಂದ ಅನ್‌ಲಾಕ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಹ ಶಾಲಾ-ಕಾಲೇಜುಗಳು ಚಿತ್ರಮಂದಿರ ಸೇರಿದಂತೆ ಅನೇಕ ಸೇವೆಗಳಗೆ ನಿಷೇಧ ಹೇರಲಾಗಿತ್ತು. ಇದೀಗ ಸೆಪ್ಟೆಂಬರ್ 01 ರಿಂದ ಅನ್‌ಲಾಕ್-04 ಆರಂಭವಾಗಲಿದ್ದು, ಕೆಲವು ನಿಬಂಧನೆಗಳ ಮೇಲೆ ಶಾಲಾ-ಕಾಲೇಜುಗಳನ್ನು ತೆರೆಯಲು ಹಾಗೂ ಮೆಟ್ರೋ ಸೇವೆಗೂ ಅವಕಾಶ ನೀಡಿರುವುದು ವಿಷೇಷ. ಹಾಗಾದರೆ ಅನ್‌ಲಾಕ್‌ - 4 ರಾಜ್ಯ ಮಾರ್ಗಸೂಚಿಯಲ್ಲಿ ಏನಿದೆ..? ಏನಿಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಯಾವುದಕ್ಕೆ ಅವಕಾಶ?

 •  ಶಾಲಾ ಕಾಲೇಜು ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಸೆಪ್ಟೆಂಬರ್‌ 30ರ ವರೆಗೆ ಮುಚ್ಚಿರುವುದು ಮುಂದುವರೆಯಲಿದೆ. ಆದರೆ, ಆನ್‌ಲೈನ್‌ ಕಲಿಕೆ ಮುಂದುವರೆಯಲಿದೆ. ಶೇಕಡಾ 50% ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು.

 • 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಭೇಟಿ ನೀಡಬಹುದು.
 • ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗೆ ಭೇಟಿ ನೀಡಬಹುದು.

 • ಕಂಟೈನ್ಮೆಂಟ್ ಝೋನ್ ಹೊರೆತಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

 • ಕೌಶಲ್ಯ ಅಥಾವ ಉದ್ಯೋಗ ತರಬೇತಿಗಳಿಗೆ ಅನುಮತಿ.

 • 1 ರಿಂದ 9ರ ವರೆಗಿನ ಶಾಲೆಗಳಿಗೆ ಸೆಪ್ಟೆಂಬರ್ 30 ವರೆಗೂ ನಿರ್ಬಂಧ.

 • ಆನ್‌ಲೈನ್ ತರಗತಿಗಳನ್ನು ಮುಂದುವರಿಸಬಹುದು.

 • ಸಂಶೋಧನೆ ( ಪಿಎಚ್ ಡಿ ) ತಾಂತ್ರಿಕ ಮತ್ತು ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳು ನಡೆಸಲು ಒಪ್ಪಿಗೆ.

 • ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ.

 • ಸೆಪ್ಟೆಂಬರ್ 07 ರಿಂದ ಮೆಟ್ರೋ ಸಂಚಾರ ಆರಂಭ.

 • ಅಂತರರಾಜ್ಯ ಮತ್ತು ರಾಜ್ಯದೊಳಿಗೆ ಸಂಚಾರಿಸಲು ಮುಕ್ತ ಅವಕಾಶ.

 • ಇನ್ನು ಮುಂದೆ ಯಾವುದೇ ಇ ಪಾಸ್ ಗಳ ಅವಶ್ಯಕತೆ ಇಲ್ಲ

 • ಗರಿಷ್ಠ 100 ಜನ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ರಾಜಕೀಯ, ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಬಹುದು.


ಏನೇನು ಇರುವುದಿಲ್ಲ?

 • ಸಿನಿಮಾ ಹಾಲ್, ಈಜುಕೊಳಗಳಿಗೆ ಅವಕಾಶ ಇಲ್ಲ.

 • ಮನೋರಂಜನಾ ಪಾರ್ಕ್ ಗಳಿಗೆ ಅವಕಾಶ ಇಲ್ಲ.

 • ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ,

 • ಕೇವಲ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಮಾತ್ರ ಅವಕಾಶ

 • ಸೆಪ್ಟೆಂಬರ್ 30 ವರೆಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮೂಲಭೂತ ಅವಶ್ಯಕತೆಗಳಿಗೆ ಮಾತ್ರ ಅವಕಾಶ.

 • ಕಂಟೈನ್ಮೆಂಟ್ ಝೋನ್ ಹೊರೆತಾದ ಪ್ರದೇಶದಲ್ಲಿ ರಾಜ್ಯಸರ್ಕಾರ ಲಾಕ್‌ಡೌನ್ ಮಾಡುವಂತಿಲ್ಲ.

 • ಒಂದು ವೇಳೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮಾಡಬೇಕು.

Published by: MAshok Kumar
First published: August 31, 2020, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories